ಚಿತ್ರದುರ್ಗ: ಪ್ರಪಂಚದಲ್ಲಿ 241ಮಿಲಿಯನ್‌ಗೂ ಹೆಚ್ಚು ಜನರುಜಂತುಹುಳುವಿನ ಸಮಸ್ಯೆಯಿಂದಬಳಲುತ್ತಿದ್ದು, ಅವರಲ್ಲಿ ಶೇ. 28ರಷ್ಟುಜನ ಭಾರತದವರಾಗಿದ್ದಾರೆ ಎಂದುಜಿಲ್ಲಾ ಆರೋಗ್ಯಾಧಿಕಾರಿ ಡಾ| ಆರ್.ರಂಗನಾಥ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬಇಲಾಖೆಯಿಂದ ಬುದ್ಧನಗರದ ನಗರಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 2021-22ನೇ ಸಾಲಿನ ರಾಷ್ಟ್ರೀಯಜಂತುಹುಳು ನಿವಾರಣಾ ದಿನಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ಜಂತುಹುಳುಬಾಧೆಯಿಂದ ಮಕ್ಕಳಲ್ಲಿ ರಕ್ತಹೀನತೆ,ಬೆಳವಣಿಗೆ ಕುಂಠಿತ, ಕಲಿಕೆಯಲ್ಲಿಹಿಂದೆ ಬೀಳುವುದು ಸೇರಿದಂತೆ ಹಲವುಸಮಸ್ಯೆಗಳು ಉಂಟಾಗುತ್ತದೆ.
ಹಾಗಾಗಿಮಕ್ಕಳಿಗೆ ಪ್ರತಿ ಆರು ತಿಂಗಳಿಗೊಮ್ಮೆಜಂತುಹುಳು ನಿವಾರಣೆ ಮಾತ್ರೆಗಳನ್ನುನೀಡಲಾಗುತ್ತದೆ ಎಂದರು.ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕರೋಗಗಳು ಸೇರಿದಂತೆ ಬಹುತೇಕರೋಗಗಳನ್ನು ಪತ್ತೆ ಮಾಡಿ ಸೂಕ್ತಚಿಕಿತ್ಸೆ ನೀಡಲಾಗಿದೆ. ಅನೇಕರೋಗಗಳನ್ನು ನಿಯಂತ್ರಿಸುವಕೆಲಸವಾಗಿದೆ. ಈ ನಿಟ್ಟಿನಲ್ಲಿಭಾರತವನ್ನು ಪೋಲಿಯೋ ಮುಕ್ತಮಾಡಲಾಗಿದೆ. 2025ಕ್ಕೆ ಮಲೇರಿಯಾ,ಲೆಪ್ರಸಿ, ಕ್ಷಯ ರೋಗ ನಿವಾರಣೆಗುರಿ ಹೊಂದಲಾಗಿದೆ.
ಅದರಂತೆ ಜಂತುಹುಳು ಬಾಧೆ ನಿರ್ಮೂಲನೆಗೂಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿಶಿಕ್ಷಕರು, ಅಂಗನವಾಡಿ, ಆಶಾಕಾರ್ಯಕರ್ತೆಯರು ಪ್ರತಿಯೊಬ್ಬಮಗುವಿಗೂ ಮಾತ್ರೆ ನುಂಗಿಸುವ ಕೆಲಸಮಾಡಬೇಕೆಂದು ಕರೆ ನೀಡಿದರು.ಕಾರ್ಯಕ್ರಮ ಅನುಷ್ಠಾನಾ ಧಿಕಾರಿಹಾಗೂ ಆರ್‌ಸಿಎಚ್ ಅ ಧಿಕಾರಿಡಾ| ಪಿ.ಎಸ್. ಕುಮಾರಸ್ವಾಮಿಮಾತನಾಡಿ, ಜಿಲ್ಲೆಯಲ್ಲಿ 4.38ಲಕ್ಷಕ್ಕೂ ಹೆಚ್ಚು ಮಕ್ಕಳನ್ನುಗುರುತಿಸಲಾಗಿದ್ದು, ಇವರೆಲ್ಲರಿಗೂಉಚಿತವಾಗಿ ಅಲೆºಂಡಾಜೋಲ್ ಮಾತ್ರೆನೀಡಲಾಗುತ್ತಿದೆ. 1 ವರ್ಷದಿಂದ 2ವರ್ಷದೊಳಗಿನ ಮಕ್ಕಳಿಗೆ 1/2 ಮಾತ್ರೆಹಾಗೂ 2 ವರ್ಷ ಮೇಲ್ಪಟ್ಟು 19ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆನೀಡಬೇಕು. ಎಲ್ಲಾ ಅಂಗನವಾಡಿ,ಶಾಲಾ-ಕಾಲೇಜುಗಳ ಮಕ್ಕಳಿಗೆ ಆಯಾಶಾಲೆಗಳ ಶಿಕ್ಷಕರು ಮಾತ್ರೆಗಳನ್ನುತಿನ್ನಿಸಬೇಕು ಎಂದರು.
ಆರೋಗ್ಯ ಇಲಾಖೆ ಅ ಧಿಕಾರಿಹನುಮಂತಪ್ಪ ಮಾತನಾಡಿ,ಜಂತುಹುಳು ಬಾಧೆಯಿಂದಮಕ್ಕಳ ಆರೋಗ್ಯದಲ್ಲಿ ವ್ಯತ್ಯಯಉಂಟಾಗುತ್ತದೆ. ಇದರಿಂದ ಅನೇಕಸಮಸ್ಯೆಗಳು ಕಂಡುಬರುತ್ತವೆ. ಹಾಗಾಗಿಪ್ರತಿ ಆರು ತಿಂಗಳಿಗೊಮ್ಮೆ ಮಕ್ಕಳಿಗೆಜಂತುಹುಳು ನಿವಾರಕ ಮಾತ್ರೆಗಳನ್ನುತಿನ್ನಿಸಲಾಗುತ್ತದೆ. ಮಾತ್ರೆಗಳನ್ನುಪ್ರತಿ ಮಗುವಿಗೂ ದೊರೆಯುವಂತೆನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಮಾತ್ರೆಯನ್ನು ಮಗು ಚೆನ್ನಾಗಿಜಗಿದು ನುಂಗವಂತೆ ನೋಡಿಕೊಳ್ಳಬೇಕುಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲೂಕುಆರೋಗ್ಯಾಧಿ ಕಾರಿ ಡಾ| ಬಿ.ವಿ. ಗಿರೀಶ್,ಕಾರ್ಯಕ್ರಮ ಅನುಷ್ಠಾನಾಧಿ ಕಾರಿ ಡಾ|ರೇಣುಪ್ರಸಾದ್, ಬುದ್ಧನಗರ ಆರೋಗ್ಯಕೇಂದ್ರದ ಡಾ| ಸುರೇಂದ್ರ, ಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣ ನಾಯ್ಕ, ಆಂಜನೇಯ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಶಿಶು ಅಭಿವೃದ್ಧಿ ಅಧಿ ಕಾರಿಎನ್. ಸುಧಾ ಭಾಗವಹಿಸಿದ್ದರು.