Advertisement
ಜಿಲ್ಲೆಯ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಕಳೆದ ಎಂಟು ತಿಂಗಳಿನಿಂದ ನಗರ ಸಶಸ್ತ್ರ ಮೀಸಲು ಪಡೆ ಹಾಗೂ ಕೈಗಾರಿಕಾ ಭದ್ರತಾ ಪಡೆಗಳ ತರಬೇತಿಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಇದಕ್ಕೊಂದು ಉತ್ತಮ ನಿದರ್ಶನ ಎನ್ನಬಹುದು.
ಪಿಎಸ್‌ಐ ಕನಸು ಕಂಡವರು. ಇದಕ್ಕಾಗಿ ಅಧ್ಯಯನ ಮಾಡುತ್ತಿದ್ದಾಗ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ಪಾಸಾಗಿದ್ದಾರೆ. ಈಗ ತರಬೇತಿ ಪಡೆಯುತ್ತಿದ್ದು, ಮುಂದೆ ಪಿಎಸ್‌ಐ ಆಗುವ ಆಸೆ ಹೊಂದಿದ್ದಾರೆ. ಬಿಇ ಓದು ಮುಗಿದಾಗಲೇ ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಕಾರಣಕ್ಕೆ ಪೊಲೀಸ್ ಇಲಾಖೆಗೆ ಕಾಲಿಟ್ಟಿದ್ದಾರೆ.
Related Articles
Advertisement
ಪೊಲೀಸ್ ಇಲಾಖೆಯ ಕೆಲಸ ಸ್ವಲ್ಪ ಕಷ್ಟವಾದರೂ ಇಲ್ಲಿ ನಮಗೆ ಮಾರ್ಗದರ್ಶನ ಮಾಡುವವರಿರುತ್ತಾರೆ. ಸಹೋದ್ಯೋಗಿಗಳಿರುತ್ತಾರೆ. ಹೀಗಾಗಿ ಅಭದ್ರತೆಗಿಂತ ಭದ್ರತೆ ಮುಖ್ಯವೆಂದು ಸರ್ಕಾರಿ ಕೆಲಸಕ್ಕೆ ಬಂದೆ ಎನ್ನುತ್ತಾರೆ. ಹೀಗೆ ಒಬ್ಬೊಬ್ಬರದ್ದೂ ಒಂದೊಂದು ಕಥೆಗಳಿವೆ. ಕೆಲವರಿಗೆ ಈ ತರಬೇತಿ ಮೊದಲ ಮೆಟ್ಟಿಲಾದರೆ, ಇನ್ನೂ ಕೆಲವರಿಗೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾ ಸಿದ ಸಂತೃಪ್ತ ಭಾವ ಇದೆ.
1680 ಅಭ್ಯರ್ಥಿಗಳಿಗೆ ತರಬೇತಿ: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಂತಿರುವ ಐಮಂಗಲದ ಪೊಲೀಸ್ ತರಬೇತಿ ಶಾಲೆ ಅತ್ಯಂತ ವ್ಯವಸ್ಥಿತವಾಗಿದೆ. 2015 ರಿಂದ ಉನ್ನತೀಕರಿಸಿದ ಶಾಲೆಯಾಗಿದ್ದು, 71 ಎಕರೆ ವಿಶಾಲ ಜಾಗದಲ್ಲಿದೆ. ಈ ಶಾಲೆಯಲ್ಲಿ ಈಗ ನಡೆಯುತ್ತಿರುವ ತರಬೇತಿಯೂ ಸೇರಿ 1680 ಜನರಿಗೆ ತರಬೇತಿ ನೀಡಲಾಗಿದೆ. ಇದುವರೆಗೆ ನಾಗರಿಕ ಪೊಲೀಸ್ ತರಬೇತಿ ಕಾನ್ಸ್‌ಟೇಬಲ್‌ಗಳಿಗೆ ತರಬೇತಿ ನೀಡಿದ್ದ ಪಿಟಿಎಸ್ ಈಗ ಎಪಿಸಿ ಮತ್ತು ಕೆಎಸ್‌ಐಎಸ್‌ಫ್ ಪಿಸಿಗಳಿಗೆ ಮೊದಲನೆ ಸಲ ತರಬೇತಿ ನೀಡಿ ಮಾ. 6 ರಂದು ನಿರ್ಗಮನ ಪಥಸಂಚಲನ ಹಮ್ಮಿಕೊಂಡಿದೆ.
ಸುಮಾರು 500 ಜನರಿಗೆ ತರಬೇತಿ ನೀಡುವಷ್ಟು ವಿಶಾಲವಾದವ್ಯವಸ್ಥೆ ಇಲ್ಲದೆ. ಆದರೆ ಕವಾಯತಿಗಾಗಿ ಇನ್ನೂ ಒಂದಿಷ್ಟು ಜಾಗದ ಅವಶ್ಯಕತೆಯಿದೆ. ಸದ್ಯ ಫೈರಿಂಗ್ ಗಾಗಿ ಚಂದ್ರವಳ್ಳಿ ರೇಂಜ್‌ಗೆ ಕರೆದೊಯ್ಯುತ್ತಿದ್ದು, ಐಮಂಗಲದಲ್ಲೇ ಇನ್ನೂ 25 ಎಕರೆ ಜಾಗ ನೀಡಿದರೆ ಫೈರಿಂಗ್ ವಲಯ ಮಾಡಿಕೊಳ್ಳುವ ಉತ್ಸಾಹದಲ್ಲಿ ಶಾಲೆಯ ಪ್ರಾಚಾರ್ಯರಿದ್ದಾರೆ. ಕಳೆದ 8 ತಿಂಗಳಿಂದ 98 ಕೈಗಾರಿಕಾ ಭದ್ರತಾ ಪಡೆ ಹಾಗೂ 268
ಪ್ರಶಿಕ್ಷಣಾರ್ಥಿಗಳಿಗೆ ಸಶಸ್ತ್ರ ಮೀಸಲು ಪಡೆ ತರಬೇತಿ ನೀಡಲಾಗಿದೆ. ಇದೇ ಮೊದಲ ಬಾರಿಗೆ ಏರ್‌ಪೋರ್ಟ್ ಅಧಿಕಾರಿಗಳನ್ನು ಕರೆಸಿ ಅಲ್ಲಿನ ತಪಾಸಣೆ, ವಿದೇಶಿಯರನ್ನು ತಪಾಸಣೆ ಮಾಡುವ ರೀತಿ ನೀತಿಗಳನ್ನು ಹೇಳಿ ಕೊಡಲಾಗಿದೆ. ಬಂದೂಕು ತರಬೇತಿಯನ್ನೂ ನೀಡಿದ್ದೇವೆ.
ಪಿ. ಪಾಪಣ್ಣ, ಐಮಂಗಲ ಪೊಲೀಸ್ ತರಬೇತಿ
ಶಾಲೆ ಎಸ್ಪಿ ಹಾಗೂ ಪ್ರಾಚಾರ್ಯರು ತಿಪ್ಪೇಸ್ವಾಮಿ ನಾಕೀಕೆರೆ