Advertisement

ಚಿತ್ರದುರ್ಗ: ಕ್ವಾರಂಟೈನ್ ಆಗಿದ್ದ ವ್ಯಕ್ತಿ ಎದೆ ನೋವಿನಿಂದ ಸಾವು

10:39 AM May 17, 2020 | keerthan |

ಚಿತ್ರದುರ್ಗ:  ಕ್ವಾರಂಟೈನ್ ನಲ್ಲಿದ್ದ 55 ವರ್ಷದ ವ್ಯಕ್ತಿ ಎದೆನೋವಿನಿಂದ ಮೃತಪಟ್ಟಿದ್ದಾರೆ. ಕಳೆದ 8 ದಿನಗಳಿಂದ ನಗರದ ಹಾಸ್ಟೆಲ್ ಒಂದರಲ್ಲಿ ತಬ್ಲಿಘಿಗಳ ಜೊತೆಗೆ ಪ್ರಾಥನಿಕ ಸಂಪರ್ಕ ಹೊಂದಿದ್ದ ಕಾರಣಕ್ಕೆ ಕ್ವಾರಂಟೈನ್ ಮಾಡಲಾಗಿತ್ತು.

Advertisement

ಗುಜರಾತ್ ನಿಂದ ನಗರಕ್ಕೆ ಆಗಮಿಸಿದ ತಬ್ಲಿಘಿಗಳಿಗೆ ಊಟ ಕೊಟ್ಟಿದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಬಂದಿದ್ದ. ಈ ಕಾರಣಕ್ಕೆ ವ್ಯಕ್ತಿಯ ಗಂಟಲು ಮಾದರಿ ಪರೀಕ್ಷೆಯನ್ನೂ ಮಾಡಲಾಗಿತ್ತು. ಈ ವರದಿ ನೆಗೆಟಿವ್ ಬಂದಿದ್ದು, ಜಿಲ್ಲಾಡಳಿತ ಕ್ವಾರಂಟೈನ್  ಮಾಡಿತ್ತು.

ಭಾನುವಾರ ಬೆಳಗಿನ ಜಾವ ಈತ ಹಾಸ್ಟೆಲ್ ನಲ್ಲಿ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next