Advertisement

ಲಸಿಕಾ ಕಾರ್ಯಕ್ರಮಕ್ಕಿದೆ ವೈಜ್ಞಾನಿಕ ದೃಷ್ಟಿಕೋನ: ರಘುಮೂರ್ತಿ

03:10 PM Sep 27, 2021 | Team Udayavani |

ನಾಯಕನಹಟ್ಟಿ: ಸಾರ್ವಜನಿಕರು ಕೊರೊನಾಲಸಿಕೆ ಕಾರ್ಯಕ್ರಮವನ್ನು ವೈಜ್ಞಾನಿಕದೃಷ್ಟಿಕೋನದಲ್ಲಿ ನೋಡುವುದು ಅಗತ್ಯ ಎಂದುಚಳ್ಳಕೆರೆ ತಹಶೀಲ್ದಾರ್‌ ಎನ್‌. ರಘುಮೂರ್ತಿಹೇಳಿದರು.

Advertisement

ಪಟ್ಟಣದ ಜಾಮಿಯಾ ಮಸೀದಿಯಲ್ಲಿನಡೆದ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ಪಪಂ ವ್ಯಾಪ್ತಿಯಲ್ಲಿ ಅತ್ಯಂತಕಡಿಮೆ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆಎಂದು ಸಾರ್ವಜನಿಕರು ದೂರಿದ್ದಾರೆ.

ಗ್ರಾಮೀಣಜನರು ಆಧಾರ ರಹಿತ ಊಹೆಗಳಿಂದ ಲಸಿಕೆಪಡೆಯಲು ಹಿಂಜರಿಯುತ್ತಿದ್ದಾರೆ. ಚಳ್ಳಕೆರೆತಾಲೂಕಿನ ಅಜ್ಜನಹಳ್ಳಿ ಗ್ರಾಮದ ಗ್ರಾಮಸ್ಥರುಲಸಿಕೆ ಕಾರಣದಿಂದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಆರೋಪಿಸಿದರು.

ತನಿಖೆ ನಡೆಸಿದ ನಂತರ ಆವ್ಯಕ್ತಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿರುವುದುಬೆಳಕಿಗೆ ಬಂದಿತು. ವಿಶ್ವ ಮಟ್ಟದಲ್ಲಿ ದೃಢೀಕೃತವಾದ ಲಸಿಕೆಗಳನ್ನು ಆಧಾರ ರಹಿತವಾಗಿತಿರಸ್ಕರಿಸುವುದು ಸರಿಯಲ್ಲ ಎಂದರು.ವೈಜ್ಞಾನಿಕ ಹಿನ್ನೆಲೆಯಿಂದ ರೂಪಿತವಾದಲಸಿಕೆ ಪಡೆಯಬೇಕು.

ಸಂಭಾವ್ಯ ಮೂರನೇಅಲೆಯಿಂದ ಜನರನ್ನು ರಕ್ಷಿಸಿಕೊಳ್ಳುವುದುಅವಶ್ಯಕ. ಪಟ್ಟಣದಲ್ಲಿ ಲಸಿಕೆ ಪ್ರಮಾಣ ಕಡಿಮೆಇರುವುದರಿಂದ ಪಟ್ಟಣ ವ್ಯಾಪ್ತಿಯಲ್ಲಿ ಬೃಹತ್‌ಪ್ರಮಾಣದಲ್ಲಿ ಜಾಗೃತಿ ಸಭೆಗಳು ಹಾಗೂ ಲಸಿಕಾಆಂದೋಲನ ನಡೆಸಲು ಉದ್ದೇಶಿಸಲಾಗಿದೆಎಂದು ತಿಳಿಸಿದರು.

Advertisement

ಮೌಲಾನ ಮುμ¤ ಸೋಹೆಲ್‌ ಮಾತನಾಡಿ,ತಾಲೂಕು ಆಡಳಿತ ವತಿಯಿಂದ ಲಸಿಕಾ ಮೇಳಏರ್ಪಡಿಸಿದರೆ ಸಮುದಾಯದ ವತಿಯಿಂದಎಲ್ಲ ರೀತಿಯ ಸಹಕಾರ ನೀಡಲಾಗುವುದು.ಈಗಾಗಲೇ ಎರಡು ಅಲೆಗಳಲ್ಲಿ ಸಾಕಷ್ಟು ಜನರುಸಾವೀಗೀಡಾಗಿದ್ದಾರೆ. ಮೂರನೇ ಅಲೆಯಲ್ಲಿಇದು ಮರುಕಳಿಸಬಾರದು ಎಂದರು.

ತಾಲೂಕು ವೈದ್ಯಾಧಿಕಾರಿ ಡಾ| ಪ್ರೇಮಸುಧಾಮಾತನಾಡಿ, ಚಳ್ಳಕೆರೆ ತಾಲೂಕಿಗೆ 25 ಸಾವಿರಲಸಿಕೆ ನೀಡಲು ಇಲಾಖೆ ಒಪ್ಪಿದೆ. ಬೃಹತ್‌ಲಸಿಕಾ ಮೇಳ ಏರ್ಪಡಿಸಿ ಪಟ್ಟಣದಲ್ಲಿ ಒಂದೇದಿನ 5 ಸಾವಿರ ಲಸಿಕೆ ನೀಡಲಾಗುವುದು ಎಂದುತಿಳಿಸಿದರು. ಪಪಂ ಮುಖ್ಯಾಧಿಕಾರಿ ಕೋಡಿಭೀಮರಾಯ, ಮುಖಂಡರಾದ ಮೊಹಮ್ಮದ್‌ರμàಕ್‌, ಮನ್ಸೂರ್‌, ಏಜಾಸ್‌ ಭಾಷಾ, ಕೌಸರ್‌ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next