Advertisement

ಸಹಜ ಶಿವಯೋಗಕ್ಕಿದೆ ಅಪೂರ್ವ ಶಕ್ತಿ

07:50 PM Oct 23, 2019 | Naveen |

ಚಿತ್ರದುರ್ಗ: ಆಧುನಿಕ ಜಗತ್ತಿನಲ್ಲಿ ಮಾನವ ಅನೇಕ ಏರಿಳಿತಗಳ ನಡುವೆ ಹೆಜ್ಜೆ ಹೆಜ್ಜೆಗೂ ವಿಪತ್ತು ಆಪತ್ತುಗಳಲ್ಲಿ ಕಳೆದುಹೋಗುತ್ತಿದೆ. ಆದರೆ ಅಂತರ್ಯದ ತುಮುಲಗಳನ್ನು ನಿವಾರಿಸುವ ಔಷಧ ಸಹಜ ಶಿವಯೋಗವಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಂಡೋನೇಷಿಯಾದ ಬಾಲಿ ನಗರದಲ್ಲಿ ನಡೆದ ಶರಣತತ್ವ ಉಪನ್ಯಾಸ ಮತ್ತು ಸಹಜ ಶಿವಯೋಗ ಸಮಾರಂಭದಲ್ಲಿ ಭಾಗವಹಿಸಿ ಮುರುಘಾ ಶರಣರು ಆಶೀರ್ವಚನ ನೀಡಿದರು.

ತದೇಕ ಚಿತ್ತದಿಂದ ಲಿಂಗವನ್ನು ನೋಡಿ ಏಕಾಗ್ರತೆ ಗಳಿಸಿದರೆ ನೀವು ಶಿವಯೋಗದ ಸಾಮ್ರಾಟರಾಗುತ್ತೀರಿ. ಮನಸ್ಸು ಮತ್ತು ದೇಹ ಸಮಾಧಾನದಿಂದ ಇದ್ದಾಗ ನಿಮ್ಮನ್ನು ನೀವೆ ಆಳಿಕೊಳ್ಳುತ್ತೀರಿ. ಇಂತಹ ಶಿವಯೋಗ ನೆಲೆಯನ್ನು ತೋರಿದವರು ಬಸವಾದಿ ಶರಣರು. ಶರಣರ ಅನುಸರಣೆ ದುಃಖದ ನಿವಾರಣೆ ಎಂದರು.

ಅನೇಕರಿಗೆ ಸಾವಿರಾರು ಕೋಟಿ ಹಣವಿದ್ದರೂ ಬದುಕಿನಲ್ಲಿ ನೆಮ್ಮದಿ ಇರುವುದಿಲ್ಲ. ಚಿಂತೆ ಸಾವಿನ ಕಡೆಗೆ ಎಳೆದರೆ, ಚಿಂತನೆ ಬದುಕಿನ ಕಡೆಗೆ ಕರೆದೊಯ್ಯವುದು. ಜೀವನದಲ್ಲಿ ಕೊರತೆಗಳಿಗೆ ಪ್ರಾಶಸ್ತ್ಯ ನೀಡಬಾರದು. ನಾವೆಂದಿಗೂ ಒಂಟಿಯಲ್ಲ, ನಮ್ಮೊಂದಿಗೆ ಸದಾ ವಿಚಾರಗಳಿವೆ. ಸಂಶಯ ಪಿಶಾಚಿಗಳಾಗಬಾರದು. ಅಪೂರ್ವವಾದ ಈ ಜೀವನವನ್ನು ದ್ವೇಷ ಸಾಧಿ ಸುತ್ತ ಹಾಳು ಮಾಡಿಕೊಳ್ಳದೆ ಸಾಧನೆ ಕಡೆಗೆ ಮುಖ ಮಾಡಿ ಭರವಸೆ ತುಂಬಿಕೊಳ್ಳಿ.

ಶಿವಯೋಗದ ಮುಖಾಂತರ ಅಂತರ್ಮುಖೀಯಾಗಿ ಹಸನ್ಮುಖೀಯಾಗಿರಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು, ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಕುಂಚಿಟಿಗ ಗುರುಪೀಠದ ಡಾ| ಶಾಂತವೀರ ಸ್ವಾಮಿಗಳು, ವಾಲ್ಮೀಕಿ
ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಗಳು, ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮಿಗಳು, ತಿಪಟೂರಿನ ಶ್ರೀ ರುದ್ರಮುನಿ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ಸಾಹಿತಿ ರಂಜಾನ್‌ ದರ್ಗಾ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next