Advertisement

ಶಿಸ್ತುಬದ್ಧ ಬದುಕಿನಿಂದ ಉನ್ನತ ಸಾಧನೆ: ನಾಗರಾಜ್‌

04:12 PM Jul 31, 2019 | Naveen |

ಚಿತ್ರದುರ್ಗ: ಸಾಮಾಜಿಕ ಶಿಸ್ತು ಮತ್ತು ವೈಯಕ್ತಿಕ ಶಿಸ್ತುಗಳಿಂದ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಬಹುದು ಎಂದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್‌ ಹೇಳಿದರು.

Advertisement

ಇಲ್ಲಿನ ಎಸ್‌.ಆರ್‌.ಎಸ್‌ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ 2019-20ನೇ ಸಾಲಿನ ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ಕ್ರೀಡೆ ಹಾಗೂ ಸಹಪಠ್ಯ ಚಟುವಟಿಕೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ವ್ಯಕ್ತಿಗೆ ಊಟ ವಸತಿ ತಾತ್ಕಾಲಿಕವಾದ ನೆಮ್ಮದಿ ನೀಡಿದರೆ, ವಿದ್ಯೆ ಜೀವನ ಪೂರ್ತಿ ನೆಮ್ಮದಿ ನೀಡುತ್ತದೆ. ಅಂತಹ ವಿದ್ಯೆಯನ್ನು ಎಸ್‌.ಆರ್‌.ಎಸ್‌ ಶಿಕ್ಷಣ ಸಂಸ್ಥೆ ನೀಡುತ್ತಿದೆ. ವಿದ್ಯಾರ್ಥಿ ಜೀವನ ಮುಗಿದ ಕೂಡಲೇ ಯುವಕ-ಯುವತಿಯರು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದು ಜೀವನದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬೇಕು. ತಂದೆ ತಾಯಿ ಮಕ್ಕಳಿಗೆ ಜನ್ಮ ನೀಡಿದರೆ ಅವರ ಇಳಿ ವಯಸ್ಸಿನಲ್ಲಿ ಮಕ್ಕಳು ಅವರ ಆರೋಗ್ಯ ಮತ್ತು ಆಯುಷ್ಯವನ್ನು ಹೆಚ್ಚಿಸಬೇಕು. ಇದು ವಿದ್ಯಾರ್ಥಿ ಜೀವನದ ಸಾಧನೆಯಿಂದ ಸಾಧ್ಯ. ವಿದ್ಯಾರ್ಥಿಗಳು ಸಮಾಜಕಲ್ಯಾಣ ಇಲಾಖೆಯಿಂದ ಸಿಗುವ ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಹಾಗೂ ಇತರೆ ಸೌಲಭ್ಯ ಪಡೆದು ಏಳ್ಗೆ ಹೊಂದಬೇಕು ಎಂದು ಕರೆ ನೀಡಿದರು.

ಸಮಾಜಕಲ್ಯಾಣ ಇಲಾಖೆಯಲ್ಲಿ ವಿದ್ಯಾರ್ಥಿ ವೇತನ ಸೌಲಭ್ಯ, ಪ್ರೋತ್ಸಾಹಧನ, ಸಾಂವಿಧಾನಿಕ ವಿಧಿಗಳು ದುರ್ಬಲ ವರ್ಗದವರಿಗೆ ನೀಡುವ ಮೀಸಲಾತಿ ಮತ್ತು ಉದ್ಯೋಗ ಮುಂಬಡ್ತಿ ವಿಷಯ ಬಗ್ಗೆ ಮಾಹಿತಿ ನೀಡಿದ ನಾಗರಾಜ್‌, ಯಶಸ್ಸಿನ ಗುಟ್ಟು ಅಡಗಿರುವುದೇ ಅಕ್ಷರ ಎಂಬ ಮೂರಕ್ಷರದಲ್ಲಿ ಎಂದರು.

ಕಾಲೇಜಿನ ಪ್ರಾಂಶುಪಾಲ ಗುರುಪ್ರಸಾದ್‌ ಟಿ.ಆರ್‌. ಮಾತನಾಡಿದರು. ಉಪನ್ಯಾಸಕರಾದ ಮಂಜುಳಾ ಕೆ. ಸ್ವಾಗತಿಸಿದರು. ನಟರಾಜ್‌ ಡಿ.ಎಚ್. ಅತಿಥಿಗಳನ್ನು ಪರಿಚಯಿಸಿದರು. ಎನ್‌.ಎಸ್‌ಎಸ್‌ ಸಂಯೋಜನಾಧಿಕಾರಿ ಯಶೋಧರ ಜಿ.ಎನ್‌., ಸಾಂಸ್ಕೃತಿಕ ಸಮಿತಿ ಸಂಚಾಲಕಿ ಸುನೀತಾ ಬಿ.ಕೆ,. ಬಿಕಾಂ, ಬಿಬಿಎ ಮತ್ತು ಬಿಸಿಎ ವಿಭಾಗಗಳ ಮುಖ್ಯಸ್ಥರಾದ ಮನೋಹರ್‌ ಬಿ., ಶ್ರೀಕಾಂತ್‌ ಟಿ.ಎನ್‌., ಕಲ್ಲಿನಾಥ್‌, ಉಪನ್ಯಾಸಕರಾದ ಅರ್ಚನಾ, ಸಾಧನ, ನಾಗವೇಣಿ, ಮಧುಸೂದನ್‌, ಸತೀಶ್‌, ಪ್ರಶಾಂತ್‌ ಗೌಡ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next