Advertisement

ಗೋಹತ್ಯೆಗೆ ಅವಕಾಶ ನೀಡಲ್ಲ

02:19 PM Aug 29, 2021 | Team Udayavani |

ಚಿತ್ರದುರ್ಗ: ಗೋಹತ್ಯೆ ನಿಷೇಧ ನಮ್ಮ ಸರ್ಕಾರದಸಂಕಲ್ಪ. ಇದೇ ಕಾರಣಕ್ಕೆ ಕಾಯ್ದೆ ರೂಪಿಸಲಾಗಿದ್ದು,ಪೂಜನೀಯ ಸ್ಥಾನದಲ್ಲಿರುವ ಗೋವುಗಳ ಹತ್ಯೆಗೆಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದುಪಶುಸಂಗೋಪನಾ  ಇಲಾಖೆ ಸಚಿವ ಪ್ರಭುಚೌಹಾಣ್‌ ತಿಳಿಸಿದರು.

Advertisement

ನಗರದ ಹೊರವಲಯದ ಕಾತ್ರಾಳು ಕೆರೆ ಬಳಿಇರುವ ಆದಿಚುಂಚನಗಿರಿ ಗೋಶಾಲೆಗೆ ಶನಿವಾರಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರುಮಾತನಾಡಿದರು.ರಾಜ್ಯದ 30 ಜಿಲ್ಲೆಗಳಲ್ಲೂ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಈಗಾಗಲೇ ಸಂಪುಟದಿಂದಅನುಮೋದನೆ ದೊರೆತಿದೆ. ಎಲ್ಲ ಜಿಲ್ಲಾಧಿಕಾರಿಗಳಿಗೂಗೋಶಾಲೆಗೆ ಜಾಗ ಹುಡುಕುವಂತೆ ಸೂಚಿಸಲಾಗಿದೆ.

60 ರಿಂದ 100 ಎಕರೆ ಜಾಗದಲ್ಲಿ ಗೋಶಾಲೆಗಳನ್ನುಸ್ಥಾಪಿಸಲಾಗುವುದು ಎಂದರು.ಜಿಲೆ Éಯಲ್ಲಿ ಯಾವ ಸ್ಥಳ ಸೂಕ್ತ ಎಂದು ಆಯ್ಕೆಮಾಡಿದ ಬಳಿಕ ಬರೋಬ್ಬರಿ 100 ಎಕರೆ ಜಾಗದಲ್ಲಿಸಕಲ ಸೌಲಭ್ಯವನ್ನೊಳಗೊಂಡ ಗೋಶಾಲೆನಿರ್ಮಿಸಲಾಗುತ್ತದೆ. ಖಾಸಗಿ ಗೋಶಾಲೆಗಳಿದ್ದರೂ ಸರ್ಕಾರದಿಂದ ಪ್ರತ್ಯೇಕವಾಗಿ ನಿರ್ಮಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪಶುಗಳ ಚಿಕಿತ್ಸೆಗೆ ಯಾವುದೇ ರೀತಿಯ ಶುಲ್ಕನಿಗದಿ ಮಾಡುವ ಚಿಂತನೆ ನಡೆದಿಲ್ಲ. ಕೇಂದ್ರ,ರಾಜ್ಯ ಸರ್ಕಾರದಿಂದ ನೀಡುವ ಎಲ್ಲ ಲಸಿಕೆಗಳನ್ನುಉಚಿತವಾಗಿ ನೀಡಲಾಗುತ್ತದೆ.ಜತೆಗೆ ಖಾಸಗೀಕರಣದ ವಿಷಯ ಸತ್ಯಕ್ಕೆ ದೂರವಾದ ಸಂಗತಿ. ಗೋಮಾತೆರಕ್ಷಣೆ ಸರ್ಕಾರದ ಹೊಣೆ. ಕಳೆದ ಸರ್ಕಾರದಲ್ಲಿಜಾರಿಯಾಗಿದ್ದ ಪಶು ಭಾಗ್ಯ ಯೋಜನೆಯನ್ನು ರದ್ದುಮಾಡಿಲ್ಲ. ಅದರ ಬದಲಿಗೆ ಬೇರೆ ಯೋಜನೆ ಜಾರಿಗೆತರುವ ಪ್ರಸ್ತಾಪ ಇಲ್ಲ ಎಂದರು.

ಚಳ್ಳಕೆರೆ ತಾಲೂಕಿನ ನನ್ನಿವಾಳದ ಗೋಶಾಲೆಯಲ್ಲಿಮೇವಿನ ಕೊರತೆಯನ್ನು ಬಗೆಹರಿಸಲಾಗುತ್ತದೆ.ಅಲ್ಲಿನ ಟ್ರಸ್ಟ್‌ನವರು ಇಲಾಖೆಗೆ ಮಾಹಿತಿ ನೀಡಿದರೆನಿಯಮದಂತೆ ಮೇವು ಪೂರೈಕೆ ಮಾಡಲಾಗುತ್ತದೆ.ಮೇವು ಖರೀದಿಗೆ ಹಣದ ಕೊರತೆಯಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದಸ್ವಾಮೀಜಿ ಗೋಶಾಲೆಯನ್ನು ಸಚಿವರಿಗೆ ಪರಿಚಯಿಸಿವಿವರ ನೀಡಿದರು.

Advertisement

ಸಚಿವರು ಹಸುವಿಗೆ ಮೇವು ನೀಡಿನಮಸ್ಕರಿಸಿದರು.ಮುರುಘಾ ಮಠಕ್ಕೆ ಭೇಟಿ: ಗೋಶಾಲೆ ಭೇಟಿಗಿಂತಮೊದಲು ಸಚಿವ ಪ್ರಭು ಚೌಹಾಣ್‌ ಅವರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಭೇಟಿ ನೀಡಿ ಡಾ|ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದಪಡೆದರು. ಈ ಸಂದರ್ಭದಲ್ಲಿ ಎಸ್‌.ಜೆ.ಎಂವಿದ್ಯಾಪೀಠದಕಾರ್ಯದರ್ಶಿಎ.ಜೆ.ಪರಮಶಿವಯ್ಯ, ವಿದ್ಯಾಧಿಕಾರಿಬಿ. ಸಿದ್ದಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next