ಹೊಳಲ್ಕೆರೆ: ಇತ್ತೀಚೆಗೆ ಶಿವಗಂಗದಲ್ಲಿ ನಡೆದ ಫೋಟೋಗ್ರಾಫರ್ ಹತ್ಯೆ ತನಿಖೆಯಿಂದ ರೋಚಕ ಮಾಹಿತಿ ಹೊರಬಿದ್ದಿದ್ದು, ಒಡಹುಟ್ಟಿದ ಅಕ್ಕನೇ ಗಂಡನ ಜತೆ ಸೇರಿ ಹಣಕಾಸು ವಿಚಾರಕ್ಕೆ ತಮ್ಮನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದು, ಚಿತ್ರಹಳ್ಳಿ ಹಾಗೂ ಹೊಳಲ್ಕೆರೆ ಪೊಲೀಸ್ ಪತ್ತೆ ಮಾಡಿ ಅರೋಪಿರತನ್ನು ದಸ್ತಗಿರಿ ಮಾಡಿ ನ್ಯಾಯಾಂಗದ ಬಂಧನಕ್ಕೆ ನೀಡಿದ್ದಾರೆ.
ಶಿವಗಂಗ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಪೋಟೋಗ್ರಾಫರ್ ಬಸವರಾಜ್ ನನ್ನು ಹತ್ಯೆ ಮಾಡಿದ ಘಟನೆ ನಡೆದಿತ್ತು. ಹತ್ಯೆ ಜಾಡು ಹಿಡಿಯಲು ಪೊಲೀಸ್ ಬೀಸಿದ್ದ ಬಲೆಗೆ ಬಸವರಾಜ್ ಅಕ್ಕ ಮತ್ತು ಬಾವ ಬಿದ್ದಿರುವ ರೋಚಕ ಮಾಹಿತಿ ಹೊರಬಿದ್ದಿದೆ. ಬಸವರಾಜ್ ಜತೆ ಇದ್ದ ಹಣಕಾಸು ವಿಷಯದ ಹಿನ್ನಲೆಯಲ್ಲಿ ಹತ್ಯೆಗೀಡಾಗಿದ್ದ ಬಸವರಾಜ್ ಶಿವಗಂಗದಲ್ಲಿ ರಾತ್ರಿ ಊಟ ಮಾಡಿ ಮನೆಯ ಮಂಚದ ಮೇಲೆ ಮಲಗಿದ್ದಾಗ ಸ್ವಂತ ಅಕ್ಕ ರಾಧ ಹಾಗೂ ಬಾವ ತಿಮ್ಮರಾಜ್ ಕೃತ್ಯ ನಡೆಸಿದ್ದಾರೆ.
ಕೊರೋನಾ ಹಿನ್ನಲೆಯಲ್ಲಿ ಶಿವಗಂಗಕ್ಕೆ ಬಂದಿದ್ದು ರಾಧ ಹಾಗೂ ತಿಮ್ಮರಾಜ್ ತಮ್ಮನಾಗಿದ್ದ ಬಸವರಾಜ್ ಜತೆ ಜೀವನ ನಡೆಸುತ್ತಿದ್ದರು. ಬಸವರಾಜ್ ಜತೆ ಒಂದಿಷ್ಟು ಸಾಲ ಮಾಡಿಕೊಂಡಿದ್ದ ತಿಮ್ಮರಾಜ್ ಮತ್ತು ಅಕ್ಕ ರಾಧ ಇವರಿಗೆ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನುವ ಹಿನ್ನಲೆಯಲ್ಲಿ ಊಟ ಮಾಡಿ ಮಲಗಿದ್ದ ಸಮಯದಲ್ಲಿ ಪೋಟೋಗ್ರಾಪರ್ ಬಸವರಾಜನ್ನು ತಮ್ಮ ಒಡಹುಟ್ಟಿದ ಅಕ್ಕನೇ ತನ್ನ ಗಂಡನ ಜತೆ ಸೇರಿಕೊಂಡು ಕೊಚ್ಚಿ ಹತ್ಯೆ ಮಾಡಿರುವುದನ್ನು ಹೊಳಲ್ಕೆರೆ ವೃತ್ತ ನಿರೀಕ್ಷರ ತಂಡ ಪತ್ತೆ ಮಾಡಿ, ಅರೋಪಿತರನ್ನು ಬಂಧಿಸಿ ನ್ಯಾಯಾಂಗದ ಬಂಧನಕ್ಕೆ ಕಳುಹಿಸಿದ್ದಾರೆ.
ಈ ಸಂಬಂಧ ತ್ವರಿತಗತಿಯಲ್ಲಿ ಕಾರ್ಯಾಚರಣೆ ಕೈಗೊಂಡ ಸಿಪಿಐ ರವೀಶ್, ಚಿಕ್ಕಜಾಜೂರು ಪಿಎಸ್‌ಐ ಆಶಾ ಸೇರಿದಂತೆ ಪೋಲೀಸ್ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆ ಅಡ್ಡಪರಿಣಾಮ ಕೇವಲ ವದಂತಿ: ಆರೋಗ್ಯ ಸಚಿವಾಲಯ ಸ್ಪಷ್ಟನೆ