ಚಿತ್ರದುರ್ಗ: ಭಾರತ ಸಂವಿಧಾನ ರಕ್ಷಣೆಯಲ್ಲಿವಕೀಲರ ಪಾತ್ರ ಮಹತ್ವದ್ದಾಗಿದೆ ಎಂದು ಕರ್ನಾಟಕವಕೀಲರ ಪರಿಷತ್ತಿನ ಅಧ್ಯಕ್ಷ ಎಲ್. ಶ್ರೀನಿವಾಸಬಾಬುಹೇಳಿದರು.ಚಿತ್ರದುರ್ಗ ಜಿಲ್ಲಾ ವಕೀಲರ ಸಂಘದಿಂದಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ, 25 ವರ್ಷಸೇವೆ ಸಲ್ಲಿಸಿದ ವಕೀಲರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರುದೇಶದ ಕಾನೂನು ಪರಿಪಾಲಕರು. ಕಕ್ಷಿದಾರರಿಗೆನ್ಯಾಯ ಕೊಡಿಸುವಲ್ಲಿ ವಕೀಲರ ಪಾತ್ರ ಬಹುಮುಖ್ಯವಾಗಿದೆ ಎಂದರು.
ವಕೀಲರ ಕಲ್ಯಾಣಕ್ಕಾಗಿರಾಜ್ಯ ಪರಿಷತ್‌ನಲ್ಲಿ ವಿಶೇಷ ಯೋಜನೆ ರೂಪಿಸಲುಮುಂದಾಗಿದ್ದೇವೆ. ಕೋವಿಡ್ ವೇಳೆ ಮೃತಪಟ್ಟಮತ್ತು ಕಷ್ಟ ನಷ್ಟ ಅನುಭವಿಸಿದ ವಕೀಲರಿಗೆ ಪರಿಷತ್ತುನೆರವು ನೀಡಿದೆ. ರಾಜ್ಯದ ಎಲ್ಲಾ ವಕೀಲರ ಪರವಾಗಿವಕೀಲರ ಪರಿಷತ್ತು ಸದಾ ಕಾರ್ಯ ನಿರ್ವಹಿಸುತ್ತದೆಎಂದು ತಿಳಿಸಿದರು.
ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪಮಾತನಾಡಿ, ಭಾರತ ಸಂವಿಧಾನವನ್ನುಪಡೆದುಕೊಂಡಿರುವುದು ನಮ್ಮೆಲ್ಲರ ಪುಣ್ಯ. ದೇಶದಸ್ವಾತಂತ್ರÂಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳಲ್ಲಿಒಬ್ಬರಾದ ಬಾಬು ರಾಜೇಂದ್ರ ಪ್ರಸಾದ್ ಅವರಜನ್ಮದಿನವನ್ನು ವಕೀಲರ ದಿನಾಚರಣೆಯನ್ನಾಗಿನಾವೆಲ್ಲರೂ ಆಚರಿಸುತ್ತಿದ್ದೇವೆ. ನಾವೆಲ್ಲರೂಸಂವಿಧಾನವನ್ನು ಗೌರವಿಸಿದರೆ ಅದು ನಮ್ಮನ್ನುಗೌರವಿಸುತ್ತದೆ ಎಂದರು.
ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದಪ್ರೇಮಾವತಿ ಮನಗೂಳಿ ಎಂ. ಮಾತನಾಡಿ,ಜಿಲ್ಲಾ ವಕೀಲರ ಸಂಘ ಇಂತಹ ಅರ್ಥಪೂರ್ಣಕಾರ್ಯಕ್ರಮಗಳನ್ನು ಮಾಡುವುದು ಸಂತೋಷದವಿಷಯ. ಕಿರಿಯ ವಕೀಲರು ನ್ಯಾಯಾಲಯದಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕುಮತ್ತು ಹಿರಿಯ ವಕೀಲರ ಸಲಹೆ ಸೂಚನೆಗಳನ್ನುಪಾಲಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸಿ.ಶಿವು ಯಾದವ್ ಮಾತನಾಡಿ, ಚಿತ್ರದುರ್ಗ ರಾಜ್ಯದಮಧ್ಯ ಭಾಗದಲ್ಲಿರುವುದರಿಂದ ಸುತ್ತಮುತ್ತಲಿನಜಿಲ್ಲೆಯ ಕಕ್ಷಿದಾರರನ್ನು ಗಮನದಲ್ಲಿಟ್ಟುಕೊಂಡುಜಿಲ್ಲೆಯಲ್ಲಿ ಹೈಕೋರ್ಟ್ ಸ್ಥಾಪಿಸಬೇಕು. ವಕೀಲರಪರಿಷತ್ತಿನಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ ನೀಡಬೇಕು. ಈಬಾರಿ ಕರ್ನಾಟಕ ರಾಜ್ಯ ವಕೀಲರ ಸಮಾವೇಶವನ್ನುಚಿತ್ರದುರ್ಗದಲ್ಲಿ ನಡೆಸಬೇಕು ಎಂದು ಮನವಿ ಮಾಡಿದರು.
ನ್ಯಾಯಾಧಿಧೀಶರಾದ ಬನ್ನಿಕಟ್ಟಿ ಹನುಮಂತಪ್ಪಆರ್., ಶಂಕ್ರಪ್ಪ ನಿಂಬಣ್ಣ ಕಲ್ಕಣಿ, ಸಿ.ಎಸ್.ಜಿತೇಂದ್ರನಾಥ್, ಎಚ್. ಎಂ.ದೇವರಾಜ್. ಬಿ.ಕೆ.ಗಿರೀಶ್, ಲತಾ ಕೆ., ನೇಮಿಚಂದ್ ದೇಸಾಯಿ,ಶಿಲ್ಪಾ, ಸಂಘದ ಉಪಾಧ್ಯಕ್ಷ ಜಿ.ಸಿ. ದಯಾನಂದ,ಪ್ರಧಾನ ಕಾರ್ಯದರ್ಶಿ ಎಂ. ಮೂರ್ತಿ. ಖಜಾಂಚಿಕೆ.ಎಂ. ಅಜ್ಜಯ್ಯ. ಜಂಟಿ ಕಾರ್ಯದರ್ಶಿ ಬಿ.ಆರ್.ವಿಶ್ವನಾಥ ರೆಡ್ಡಿ, ಮಾಜಿ ಅದ್ಯಕ್ಷರಾದ ಎಸ್. ವಿಜಯ್‌ಕುಮಾರ್, ಮಹಾಬಲೇಶ್ವರ, ಫಾತ್ಯರಾಜನ್, ಬಿ.ಕೆ.ರಹಮತ್ ಉಲ್ಲಾ, ಪಿ.ಎಂ. ಹನುಮಂತರಾಯ,ಎ.ಸಿ. ರಘು, ಎಸ್. ವಿಜಯ್‌ಕುಮಾರ್ ಇದ್ದರು.