ಚಿತ್ರದುರ್ಗ: ಅಗತ್ಯ ವಸ್ತುಗಳ ಬೆಲೆಏರಿಕೆಯಿಂದ ಒಕ್ಕಲುತನ ದುಬಾರಿಯಾಗಿದೆ.ಇದದಿಂದ ರೈತ ಕೃಷಿಯಿಂದ ಹಿಂದೆಸರಿಯುವಂತಾಗಿದೆ ಎಂದು ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಟಿ. ನುಲೇನೂರು ಎಂ. ಶಂಕರಪ್ಪ ಕಳವಳವ್ಯಕ್ತಪಡಿಸಿದರು.ತಾಲೂಕಿನ ಕ್ಯಾದಿಗೆರೆಯಲ್ಲಿ ರಾಜ್ಯ ರೈತಸಂಘದ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.
ಒಗ್ಗಟ್ಟಿನಲ್ಲಿ ಬಲವಿದೆಎನ್ನುವುದನ್ನು ರೈತರು ಇನ್ನೂ ಅರ್ಥಮಾಡಿಕೊಳ್ಳುತ್ತಿಲ್ಲ ಎನ್ನುವುದು ಬೇಸರದಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಧಾವಿಸುತ್ತಿಲ್ಲ. ಪ್ರಧಾನಿನರೇಂದ್ರ ಮೋದಿ ರೈತರ ಭೂಮಿಯನ್ನುಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಕುತಂತ್ರ ನಡೆಸುತ್ತಿರುವುದರವಿರುದ್ಧ ರೈತರು ಎಚ್ಚೆತ್ತುಕೊಳ್ಳಬೇಕು ಎಂದರು.
ಬೆಳೆ ಬೆಳೆಯಲಿ, ಬಿಡಲಿ. ಭೂಮಿರೈತರ ಕೈಯಲ್ಲಿರಬೇಕು ಎನ್ನುವುದು ನಮ್ಮಉದ್ದೇಶ. ಎಪಿಎಂಸಿ ನಾಶವಾದರೆ ರೈತಬೆಳೆದ ಬೆಳೆಗಳಿಗೆ ಟೆಂಡರ್ ಹಾಕುವವರ್ಯಾರುಎಂದು ಪ್ರಶ್ನಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷಬಸ್ತಿಹಳ್ಳಿ ಜಿ. ಸುರೇಶ್‌ಬಾಬು ಮಾತನಾಡಿ,ವಿಧಾನಸಭೆಯಲ್ಲಿ ಯಾವ ಪಕ್ಷದವರೂರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಮೌನವಹಿಸಿರುವುದರ ಹಿನ್ನೆಲೆ ಏನು, ಆಳುವಸರ್ಕಾರಗಳು ರೈತರ ಮೇಲೆ ಗದಾಪ್ರಹಾರ ನಡೆಸುತ್ತಿವೆ.
ಒಗ್ಗಟ್ಟಿನಿಂದ ಏನು ಬೇಕಾದರೂಸಾಧನೆ ಮಾಡಬಹುದು ಎನ್ನುವುದಕ್ಕೆ ದೆಹಲಿಗಡಿಯಲ್ಲಿ ಕಳೆದ ಹದಿನೈದು ತಿಂಗಳಿನಿಂದಲೂ ರೈತರು ಕೇಂದ್ರ ಸರ್ಕಾರದ ವಿರುದ್ಧ ಚಳವಳಿನಡೆಸಿ ಫಲವಾಗಿ ಮೂರು ಕೃಷಿ ವಿರೋಧಿಕಾಯಿದೆಗಳನ್ನು ಹಿಂದಕ್ಕೆ ಪಡೆದಿರುವುದೇ ಸಾಕ್ಷಿ ಎಂದರು.
ರೈತ ಮುಖಂಡರಾದಮಲ್ಲಾಪುರದ ತಿಪ್ಪೇಸ್ವಾಮಿ, ಮುದ್ದಾಪುರದನಾಗರಾಜ್, ಬೇಡರೆಡ್ಡಿಹಳ್ಳಿ ಬಸವರೆಡ್ಡಿ,ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯಹಂಪಯ್ಯನಮಾಳಿಗೆ, ಸಜ್ಜನಕೆರೆ ರೇವಣ್ಣ,ಗ್ರಾಪಂ ಮಾಜಿ ಸದಸ್ಯ ಮಂಜು, ಸತ್ಯಪ್ಪ,ರೇಣುಕರಾಜು ಮಾತನಾಡಿದರು. ಸಿದ್ದಪ್ಪಅಧ್ಯಕ್ಷತೆ ವಹಿಸಿದ್ದರು.