Advertisement

ರೇಬಿಸ್‌ನಿಂದ ಪ್ರತಿ ವರ್ಷ 70 ಸಾವಿರ ಜನ ಬಲಿ

06:07 PM Sep 27, 2019 | Naveen |

ಚಿತ್ರದುರ್ಗ: ನಾಯಿ ಸೇರಿದಂತೆ ಯಾವುದೇ ಪ್ರಾಣಿಯ ಕಡಿತವನ್ನು ನಿರ್ಲಕ್ಷಿಸದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಜ್ಞ ವೈದ್ಯ ಡಾ|
ಗಂಗಾಧರ ನಿಡಘಟ್ಟ ಹೇಳಿದರು.

Advertisement

ವಿಶ್ವ ರೇಬಿಸ್‌ ದಿನಾಚರಣೆ ಅಂಗವಾಗಿ ಪ್ರಾಣಿಜನ್ಯ ರೋಗ- ರೇಬಿಸ್‌ (ಹುಚ್ಚುನಾಯಿ ರೋಗ) ಕುರಿತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಗುರುವಾರ ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ರೇಬಿಸ್‌ ಅಥವಾ ಹುಚ್ಚುನಾಯಿ ರೋಗಕ್ಕೆ ಒಳಗಾಗುವ ವ್ಯಕ್ತಿಗೆ ಬಹುತೇಕ ಸಾವು ಸಂಭವಿಸುತ್ತದೆ. ರೇಬಿಸ್‌ ಭಯಾನಕ ರೋಗವಾಗಿದ್ದು, ಖ್ಯಾತ ವಿಜ್ಞಾನಿ ಲೂಯಿಸ್‌ ಪಾಶ್ಚರ್‌ರವರು ರೇಬಿಸ್‌ ನಿರೋಧಕ ಲಸಿಕೆಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ. ಅದಕ್ಕಾಗಿ ಅವರನ್ನು ಸ್ಮರಿಸಬೇಕು ಎಂದರು.

ರೇಬಿಸ್‌ನಿಂದ ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು 70 ಸಾವಿರ ಜನರು ಸಾವಿಗೀಡಾಗುತ್ತಿದ್ದಾರೆ. ಜಗತ್ತಿನಲ್ಲಿಯೇ ಭಾರತದಲ್ಲಿ ಈ ರೋಗದ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕ ಮತ್ತು ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಫ್ರಾನ್ಸ್‌, ಅರ್ಜೆಂಟೈನಾ ದೇಶಗಳಲ್ಲಿ ಈ ರೋಗದ ಪ್ರಮಾಣ ಶೂನ್ಯ. ಜಪಾನ್‌ನಲ್ಲಿ ಮಕ್ಕಳ ಸಂಖ್ಯೆಗಿಂತ ನಾಯಿಗಳ ಸಂಖ್ಯೆಯೇ ಹೆಚ್ಚಾಗಿದ್ದರೂ, ಅಲ್ಲಿ ರೇಬೀಸ್‌ ಪ್ರಕರಣಗಳು ಇಲ್ಲವೇ ಇಲ್ಲ. ಮುಂದುವರೆದ ದೇಶಗಳಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಇದೆ ಎಂದು ತಿಳಿಸಿದರು.

ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಅಲ್ಲದೆ ಬೀದಿನಾಯಿಗಳ ವಿಪರೀತ ಹಾವಳಿ ಇದೆ. ಮಾಂಸದಂಗಡಿಗಳ ಅಸಮರ್ಪಕ ನಿರ್ವಹಣೆ ಹಾಗೂ ರೇಬಿಸ್‌ ಕುರಿತು ಅರಿವಿಲ್ಲದೇ ಇರುವುದು ರೇಬಿಸ್‌ ಹೆಚ್ಚಳಕ್ಕೆ ಕಾರಣ. ಬೆಂಗಳೂರು ನಗರ ಮುಂದುವರೆದಿದ್ದರೂ ಅಲ್ಲಿ ನಾಯಿ ಕಡಿತ ನಿಯಂತ್ರಿಸಲು ಇನ್ನೂ ಸಾಧ್ಯವಾಗಿಲ್ಲ. ಮಕ್ಕಳು, ವೃದ್ಧರ ಮೇಲೆ ನಿತ್ಯ ಕನಿಷ್ಠ 100 ನಾಯಿ ಕಡಿತ ಪ್ರಕರಣ ವರದಿಯಾಗುತ್ತಿರುವುದು ವಿಷಾದನೀಯ
ಸಂಗತಿ ಎಂದರು.

Advertisement

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಮಾತನಾಡಿ, ನಾಯಿಗಳನ್ನು ಸಾಕುವವರು ಕಾಲ ಕಾಲಕ್ಕೆ ಲಸಿಕೆ ಹಾಗೂ ಚಿಕಿತ್ಸೆ ಕೊಡಿಸುವುದನ್ನು ಮರೆಯಬಾರದು. ಜಿಲ್ಲೆಯಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಸರ್ವೇಕ್ಷಣಾಧಿ ಕಾರಿ ಡಾ| ರೇಣುಪ್ರಸಾದ್‌ ಮಾತನಾಡಿದರು. ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ| ಕೃಷ್ಣಪ್ಪ, ಕೃಷಿ ತಂತ್ರಜ್ಞರ ಸಂಸ್ಥೆ ಉಪಾಧ್ಯಕ್ಷ ಹನುಮಂತ ರಾಯರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next