ಚಿತ್ರದುರ್ಗ: ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ನೂತನ ಜಿಲ್ಲಾಡಳಿತಭವನ ನಿರ್ಮಾಣ ಮಾಡುವಂತೆ ಶಾಸಕಜಿ.ಎಚ್. ತಿಪ್ಪಾರೆಡ್ಡಿ, ಗುತ್ತಿಗೆದಾರರಿಗೆ ಸೂಚಿಸಿದರು.ಸೋಮವಾರ ಚಿತ್ರದುರ್ಗದ ಕುಂಚಿಗನಾಳ್ ಕಣಿವೆಯಲ್ಲಿ ನೂತನ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ಭವನಕ್ಕೆಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅ ಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.ಆದರೆ ಮುಂದಿನ 15 ದಿನಗಳ ಒಳಗಾಗಿವಿಧಾನ ಪರಿಷತ್ ಚುನಾವಣಾ ನೀತಿ ಸಂಹಿತೆಜಾರಿಯಾಗುತ್ತದೆ. ಮತ್ತೆ ವಿಳಂಬವಾಗುವುದು ಬೇಡಎನ್ನುವ ಕಾರಣಕ್ಕೆ ಕಾಮಗಾರಿ ಆರಂಭಿಸಲು ಇಂದುಸಾಂಕೇತಿಕವಾಗಿ ಭೂಮಿಪೂಜೆ ನೆರವೇರಿಸಲಾಗಿದೆಎಂದರು.
ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ 25 ಕೋಟಿರೂ. ಅನುದಾನ ಮಂಜೂರಾಗಿ ಒಂದೂವರೆವರ್ಷವಾಗಿದೆ. ಬೆಟ್ಟ ಅಗೆಯುವಾಗ ದೊಡ್ಡಗಾತ್ರದ ಬಂಡೆಗಳು ಸಿಕ್ಕಿದ್ದರಿಂದ ವಿವಿಧ ಇಲಾಖೆಗಳಅನುಮತಿ ಪಡೆದು ಅದನ್ನು ಲೆವೆಲ್ ಮಾಡಿಕೊಳ್ಳಲುಸಾಕಷ್ಟು ಕಾಲಾವಕಾಶ ಬೇಕಾಯಿತು. ಈಗಾಗಲೇ ವಿಳಂಬವಾಗಿರುವುದರಿಂದ ಆಗಸ್ಟ್ 15ರ ಹೊತ್ತಿಗೆಜಿಲ್ಲಾಡಳಿತ ಭವನ ನಿರ್ಮಾಣ ಮಾಡಿಕೊಡಲುಗುತ್ತಿಗೆದಾರರಿಗೆ ಮನವಿ ಮಾಡಿದ್ದೇನೆ ಎಂದುತಿಳಿಸಿದರು.ಚಿತ್ರದುರ್ಗ ನಗರದ ರಾಷ್ಟ್ರೀಯ ಹೆದ್ದಾರಿ-4ರಕುಂಚಿಗನಾಳ್ ಕಣಿವೆಯ ಮೇಲೆ ಎತ್ತರದ ಸ್ಥಳದಲ್ಲಿಆಕರ್ಷಕವಾದ ನೂತನ ಜಿಲ್ಲಾಡಳಿತ ಭವನನಿರ್ಮಾಣವಾಗಲಿದೆ.
ಈ ಕಟ್ಟಡ ನಿರ್ಮಾಣದಿಂದಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ.ಬುಧವಾರದಿಂದ ಕೆಲಸ ಪ್ರಾರಂಭವಾಗಲಿದ್ದು,ನೂತನ ಜಿಲ್ಲಾಡಳಿತ ಭವನಕ್ಕೆ 44 ಕೋಟಿ ರೂ.ವೆಚ್ಚದ ಕಾರ್ಯಯೋಜನೆ ರೂಪಿಸಲಾಗಿದೆ.ಜಿಲ್ಲಾಡಳಿತ ಭವನದ ಕಚೇರಿಗೆ ಬಂದು ಹೋಗಲುಅನುಕೂಲವಾಗುವಂತೆ ಉತ್ತಮ ರಸ್ತೆಗಳನ್ನುನಿರ್ಮಾಣ ಮಾಡಲು 7 ಕೋಟಿ ರೂ. ಅನುದಾನದಅಗತ್ಯವಿದೆ. ಈ ಬಗ್ಗೆ ಈಗಾಗಲೇ ಕಂದಾಯಸಚಿವರಲ್ಲಿ ಚರ್ಚಿಸಿದ್ದು, ಪ್ರಸ್ತಾವನೆ ಸಲ್ಲಿಸಿ ಅನುದಾನಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾಡಳಿತ ಭವನದ ಅಕ್ಕಪಕ್ಕದಲ್ಲಿ ಈಗಾಗಲೇ12 ಕೋಟಿ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ, ಜಿಟಿಟಿಸಿಕೇಂದ್ರ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳಿವೆ.ಮುಂದಿನ ದಿನಗಳಲ್ಲಿ ಇದೊಂದು ಉತ್ತಮಆಕರ್ಷಣಿಯ ಜಿಲ್ಲಾ ಕಚೇರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ,ತಹಶೀಲ್ದಾರ್ ಸತ್ಯನಾರಾಯಣ, ನಗರಸಭೆ ಅಧ್ಯಕ್ಷೆಬಿ. ತಿಪ್ಪಮ್ಮ, ನಗರಸಭೆ ಸದಸ್ಯರಾದ ವೆಂಕಟೇಶ್,ಮಲ್ಲಿಕಾರ್ಜುನ್, ಹರೀಶ್, ಸುರೇಶ್, ತಾರಕೇಶ್ವರಿ,ಭಾಗ್ಯಮ್ಮ, ಅನುರಾಧ, ಇಂಗಳದಾಳ್ ಗ್ರಾಪಂಸದಸ್ಯರಾದ ಪ್ರಕಾಶ್, ಬೋರಮ್ಮ, ಮಹೇಶ್,ಲೋಕೋಪಯೋಗಿ ಇಲಾಖೆ ಕಾರ್ಯಪಾಲಕಇಂಜಿನಿಯರ್ ಸತೀಶ್‌ಬಾಬು ಮತ್ತಿತರಅ ಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.