Advertisement

ಅಗ್ನಿಪಥ ಯೋಜನೆ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

05:46 PM Jun 25, 2022 | Team Udayavani |

ಚಿತ್ರದುರ್ಗ: ಸೇನೆಗೆ ಯುವಕರನ್ನು ನಿಯೋಜನೆಮಾಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರಹೊಸದಾಗಿ ರೂಪಿಸಿರುವ ಅಗ್ನಿಪಥ ಯೋಜನೆಕೈ ಬಿಡಲು ಆಗ್ರಹಿಸಿ ವಿವಿಧ ಸಂಘಟನೆಗಳಮುಖಂಡರು ಪ್ರತಿಭಟಿಸಿದರು.ಜಿಲ್ಲಾ ಧಿಕಾರಿ ಕಚೇರಿ ಎದುರು ಶುಕ್ರವಾರಸಂಯುಕ್ತ ಕಿಸಾನ್‌ ಮೋರ್ಚಾ ಕರೆಯಮೇರೆಗೆ ಪ್ರತಿಭಟನೆ ನಡೆಸಿದ ಮುಖಂಡರು,ಕೇಂದ್ರ ಸರ್ಕಾರ ಏಕಾಏಕಿ ಸೈನ್ಯಕ್ಕೆ ಗುತ್ತಿಗೆಆಧಾರದಲ್ಲಿ ಕೇವಲ ನಾಲ್ಕು ವರ್ಷಗಳಅವ ಧಿಗೆ ನೇಮಕಾತಿ ಮಾಡಲು ಅಗ್ನಿಪಥಯೋಜನೆ ರೂಪಿಸಿದೆ. ಇದನ್ನು ಕೂಡಲೇನಿಲ್ಲಿಸಬೇಕು.

Advertisement

ಇದರ ಬದಲಾಗಿ ಈ ಹಿಂದೆ ಇದ್ದಪದ್ಧತಿಯನ್ನೇ ಮುಂದುವರಿಸಬೇಕು ಎಂದುಒತ್ತಾಯಿಸಿದರು.ನೇಮಕಾತಿಗಾಗಿ ಅರ್ಹತಾ ಪರೀಕ್ಷೆಗಳನ್ನುಪೂರೈಸಿದ ಲಕ್ಷಾಂತರ ಯುವಕರು ಕಳೆದಎರಡೂವರೆ ವರ್ಷಗಳಿಂದ ಕಾಯುತ್ತಿರುವಾಗ,ಈಗ ಏಕಾಏಕಿ ಕೇಂದ್ರ ಸರ್ಕಾರ ಅಗ್ನಿಪತ್‌ಎಂಬ ಗುತ್ತಿಗೆ ಆಧಾರಿತ ಸೇನಾ ನೇಮಕಾತಿಹೊಸ ಯೋಜನೆಯನ್ನು ಏಕಪಕ್ಷಿಯವಾಗಿಘೋಷಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.ಸರ್ಕಾರದ ಈ ನಿರ್ಧಾರವೇ ಯುವಕರಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next