Advertisement

ಚಿತ್ರದುರ್ಗ ನಗರಸಭೆ: 1.04 ಕೋಟಿ ಉಳಿತಾಯ ಬಜೆಟ್‌ ಮಂಡ್ಯ

07:04 PM Mar 17, 2022 | Team Udayavani |

ಚಿತ್ರದುರ್ಗ: ಕೋಟೆನಗರಿ ಚಿತ್ರದುರ್ಗದ ನಿರ್ವಹಣೆ,ಅಭಿವೃದ್ಧಿ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮವೆಂಕಟೇಶ್‌ 2022-23ನೇ ಸಾಲಿಗೆ 144.7 ಕೋಟಿರೂ. ಮೊತ್ತದ ಬಜೆಟ್‌ ಮಂಡನೆ ಮಾಡಿದರು.ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಸಭೆ ನಡೆಸಿದ ಅವರು, ಬೀದಿದೀಪ, ಕುಡಿಯುವನೀರು, ಶೌಚಾಲಯ, ಉದ್ಯಾನವನಗಳ ನಿರ್ವಹಣೆಸೇರಿದಂತೆ ಹಲವು ಆದ್ಯತೆಗಳನ್ನು ವಿವರಿಸಿ ಒಟ್ಟಾರೆ1.04 ಕೋಟಿ ರೂ. ಉಳಿತಾಯ ಬಜೆಟ್‌ ಮಂಡನೆಮಾಡಿದ್ದಾರೆ.ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ಅವರ ಪರವಾಗಿಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್‌ ಬಜೆಟ್‌ಪ್ರತಿಯನ್ನು ಓದಿದರು.

Advertisement

ಬಜೆಟ್‌ನಲ್ಲಿ ಹೊಸ ಅಭಿವೃದ್ಧಿಕಾಮಗಾರಿಗಳು, ಆದಾಯ, ಖರ್ಚು-ವೆಚ್ಚ ಹಾಗೂನಗರದ ಹಿತದೃಷ್ಟಿಯಿಂದ ತೆಗೆದುಕೊಂಡಿರುವಕ್ರಮಗಳಿಗೆ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರು.ನಗರಸಭೆಗೆ ತೆರಿಗೆಯಿಂದ 53.37 ಕೋಟಿರೂ., ಸರ್ಕಾರದ ಅನುದಾನ ಹಾಗೂಇನ್ನಿತರೆ ಮೂಲಗಳಿಂದ 58.65 ಕೋಟಿ ರೂ.ಸಂಗ್ರಹವಾಗಲಿದೆ. ಪ್ರಾರಂಭಿಕ ಶಿಲ್ಕು 32 ಕೋಟಿರೂ. ಇದೆ. ಎಲ್ಲಾ ಮೂಲಗಳಿಂದ ಮುಂದಿನಆರ್ಥಿಕ ವರ್ಷದಲ್ಲಿ ನಗರಸಭೆಗೆ 145.11ಕೋಟಿ ರೂ. ಆದಾಯ ಬರಲಿದ್ದು, ಇದರಲ್ಲಿ144.7 ಕೋಟಿ ರೂ. ವೆಚ್ಚಕ್ಕೆ ಅಂದಾಜು ಪಟ್ಟಿಸಿದ್ಧಪಡಿಸಲಾಗಿದೆ.

ಇದರಲ್ಲಿ ಇನ್ನೂ 1.04 ಕೋಟಿರೂ. ಉಳಿತಾಯವಾಗಲಿದೆ ಎಂದು ಶ್ರೀನಿವಾಸ್‌ವಿವರಿಸಿದರು. ನಗರದಲ್ಲಿ ರಸ್ತೆ, ಚರಂಡಿ ಹಾಗೂಪಾದಚಾರಿ ಮಾರ್ಗದ ಅಭಿವೃದ್ಧಿಗೆ 15 ಕೋಟಿರೂ. ಅನುದಾನ ವಿಯೋಗ ಮಾಡಲಾಗುವುದು.ನಗರಸಭೆ ಕಟ್ಟಡದ ನವೀಕರಣಕ್ಕೆ 2.5 ಕೋಟಿರೂ., ತ್ಯಾಗರಾಜ ಮಾರುಕಟ್ಟೆಯಲ್ಲಿ ವಾಣಿಜ್ಯಸಂಕೀರ್ಣ ಹಾಗೂ ಮಾಂಸ ಮಾರುಕಟ್ಟೆಯವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿ ಒಟ್ಟು9 ಕೋಟಿ ರೂ., ಕಸ ಸಂಗ್ರಹಣೆ, ವಿಂಗಡಣೆ,ವಿಲೇವಾರಿ, ನೈರ್ಮಲೀಕರಣಕ್ಕೆ 12 ಕೋಟಿ ರೂ.,ವಿದ್ಯುದೀಕರಣಕ್ಕೆ 5 ಕೋಟಿ ರೂ., ಒಳಚರಂಡಿನಿರ್ಮಾಣ, ನಿರ್ವಹಣೆಗೆ 5 ಕೋಟಿ ರೂ,ಕುಡಿಯುವ ನೀರಿನ ಸೌಲಭ್ಯಕ್ಕೆ 4.5 ಕೋಟಿ ರೂ.ಮೀಸಲಿಡಲಾಗಿದೆ. ನಗರದಲ್ಲಿ ಕೊಳವೆ ಮಾರ್ಗನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳಸ್ಥಾಪನೆ, ಕೊಳವೆ ಬಾವಿ ಕೊರೆಯಿಸುವುದುಸೇರಿದಂತೆ ಹಲವು ಕಾಮಗಾರಿಗಳಿಗೆ ಅನುದಾನಮೀಸಲಿಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next