Advertisement

ಗ್ರೀನ್‌ ಎನರ್ಜಿ ಕಾರಿಡಾರ್‌ ಪೂರ್ಣಗೊಳಿಸಿ

03:00 PM Dec 29, 2021 | Team Udayavani |

ಚಿತ್ರದುರ್ಗ: ಗ್ರೀನ್‌ ಎನರ್ಜಿ ಕಾರಿಡಾರ್‌ಯೋಜನೆಯಡಿ ರಾಜ್ಯದಲ್ಲಿ ಒಂಭತ್ತುಯೋಜನೆಗಳನ್ನು ತೆಗೆದುಕೊಳ್ಳಲಾಗಿದ್ದು,ಚಿತ್ರದುರ್ಗ ಜಿಲ್ಲೆಯಲ್ಲಿ ಮೂರುಯೋಜನೆಗಳಿವೆ. ಆದರೆ ಇನ್ನೂಪೂರ್ಣಗೊಂಡಿಲ್ಲ ಎಂಬುದು ರಾಜ್ಯ ಮಟ್ಟದವರದಿಯಲ್ಲಿ ಪ್ರಸ್ತಾಪವಾದ ಹಿನ್ನಲೆಯಲ್ಲಿ ಸಭೆನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಂಧನಸಚಿವ ವಿ. ಸುನೀಲ್‌ಕುಮಾರ್‌ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿಮಂಗಳವಾರ ಹಮ್ಮಿಕೊಂಡಿದ್ದ ಚಿತ್ರದುರ್ಗಜಿಲ್ಲೆಯ ಗ್ರೀನ್‌ ಎನರ್ಜಿ ಕಾರಿಡಾರ್‌ಯೋಜನೆ ಕಾಮಗಾರಿ ಸಭೆಯಲ್ಲಿ ಅವರುಮಾತನಾಡಿದರು. ಮೂರು ವರ್ಷಗಳ ಹಿಂದೆಈ ಯೋಜನೆ ಪ್ರಾರಂಭವಾಗಿದೆ. ಆದರೆಮೂರು ತಾಲೂಕುಗಳಲ್ಲಿ ಈ ಯೋಜನೆಪೂರ್ಣಗೊಂಡಿಲ್ಲ. ಕೇಂದ್ರ ಸರ್ಕಾರ ಎರಡನೇಹಂತದ ಗ್ರೀನ್‌ ಎನರ್ಜಿ ಕಾರಿಡಾರ್‌ಯೋಜನೆಯಡಿ ಮತ್ತೆ 13 ಯೋಜನೆಗಳನ್ನುನೀಡಲು ಈಗಾಗಲೇ ತಾತ್ವಿಕ ಒಪ್ಪಿಗೆ ನೀಡಿದೆ.ಹಾಗಾಗಿ ತಕ್ಷಣ ಕಾಲಮಿತಿಯೊಳಗೆ ಈಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದುಜಿಲ್ಲಾಧಿಕಾರಿಗಳಿಗೆ ಹಾಗೂ ಕೆಪಿಟಿಸಿಎಲ್‌ಅಧಿಕಾರಿಗಳಿಗೆ ಸೂಚಿಸಿದರು.

ಕೆಪಿಟಿಸಿಎಲ್‌ ಗ್ರೀನ್‌ ಎನರ್ಜಿ ಕಾರಿಡಾರ್‌ಯೋಜನೆಯಡಿ ಜಿಲ್ಲೆಯಲ್ಲಿ ನಡೆಯುತ್ತಿರುವಮೊದಲ ಹಂತದ ಕಾಮಗಾರಿಗಳನ್ನು ಶೀಘ್ರಪೂರ್ಣಗೊಳಿಸಬೇಕು. ಇದು ಪೂರ್ಣಗೊಂಡಬಳಿಕ ಎರಡನೇ ಹಂತದಲ್ಲಿ ಜಿಲ್ಲೆಗೆಮತ್ತಷ್ಟು ಕಾಮಗಾರಿಗಳು ಲಭ್ಯವಾಗಲಿವೆ.ಯೋಜನೆಯಡಿ ಹಿರಿಯೂರು ತಾಲೂಕುಬೀರೇನಹಳ್ಳಿ ವಿದ್ಯುತ್‌ ಕೇಂದ್ರದಿಂದಹಿರಿಯೂರು ವಿದ್ಯುತ್‌ ಕೇಂದ್ರಕ್ಕೆ ಹಾಲಿಇರುವ ಕಾರಿಡಾರ್‌ನಲ್ಲಿ ಏಕ ಪ್ರಸರಣಮಾರ್ಗದ ನಿರ್ಮಾಣ ಕಾಮಗಾರಿ ಹಾಗೂಹಿರೇಮಲ್ಲನಹೊಳೆ ಜಗಳೂರು ವಿದ್ಯುತ್‌ಕೇಂದ್ರದಿಂದ ಚಿತ್ರದುರ್ಗ ವಿದ್ಯುತ್‌ಕೇಂದ್ರದವರೆಗೆ ಜೋಡಿ ವಿದ್ಯುತ್‌ ಮಾರ್ಗದನಿರ್ಮಾಣ ಕಾಮಗಾರಿ. ಹೊಸದುರ್ಗತಾಲೂಕಿನ ಮಧುರೆ ವಿದ್ಯುತ್‌ ವಿತರಣಾಕೇಂದ್ರದ ಮತ್ತು ಸಂಬಂಧಿಸಿದ 66 ಕೆವಿಮತ್ತು 220 ಕೆವಿ ಮಾರ್ಗಗಳ ನಿರ್ಮಾಣಕಾಮಗಾರಿ, ಹೊಸದುರ್ಗ-ಮತ್ತೋಡು-ಪಂಚನಹಳ್ಳಿ ಮಾರ್ಗದ ನಿರ್ಮಾಣ,ಹೊಸದುರ್ಗ-ರಾಮಗಿರಿ ಮಾರ್ಗದನಿರ್ಮಾಣ,

ಹೊಸದುರ್ಗ-ಹಾಲುರಾಮೇಶ್ವರಮಾರ್ಗದ ನಿರ್ಮಾಣ ಹಾಗೂಹೊಸದುರ್ಗ-ಗರಗ ಮಾರ್ಗದ ನಿರ್ಮಾಣಕಾಮಗಾರಿ ನಡೆಯುತ್ತಿವೆ. ಆದರೆ ಕಳೆದಮೂರು ವರ್ಷಗಳಿಂದಲೂ ವಿವಿಧಕಾರಣಗಳಿಂದ ಕುಂಠಿತವಾಗಿ ನಡೆಯುತ್ತಿವೆಎಂದು ಅಸಮಾಧಾನ ವ್ಯಕ್ತಪಡಿಸಿದರು.ವಿದ್ಯುತ್‌ ಗೋಪುರ ನಿರ್ಮಾಣ ಹಾಗೂವಿದ್ಯುತ್‌ ಮಾರ್ಗ ನಿರ್ಮಾಣಕ್ಕೆ ಸಮಸ್ಯೆಗಳುಎದುರಾದಾಗ ಜಿಲ್ಲೆಯ ಶಾಸಕರು ಹಾಗೂಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡುಜಿಲ್ಲೆಯ ಮೂರು ಯೋಜನೆಗಳನ್ನುಪೂರ್ಣಗೊಳಿಸಬೇಕು. ಇದರಿಂದ ಚಿತ್ರದುರ್ಗಜಿಲ್ಲೆ ಹಾಗೂ ರಾಜ್ಯಕ್ಕೆ ನಿರಂತರವಾಗಿ ವಿದ್ಯುತ್‌ಸರಬರಾಜು ಮಾಡಲು ಸಹಕಾರಿಯಾಗಲಿದೆ.

ವಿದ್ಯುತ್‌ ಗೋಪುದ್ಯುತ್‌ ಮಾರ್ಗ ನಿರ್ಮಾಣಕ್ಕೆಸಮಸ್ಯೆ ಇರುವ ಕಡೆ ರೈತರ ಜೊತೆಗೆ ಶಾಸಕರುಹಾಗೂ ಜಿಲ್ಲಾಧಿಕಾರಿಗಳು ಮಾತುಕತೆ ಮೂಲಕಚರ್ಚಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕುಎಂದು ಸಲಹೆ ನೀಡಿದರು.ಸಭೆಯಲ್ಲಿ ಶಾಸಕರಾದ ಜಿ.ಎಚ್‌. ತಿಪ್ಪಾರೆಡ್ಡಿ,ಗೂಳಿಹಟ್ಟಿ ಡಿ. ಶೇಖರ್‌, ಜಿಲ್ಲಾಧಿಕಾರಿಕವಿತಾ ಎಸ್‌. ಮನ್ನಿಕೇರಿ, ಜಿಪಂ ಸಿಇಒ ಡಾ|ಕೆ.ನಂದಿನಿದೇವಿ,ಜಿಲ್ಲಾಪೊಲೀಸ್‌ವರಿಷ್ಠಾಧಿಕಾರಿಜಿ. ರಾಧಿಕಾ, ಕೆಪಿಟಿಸಿಎಲ್‌ ತಾಂತ್ರಿಕ ವಿಭಾಗದನಿರ್ದೇಶಕ ಚಂದ್ರಶೇಖರ್‌, ಕೆಪಿಟಿಸಿಎಲ್‌ಮುಖ್ಯ ಎಂಜಿನಿಯರ್‌ ಆದಿನಾರಾಯಣ,ಕಾರ್ಯಪಾಲಕಇಂಜಿನಿಯರ್‌ಮಲ್ಲಿಕಾರ್ಜುನ್‌ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next