Advertisement

ಜಾಗರಣೆ-ಶಿವ ಧ್ಯಾನ ಮಾಡಿದ ಭಕ್ತ ಗಣ

03:55 PM Feb 23, 2020 | Naveen |

ಚಿತ್ರದುರ್ಗ: ಜಿಲ್ಲೆಯಾದ್ಯಂತ ಶಿವರಾತ್ರಿ ಮಹೋತ್ಸವ ಶ್ರದ್ಧಾ-ಭಕ್ತಿಯಿಂದ ನಡೆಯಿತು. ಬಹುತೇಕ ಎಲ್ಲಾ ಶಿವನ ದೇಗುಲಗಳಲ್ಲಿ ಶಿವಲಿಂಗಕ್ಕೆ ಅಭಿಷೇಕ, ರುದ್ರಾಭಿಷೇಕ, ಪೂಜೆ, ಭಜನೆ, ಶಿವನಾಮ ಸ್ಮರಣೆ ಮಾಡಲಾಯಿತು.

Advertisement

ನಗರದ ನೀಲಕಂಠೇಶ್ವರ ದೇವಸ್ಥಾನ, ಪಾತಾಳಲಿಂಗೇಶ್ವರ ದೇವಸ್ಥಾನ, ಕರುವರ್ತಿ ಈಶ್ವರ ದೇವಸ್ಥಾನ ಸೇರಿದಂತೆ ಎಲ್ಲೆಡೆಯೂ ರಾತ್ರಿ 2 ಗಂಟೆವರೆಗೆ ಭಕ್ತರು ಸರತಿ ಸಾಲಿನಲ್ಲಿ ನಿಂತು ಶಿವ ದರ್ಶನ ಮಾಡಿದರು. ಶಿವರಾತ್ರಿ ಜಾಗರಣೆ ಅಂಗವಾಗಿ ಅನೇಕರು ಉಪವಾಸ ವ್ರತಾಚರಣೆ ಮಾಡಿದರು. ಈ ವೇಳೆ ಎಳನೀರು, ಕಲ್ಲಂಗಡಿಯಂತಹ ಹಣ್ಣುಗಳ ಸೇವನೆ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಚಿತ್ರದುರ್ಗ ನಗರದಲ್ಲಿ ಕಲ್ಲಂಗಡಿ ಹಣ್ಣುಗಳ ಮಾರಾಟ ಜೋರಾಗಿತ್ತು.

ಹಿಮಲಿಂಗ ದರ್ಶನ: ನಗರದ ವಾಸವಿ ರಸ್ತೆಯಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಹಿಮಲಿಂಗದ ಮಾದರಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಕ್ಕಾಗಿ ಹಿಮದಲ್ಲಿ ನಿರ್ಮಾಣವಾದಂತಹ ಗುಹೆಯನ್ನೂ ನಿರ್ಮಿಸಲಾಗಿತ್ತು. ವಿಶೇಷ ಆಕರ್ಷಣೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡರು. ಜತೆಗೆ ಹಸುವೊಂದು ಶಿವಲಿಂಗದ ಮೇಲೆ ಹಾಲು ಕರೆಯುವಂತಹ ವಿಶೇಷ ಮಾದರಿ ಆಕರ್ಷಕವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next