Advertisement

ಕಾಡುಗೊಲ್ಲ ಸಮುದಾಯಕ್ಕೆ ಪರಿಷತ್‌ ಪ್ರಾತಿನಿಧ್ಯ ಕೊಡಿ

01:18 PM Jun 15, 2020 | Naveen |

ಚಿತ್ರದುರ್ಗ: ವಿಧಾನ ಪರಿಷತ್‌ನಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘ‌ ಒತ್ತಾಯಿಸಿದೆ.

Advertisement

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯರು ತೀರ್ಮಾನಿಸಿದರು. ರಾಜ್ಯಾಧ್ಯಕ್ಷ ಶಿವು ಯಾದವ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಾಯಕರನ್ನು ಭೇಟಿ ಮಾಡಿ ನಮ್ಮ ಸಮುದಾಯಕ್ಕೆ ಅವಕಾಶ ನೀಡುವಂತೆ ಕೋರಲು ಬೆಂಗಳೂರಿಗೆ ನಿಯೋಗ ತೆರಳಲು ನಿರ್ಧರಿಸಲಾಯಿತು. ರಾಜ್ಯ ಸರ್ಕಾರ ಇತ್ತೀಚಿನ ಜಾತಿ ಪಟ್ಟಿಗೆ ಕಾಡುಗೊಲ್ಲ ಜನಾಂಗವನ್ನು ಸೇರಿಸಿದೆ. ಆದರೆ ಈ ಜನಾಂಗ ಅಲೆಮಾರಿ ಸಮುದಾಯ. ಹಾಗಾಗಿ ಸಮುದಾಯವನ್ನು ಅಲೆಮಾರಿ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಬೇಕು. ಅಲೆಮಾರಿ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರಿ ವಸತಿ ನಿಲಯಗಳಲ್ಲಿ ಶೇ.10 ರಷ್ಟು ಮೀಸಲಾತಿ ಪಾಲನೆಯಾಗಬೇಕು ಎಂದು ಸಭೆ ಒತ್ತಾಯಿಸಿತು.

ವಾಸಿಸುವವನೇ ಮನೆಯ ಒಡೆಯ ಕಾನೂನಿನ ಅಡಿಯಲ್ಲಿ ವಾಸಿಸುವ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಕಾಯ್ದೆ ತಿದ್ದುಪಡಿಯಿಂದ ಕುರಿಗಾಹಿಗಳಿಗೆ, ಪಶುಪಾಲನೆಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಪ್ರಧಾನ ಕಾರ್ಯದರ್ಶಿ ಹರ್ಷವರ್ಧನ, ಗೌರವಾಧ್ಯಕ್ಷ ಕೂನಿಕೆರೆ ರಾಮಣ್ಣ, ಸಂಘಟನಾ ಕಾರ್ಯದರ್ಶಿ ಕುಣಿಗಲ್‌ ನಾಗಣ್ಣ, ದಾವಣಗೆರೆ ಗಂಗಾಧರ್‌, ಡಾ| ಪ್ರೇಮಾ, ಡಾ| ವೆಂಕಟೇಶ್‌, ಡಾ| ಚಿತ್ತಯ್ಯ, ಡಾ| ಮಹೇಶ್‌, ವಕೀಲರಾದ ತಿಮ್ಮಣ್ಣ, ಚಂದ್ರಶೇಖರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next