Advertisement

ಯೋಗ-ಧ್ಯಾನದಿಂದ ಸದೃಢ ಆರೋಗ್ಯ

05:21 PM May 02, 2019 | Naveen |

ಚಿತ್ರದುರ್ಗ: ಹಿತಮಿತವಾದ ಆಹಾರದ ಜೊತೆಯಲ್ಲಿ ಯೋಗ, ಧ್ಯಾನಗಳ ಮೂಲಕ ಆರೋಗ್ಯ ವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಗ್ರಾಮ ಪಂಚಾಯತ್‌ ಸದಸ್ಯ ರಂಗಪ್ಪ ಹೇಳಿದರು.

Advertisement

ತಾಲೂಕಿನ ಆಯಿತೋಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪತಂಜಲಿ ಭಾರತ್‌ ಸ್ವಾಭಿಮಾನ್‌ ಟ್ರಸ್ಟ್‌, ಪತಂಜಲಿ ಯೋಗ ಪ್ರಚಾರಕ ಪ್ರಕಲ್ಪ ಹರಿದ್ವಾರ ಹಾಗೂ ಆಯಿತೋಳು ಗ್ರಾಮಸ್ಥರ ಸಹಯೋಗದೊಂದಿಗೆ ಏರ್ಪಡಿಸದಲಾಗಿರುವ ಐದು ದಿನಗಳ ಉಚಿತ ಯೋಗ ತರಬೇತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಳಲ್ಲೂ ಆಹಾರ ಪದ್ಧತಿ, ಜನರ ದಿನಚರಿ, ಜೀವನ ಶೈಲಿ ಎಲ್ಲವೂ ಬದಲಾಗುತ್ತಿದೆ. ಶ್ರಮ ಸಂಸ್ಕೃತಿ ಕಡಿಮೆಯಾಗುತ್ತಿದೆ. ಹಾಗಾಗಿ ಮಾನವನಿಗೆ ಸಾಕಷ್ಟು ರೋಗ ಬಾಧೆ ಕಾಡುತ್ತಿದೆ. ಶ್ರಮ ಸಂಸ್ಕೃತಿ ಅಳವಡಿಸಿಕೊಂಡರೆ ಆರೋಗ್ಯಪೂರ್ಣ ಜೀವನ ನಡೆಸಬಹುದಾಗಿದೆ ಎಂದರು.

ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಮಾತನಾಡಿ, ಯೋಗಾಸನ ಮಾಡುವುದರಿಂದ ಸೊಂಟ ಮತ್ತು ನಮ್ಮ ದೇಹದ ಸುತ್ತಳತೆಯಲ್ಲಿ ಗಮನಾರ್ಹ ಇಳಿಕೆ ಉಂಟಾಗುತ್ತದೆ. ದೇಹದಲ್ಲಿರುವ ಇನ್ಸುಲಿನ್‌ ಪ್ರಮಾಣದಲ್ಲಿಯೂ ಬದಲಾವಣೆ ಉಂಟಾಗುತ್ತದೆ ಎಂದು ತಿಳಿಸಿದರು.

ಯೋಗ ಗುರು ರವಿ ಕೆ. ಅಂಬೇಕರ್‌ ಮಾತನಾಡಿ, ಚಿತ್ರದುರ್ಗ ಜಿಲ್ಲೆಯನ್ನು ಔಷಧ ಮುಕ್ತ ಮತ್ತು ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಲುವಾಗಿ ಜಿಲ್ಲೆಯಾದ್ಯಂತ ಪ್ರತಿ ಗ್ರಾಮಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2017ರ ಅಕ್ಟೋಬರ್‌ನಿಂದ ಆರಂಭಿಸಲಾದ ಯೋಗ ಅಭಿಯಾನದಲ್ಲಿ ಸುಮಾರು 48 ಹಳ್ಳಿಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಜನರಿಗೆ ಯೋಗ ಕಲಿಸಿಕೊಡಲಾಗಿದೆ. ಯೋಗ ಕಲಿತವರು ಈಗ ತಾವೇ ಮನೆಯಲ್ಲಿ ಅಭ್ಯಾಸ ಮಾಡಿಕೊಂಡು ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ಮಂದಿನ ದಿನಗಳಲ್ಲಿ ನಾವು ಎಲ್ಲೆಲ್ಲಿ ಶಿಬಿರಗಳನ್ನು ಆಯೋಜಿಸುತ್ತೇವೆಯೋ ಅಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಲಾಭವನ್ನು ಪಡೆಯಬೇಕೆಂದು ಮನವಿ ಮಾಡಿದರು.

Advertisement

ಆಯಿತೋಳು ಗ್ರಾಮ ಪಂಚಾಯತ್‌ ಸದಸ್ಯೆ ಜಿ.ಸಿ. ಕೋಮಲ ಕ್ಯಾತಪ್ಪ, ಕಲಾವಿದರಾದ ಮಾರುತಿ, ವಿರೂಪಾಕ್ಷಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರದುರ್ಗ ಜಿಲ್ಲೆಯನ್ನು ಔಷಧ ಮುಕ್ತ ಮತ್ತು ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಸಲುವಾಗಿ ಜಿಲ್ಲೆಯಾದ್ಯಂತ ಪ್ರತಿ ಗ್ರಾಮಗಳಲ್ಲಿ ಉಚಿತ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2017ರ ಅಕ್ಟೋಬರ್‌ನಿಂದ ಆರಂಭಿಸಲಾದ ಯೋಗ ಅಭಿಯಾನದಲ್ಲಿ ಸುಮಾರು 48 ಹಳ್ಳಿಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಜನರಿಗೆ ಯೋಗ ಕಲಿಸಿಕೊಡಲಾಗಿದೆ. •ರವಿ ಕೆ. ಅಂಬೇಕರ್‌ ಯೋಗ ಗುರು

Advertisement

Udayavani is now on Telegram. Click here to join our channel and stay updated with the latest news.

Next