ಚಿತ್ರದುರ್ಗ: ಜಿಲ್ಲೆಯಲ್ಲಿ ಅಪೌಷ್ಟಿಕತೆಹೋಗಲಾಡಿಸಲು ಅ ಧಿಕಾರಿಗಳು ಹೆಚ್ಚಿನ ಕಾಳಜಿವಹಿಸಬೇಕು ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ ಸೂಚನೆ ನೀಡಿದರು.ಜಿಲ್ಲಾ ಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ವಿವಿಧ ಯೋಜನೆಗಳ ಸಮನ್ವಯಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.ಅ ಧಿಕಾರಿಗಳು ಅಪೌಷ್ಟಿಕ ಮಕ್ಕಳ ಆರೋಗ್ಯಕಾಪಾಡಲು ಹೆಚ್ಚಿನ ಮುತುವರ್ಜಿವಹಿಸಬೇಕು.
ಅಪೌಷ್ಟಿಕ ಮಕ್ಕಳ ಸಂಖ್ಯೆಯನ್ನುಗಣನೀಯವಾಗಿ ಕಡಿಮೆ ಮಾಡುವ ಮೂಲಕಅಪೌಷ್ಟಿಕತೆ ಹೋಗಲಾಡಿಸಲು ಶ್ರಮಿಸಬೇಕುಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್‌ಮಾತನಾಡಿ, ಜಿಲ್ಲೆಯಲ್ಲಿ 126 ತೀವ್ರ ಅಪೌಷ್ಟಿಕಮಕ್ಕಳಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ-38,ಪರಿಶಿಷ್ಟ ಪಂಗಡ-24, ಅಲ್ಪಸಂಖ್ಯಾತರು-14ಹಾಗೂ ಇತರೆ-50 ಮಕ್ಕಳು ಸೇರಿದಂತೆ ಒಟ್ಟು126 ಮಕ್ಕಳು ತೀವ್ರ ಅಪೌಷ್ಠಿಕತೆಯಿಂದಬಳಲುತ್ತಿದ್ದಾರೆ.
ಇದನ್ನು ಹೋಗಲಾಡಿಸಲುಮನೆ ಬಾಗಿಲಿಗೆ ಆಹಾರ ಸಾಮಗ್ರಿತಲುಪಿಸುವಿಕೆ, ಆಯುಷ್ ಹಾಗೂ ಆರೋಗ್ಯಇಲಾಖೆ ವತಿಯಿಂದ ಆರೋಗ್ಯ ತಪಾಸಣೆನಡೆಸಿ ಔಷ ಧ ವಿತರಣೆ ಮಾಡಲಾಗುತ್ತಿದೆ.ಮಾತೃಪೂರ್ಣ ಯೋಜನೆಯಡಿ ಮಾರ್ಚ್2022ರ ಅಂತ್ಯಕ್ಕೆ 13,604 ಗರ್ಭಿಣಿಯರು,12,677 ಬಾಣಂತಿಯರು ಅಂಗನವಾಡಿಕೇಂದ್ರಗಳಲ್ಲಿ ದಾಖಲಾಗಿದ್ದು, ಒಟ್ಟು 26,281ಫಲಾನುಭವಿಗಳಿದ್ದಾರೆ. ಇದರಲ್ಲಿ 12,197ಗರ್ಭಿಣಿಯರು, 12,014 ಬಾಣಂತಿಯರುಸೇರಿದಂತೆ ಒಟ್ಟು 24,211 ಫಲಾನುಭವಿಗಳುಮಾತೃಪೂರ್ಣ ಯೋಜನೆಯಡಿ ಬಿಸಿಯೂಟಕ್ಕೆಹಾಜರಾಗಿದ್ದು, ಶೇ. 92.12ರಷ್ಟು ಸಾಧನೆಮಾಡಲಾಗಿದೆ ಎಂದು ಮಾಹಿತಿ ನೀಡಿದರು.
6 ತಿಂಗಳಿಂದ 6 ವರ್ಷದವರೆಗಿನ 1,26,198ಮಕ್ಕಳಿದ್ದು, ಇದರಲ್ಲಿ 1,12,508 ಸಾಮಾನ್ಯಮಕ್ಕಳಿದ್ದಾರೆ. 6804 ಸಾಧಾರಣ ಕಡಿಮೆ ತೂಕದಮಕ್ಕಳಿದ್ದು, ಇದರಲ್ಲಿ 4842 ಮಕ್ಕಳು ತಪಾಸಣೆಗೆಒಳಗಾಗಿದ್ದಾರೆ. 126 ಮಕ್ಕಳು ವಿಪರೀತ ಕಡಿಮೆತೂಕದ ಮಕ್ಕಳಿದ್ದಾರೆ. ಇದರಲ್ಲಿ 121 ಮಕ್ಕಳುತಪಾಸಣೆಗೆ ಒಳಗಾಗಿದ್ದಾರೆ ಎಂದರು.