Advertisement

ನಾಳೆಯಿಂದ ಮಹಾಶಿವರಾತ್ರಿ ಮಹೋತ್ಸವ

08:09 PM Feb 24, 2022 | Team Udayavani |

ಚಿತ್ರದುರ್ಗ: ಆರೂಢ ಪರಂಪರೆ ಹಾಗೂ ಜಾತ್ಯತೀತಮಠವಾಗಿರುವ ಇಲ್ಲಿನ ಸದ್ಗುರು ಕಬೀರಾನಂದಆಶ್ರಮದಲ್ಲಿ ಫೆ. 25ರಿಂದ ಮಾರ್ಚ್‌ 1ರವರೆಗೆ 92ನೇಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ನಾಡಿನವಿವಿಧ ಮಠಾ ಧೀಶರು, ವಾಗ್ಮಿಗಳು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀಶಿವಲಿಂಗಾನಂದ ಸ್ವಾಮೀಜಿ ತಿಳಿಸಿದರು.

Advertisement

ಕಬೀರಾನಂದ ಮಠದಲ್ಲಿ ಬುಧವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಫೆ.25ರಂದು ಸಂಜೆ 6:30ಕ್ಕೆ ಶಿವರಾತ್ರಿ ಮಹೋತ್ಸವಕ್ಕೆಆದಿಚುಂಚನಗಿರಿ ಮಠದ ಡಾ| ನಿರ್ಮಲಾನಂದನಾಥಸ್ವಾಮೀಜಿ ಚಾಲನೆ ನೀಡುವರು.

ನೂತನಸಭಾಮಂಟಪವನ್ನು ದೊಡ್ಡೇರಿ ಶ್ರೀ ದತ್ತಾವಧೂತಆಶ್ರಮದ ಸತ್‌ ಉಪಾಸಿ ಅವಧೂತರು, ಯೋಗವನಬೆಟ್ಟದ ಅಧ್ಯಕ್ಷರಾದ ಡಾ| ಬಸವಕುಮಾರ ಸ್ವಾಮಿಗಳು,ಡಾಬಸ್‌ಪೇಟೆ ಮನಕಲ್ಲು ಮಲ್ಲೇಶ್ವರ ಮಠದ ಶ್ರೀರಮಾನಂದ ಸ್ವಾಮಿಗಳು ಉದ್ಘಾಟಿಸುವರು.

ಮುಖ್ಯಅತಿಥಿಗಳಾಗಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ,ವಿಧಾನ ಪರಿಷತ್‌ ಸದಸ್ಯರಾದ ರವಿಕುಮಾರ್‌,ಕೆ.ಎಸ್‌. ನವೀನ್‌, ನಾಟಕ ಅಕಾಡೆಮಿ ಅಧ್ಯಕ್ಷಆರ್‌. ಭೀಮಸೇನ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ,ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್‌ಮತ್ತಿತರರು ಭಾಗವಹಿಸುವರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next