Advertisement

ಜನರಲ್ಲಿ ವೈಯಕ್ತಿಕ ಸ್ವಚ್ಛತೆ ಅರಿವು ಮೂಡಿಸಿ

01:17 PM Mar 19, 2020 | Naveen |

ಚಿತ್ರದುರ್ಗ: ಕೊರೊನಾ ವೈರಸ್‌ (ಕೋವಿಡ್‌-19) ಸೋಂಕು ಹರಡದಂತೆ ತಡೆಗಟ್ಟಲು ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸ್ವಚ್ಛ ತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಹಶೀಲ್ದಾರ್‌ ವೆಂಕಟೇಶಯ್ಯ, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ತಾಲೂಕು ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ಬುಧವಾರ ಕೊರೊನಾ ವೈರಸ್‌ ಸೋಂಕು ತಡೆ ಹಿನ್ನೆಲೆಯಲ್ಲಿ ನಡೆದ ಟಾಸ್ಕ್ ಫೋರ್ಸ್  ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಜತೆಗೆ ಇತರೆ ರೋಗಗಳು ಹರಡದಂತೆ ತಡೆಗಟ್ಟಲು ಒಳಚರಂಡಿ ಸ್ವಚ್ಛ ತೆ, ಔಷಧ ಸಿಂಪಡಣೆ ಮಾಡಬೇಕು. ಸ್ವಚ್ಛತೆ ಕುರಿತು ಕೈಗೊಂಡ ಕ್ರಮಗಳ ಕುರಿತು ನಿತ್ಯವೂ ವರದಿ ಸಲ್ಲಿಸಬೇಕೆಂದರು.

ತಾಲೂಕಿನಲ್ಲಿ ಯಾರಾದರೂ ವಿದೇಶದಿಂದ ಆಗಮಿಸಿದ್ದರೆ ಬಗ್ಗೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ದಿನ ವರದಿ ಮಾಡಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಗ್ರಾಮ ಮಟ್ಟದಲ್ಲಿ ಪಿಡಿಒ, ಗ್ರಾಮಲೆಕ್ಕಾ ಧಿಕಾರಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕಂದಾಯ ನಿರೀಕ್ಷಕರನ್ನೊಳಗೊಂಡ ತಂಡ ರಚಿಸಿದ್ದು ಆಯಾ ದಿನದ ವಿದ್ಯಮಾನದ ಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ವಿ. ಗಿರೀಶ್‌ ಮಾತನಾಡಿ, ಕೊರೊನಾ ವೈರಸ್‌ ಕುರಿತು ಜನರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಮಾಸ್ಕ್  ಧರಿಸುವ ಅವಶ್ಯಕತೆ ಇಲ್ಲ. ನೆಗಡಿ, ಕೆಮ್ಮ, ಜ್ವರದಿಂದ ಬಳಲುತ್ತಿರುವವರು ಮಾತ್ರ ಮಾಸ್ಕ್ಧ ರಿಸಬಹುದು. ಕೆಮ್ಮ, ನೆಗಡಿ ಬಂದರೆ ಮನೆಯಲ್ಲಿಯೇ ಬೇರೆ ಕೊಠಡಿಯಲ್ಲಿ ಪ್ರತ್ಯೇಕವಾಗಿರಬೇಕು. ಕೊರೊನಾ ಹೆಚ್ಚು ಆತಂಕವಿಲ್ಲದ ಸೋಂಕು. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ಪದೇ ಪದೇ ಕೈಗಳನ್ನು ಸ್ವತ್ಛಗೊಳಿಸಬೇಕು. ಕಣ್ಣು, ಕಿವಿ, ಮೂಗು, ಬಾಯಿಯನ್ನು ಕೈಗಳಿಂದ ಮುಟ್ಟಿಕೊಳ್ಳಬಾರದು. ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಬಳಸಬೇಕು. ಕಂಡ ಕಂಡಲ್ಲಿ ಉಗುಳಬಾರದು ಎಂದರು.

Advertisement

ಸಂಪನ್ಮೂಲ ವ್ಯಕ್ತಿ ಡಾ| ಭಾಗ್ಯಶ್ರೀ ಮಾತನಾಡಿ, ಕೋವಿಡ್‌-19 ಕಳೆದ ವರ್ಷ ಪತ್ತೆಯಾದ ಸೋಂಕು. ಕೊರೊನಾ ವೈರಸ್‌ಗೆ ಭಯ ಬೇಡ. ವೈಯಕ್ತಿಕ ಸ್ವಚ್ಛತೆ ಮುಖ್ಯ. ಕೆಲವರಲ್ಲಿ ಕೊರೊನಾ ಕುರಿತು ತಪ್ಪು ಕಲ್ಪನೆಯಿದೆ.

ಜಿಲ್ಲೆ ಹೆಚ್ಚು ಉಷ್ಣತೆ ಇರುವ ಪ್ರದೇಶ ಎಂದು ಜನ ಸೋಂಕು ನಿವಾರಣೆ ಕುರಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಬಾರದು. ಆಗಾಗ ಸಾಬೂನಿನಿಂದ ಕೈತೊಳೆಯಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣ ನಾಯ್ಕ ಮಾತನಾಡಿ, ನ್ಯಾಯಬೆಲೆ ಅಂಗಡಿಗಳಲ್ಲಿ 5ಕ್ಕಿಂತ ಹೆಚ್ಚು ಜನರನ್ನು ಗುಂಪು ಗುಂಪಾಗಿ ನಿಲ್ಲಿಸಿಕೊಂಡು ಪಡಿತ ವಿತರಿಸಬಾರದು. ನ್ಯಾಯಬೆಲೆ ಅಂಗಡಿ, ಗೋದಾಮುಗಳ ಬಳಿ ಔಷ ಧ ಸಿಂಪರಣೆ ಮಾಡಿ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದರು.

ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಮಾತನಾಡಿ, ರಸ್ತೆ ಬದಿಯ ಎಗ್‌ ರೈಸ್‌, ಮಾಂಸದ ಅಂಗಡಿ, ಬೀದಿ ಬದಿ ಕ್ಯಾಂಟೀನ್‌ ಹಾಗೂ ಬೀದಿಬದಿಯ ವ್ಯಾಪಾರಿಗಳ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ತಾಲೂಕು ಆರೋಗ್ಯ ಶಿಕ್ಷಣಾ ಧಿಕಾರಿ ಎನ್‌.ಎಸ್‌. ಮಂಜುನಾಥ್‌, ಬಸವೇಶ್ವರ ವೈದ್ಯಕೀಯ ಕಾಲೇಜು ಸಿಬ್ಬಂದಿಗಳು, ಪಿಡಿಒಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next