Advertisement

ಕೋಟೆ ನಾಡಲ್ಲಿ ವರ್ಷ ಧಾರೆ

05:21 PM Jul 08, 2022 | Team Udayavani |

ಚಿತ್ರದುರ್ಗ: ಕಳೆದ ಮೂರು ದಿನಗಳಿಂದಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ಕೃಷಿಚಟುವಟಿಕೆ ಗರಿಗೆದರಿದೆ. ಜಿಲ್ಲೆಯಾದ್ಯಂತ ಇಡೀದಿನ ಮೋಡ ಮುಸುಕಿದ ವಾತಾವರಣವಿದ್ದು,ಬಿಸಿಲು ಕಾಣದಂತಾಗಿದೆ. ಆಗಾಗ ಬಂದುಹೋಗುವ ಜಿಟಿ ಜಿಟಿ ಮಳೆಯಿಂದ ಇಡೀವಾತಾವರಣ ತಂಪಾಗಿದೆ.ಮಲೆನಾಡಿನಂತಾಗಿರುವ ವಾತಾವರಣದಕಾರಣಕ್ಕೆ ಬಯಲುಸೀಮೆಯ ಮಕ್ಕಳು ಶಾಲೆಗೆಹೋಗುವುದು ಹಾಗೂ ಬರುವುದು ತುಸುಕಷ್ಟವಾಗಿದೆ.

Advertisement

ಶಾಲೆಗೆ ಹೋಗುವ ಸಮಯಕ್ಕೆಸರಿಯಾಗಿ ಮಳೆ, ಶಾಲೆ ಬಿಡುವಾಗಲೂಮಳೆ ಬರುತ್ತಿರುವುದರಿಂದ ಕೆಲವು ಮಕ್ಕಳು,ಪೋಷಕರು ಒದ್ದೆಯಾಗುವಂತಾಗಿದೆ.ಪುನರ್ವಸು ಜಿಲ್ಲೆಯಲ್ಲಿ ಉತ್ತಮ ಆರಂಭಮಾಡಿದ್ದು ರೈತರು ಖುಷಿಯಾಗಿದ್ದಾರೆ. ಆರಿದ್ರಾಹಾಗೂ ಅದರ ಹಿಂದಿನ ಮಳೆಗಳಿಗೆ ಹತ್ತಿ ಬೀಜನಾಟಿ ಮಾಡಿದ್ದ ರೈತರು ಮಳೆ ಇಲ್ಲದೆ ಸಸಿಗಳುಬಾಡುತ್ತಿವೆ ಎಂದು ಚಿಂತಿತರಾಗಿದ್ದರು. ಆದರೆಪುನರ್ವಸು ಮಳೆ ಮತ್ತೆ ಜೀವಕಳೆ ತುಂಬಿದೆ.ಇದರಿಂದ ಸಂತಸಗೊಂಡಿರುವ ರೈತರು ರೈತಸಂಪರ್ಕ ಕೇಂದ್ರ, ಆಗ್ರೋ ಕೇಂದ್ರಗಳಿಗೆಗೊಬ್ಬರ, ಬೀಜಗಳಿಗೆ ಎಡತಾಕುತ್ತಿದ್ದಾರೆ.

ಆಗಾಗ ಸಣ್ಣಗೆ ಮತ್ತೆ ಕೆಲವೊಮ್ಮೆ ಬಿರುಸಾಗಿಸುರಿಯುವ ಮಳೆಯಿಂದ ಮನೆಯಿಂದಹೊರಗೆ ಬಂದು ಯಾವ ಕೆಲಸವನ್ನೂಮಾಡಿಕೊಳ್ಳದಂತಾಗಿದೆ. ಮಳೆಯ ಕಾರಣಕ್ಕೆಅನೇಕರು ಮನೆಯಲ್ಲಿ ಬೆಚ್ಚಗೆ ಕಾಲಕಳೆಯುತ್ತಿದ್ದಾರೆ. ಕೃಷಿಕರು ಮಾತ್ರ ಮಳೆಯಹದಕ್ಕೆ ಸರಿಯಾಗಿ ಫಸಲುಗಳಿಗೆ ಗೊಬ್ಬರಹಾಕಲು ಪರದಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next