Advertisement

ಸದಾಶಿವ ಆಯೋಗದ ವರದಿ ಜಾರಿಯಾಗಲಿ

01:44 PM Sep 28, 2021 | Team Udayavani |

ಚಿತ್ರದುರ್ಗ: ನ್ಯಾಯಮೂರ್ತಿ ಸದಾಶಿವಆಯೋಗದ ವರದಿ ಜಾರಿಗೊಳಿಸದಿದ್ದರೆಮೀಸಲಾತಿ ಹಾಗೂ ಸಂವಿಧಾನಕ್ಕೆಅವಮಾನ ಮಾಡಿದಂತಾಗುತ್ತದೆ.ಕೂಡಲೆ ವರದಿಯನ್ನು ಯಥಾವತ್ತಾಗಿಜಾರಿಗೊಳಿಸಬೇಕು ಎಂದು ಕರ್ನಾಟಕದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಾ|ಎನ್‌.ಮೂರ್ತಿ ಒತ್ತಾಯಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸದಾಶಿವಆಯೋಗದ ವರದಿ ಜಾರಿಗೆ ಕಳೆದ 28ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹೋರಾಟ, ಚಳುವಳಿ, ಪ್ರತಿಭಟನೆ,ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹೀಗೆಎಲ್ಲಾ ರೀತಿಯಿಂದಲೂ ಒತ್ತಾಯಿಸುತ್ತಲೆಬರುತ್ತಿದ್ದರೂ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಚುನಾವಣೆಯಲ್ಲಿ ಮತ ಬಳಕೆಗಷ್ಟೆಬಳಸಿಕೊಳ್ಳುತ್ತಿವೆ.

ಹೊಲೆಯ, ಮಾದಿಗಸಮುದಾಯದಲ್ಲಿ ಭಿನ್ನಾಭಿಪ್ರಾಯವಿದೆ.ಅವರೊಂದಿಗೆ ಚರ್ಚಿಸುತ್ತೇನೆ ಎಂದುಸಿದ್ದರಾಮಯ್ಯ ಭರವಸೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಸದಾಶಿವಆಯೋಗದ ವರದಿ ಜಾರಿ ಕುರಿತು ಪ್ರಣಾಳಿಕೆಯಲ್ಲಿಡುತ್ತೇನೆ ಎಂದು ಹೇಳಿ ಪ್ರಯತ್ನ ಕೂಡ ಮಾಡಲಿಲ್ಲ. ರಾಜ್ಯದಲ್ಲಿದಲಿತರ ಸ್ಥಿತಿ ಹೀನಾಯವಾಗಿದೆ. ಸದಾಶಿವಆಯೋಗದ ವರದಿ ಜಾರಿಗೆ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿಕೇಂದ್ರ ಮಂತ್ರಿ ನಾರಾಯಣಸ್ವಾಮಿಹೇಳಿರುವುದಕ್ಕೆ ಪಶುಸಂಗೋಪನಾ ಸಚಿವ ವಿರೋಧ ವ್ಯಕ್ತಪಡಿಸುತ್ತಿರುವುದು ಯಾವ ನ್ಯಾಯ, ಸದಾಶಿವ ಆಯೋಗದವರದಿಯನ್ನು ವಿರೋಧಿಸುವವರು ಮೊದಲು ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳಲಿ ಎಂದು ಕುಟುಕಿದರು.

ಕೇಂದ್ರ ಮಂತ್ರಿನಾರಾಯಣಸ್ವಾಮಿಯನ್ನು ತೇಜೋವಧೆಮಾಡುತ್ತಿರುವ ಸಚಿವ ಪ್ರಭು ಚೌವ್ಹಾಣ್‌ಅವರನ್ನು ಕೂಡಲೆ ಸಚಿವ ಸಂಪುಟದಿಂದಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತಅವರ ವಿರುದ್ಧ ಹೋರಾಟ ಮಾಡುತ್ತೇವೆ.ಎಲ್ಲೆಲ್ಲಿ ಅವರು ಪ್ರವಾಸ ಕೈಗೊಳ್ಳುತ್ತಾರೋಅಲ್ಲೆಲ್ಲಾ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ.ಜಾತಿ ನಿಂದನೆ ಕೇಸು ದಾಖಲಿಸಿಪಶುಸಂಗೋಪನಾ ಸಚಿವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಕೊರಮ, ಕೊರಚ, ಭೋವಿ,ಲಂಬಾಣಿಯನ್ನು ಕೈಬಿಡುವಂತೆ ಎಲ್ಲಿಯೂಹೇಳಿಲ್ಲ. ಶೇ.3 ರಷ್ಟು ಮೀಸಲಾತಿನೀಡುವುದಾಗಿ ಹೇಳಿದೆ. ಕೇಂದ್ರ ಮಂತ್ರಿಎ. ನಾರಾಯಣಸ್ವಾಮಿ ಅವರಿಗೆ ದಲಿತರಬಗ್ಗೆ ಕಾಳಜಿಯಿದೆ ಎನ್ನುವುದನ್ನು ಮೊದಲುಸದಾಶಿವ ಆಯೋಗದ ವರದಿಯನ್ನುವಿರೋ ಧಿಸುವವರು ಅರ್ಥಮಾಡಿಕೊಳ್ಳಲಿ.ಕಳೆದ ಒಂಭತ್ತು ವರ್ಷಗಳಿಂದ ಸದಾಶಿವ ಆಯೋಗದ ವರದಿ ಕೋಲ್ಡ್‌ ಸ್ಟೋರೇಜ್‌ನಲ್ಲಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು ಎಂದರು.

Advertisement

ಭೀಮ್‌ ಆರ್ಮಿ ಜಿಲ್ಲಾಧ್ಯಕ್ಷಅವಿನಾಶ್‌ ಮಾತನಾಡಿ, ಸದಾಶಿವಆಯೋಗದ ವರದಿ ಜಾರಿಗೊಳಿಸುವಲ್ಲಿಸರ್ಕಾರಗಳು ವಿಫಲವಾದರೆ ಗಾಂಧಿ ಜಯಂತಿಯಂದು ಜಿಲ್ಲಾ ಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹಮಾಡುತ್ತೇವೆ ಎಂದು ತಿಳಿಸಿದರು. ಮಾದಿಗಸಮಾಜದ ಮುಖಂಡ ತಿಪ್ಪೇಸ್ವಾಮಿಮಾತನಾಡಿ, ಬಹು ಸಂಖ್ಯೆಯಲ್ಲಿರುವಮಾದಿಗ ಸಮಾಜದವರು ಕಳೆದ 25ವರ್ಷಗಳಿಂದಲೂ ಸದಾಶಿವ ಆಯೋಗದ ವರದಿ ಜಾರಿಗಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಎಂದರು.ಕುಂಚಿಗನಹಾಳ್‌ ಮಹಾಲಿಂಗಪ್ಪ,ಡಿಎಸ್‌ಎಸ್‌ ಮುಖಂಡರಾದ ನೇಹಮಲ್ಲೇಶ್‌, ಕೃಷ್ಣಮೂರ್ತಿ, ಮಂಜುನಾಥ್‌,ಏಕಾಂತಪ್ಪ, ಎನ್‌.ಸತೀಶ್‌ಕುಮಾರ್‌, ತಿಪ್ಪೇಸ್ವಾಮಿ, ರಂಗಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next