ಹೊಸದುರ್ಗ: ವಿವಿಧ ಹಂತಗಳಲ್ಲಿ ಹಿಂದುಳಿದಿರುವಉಪ್ಪಾರ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯಕಲ್ಪಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸುಮಾಡಬೇಕು ಎಂದು ಭಗೀರಥ ಮಠದಡಾ| ಪುರುಷೋತ್ತಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.
ತಾಲೂಕಿನ ಭಗೀರಥ ಮಠದಲ್ಲಿಗುರುವಾರ ನಡೆದ 23ನೇ ಪಟ್ಟಾಭಿಷೇಕಮಹೋತ್ಸವದಲ್ಲಿ ಭಕ್ತರಿಂದ ಗೌರವ ಸ್ವೀಕರಿಸಿಶ್ರೀಗಳು ಮಾತನಾಡಿದರು. ಹಿಂದುಳಿದ ದಲಿತಮಠಾಧೀಶರ ಒಕ್ಕೂಟದಿಂದ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರನ್ನು ಭೇಟಿಮಾಡಿದ್ದು, 35 ಹಿಂದುಳಿದ ದಲಿತ ಮಠಗಳಿಗೆತಲಾ 5 ಕೋಟಿ ರೂ. ಅನುದಾನ, ಬೆಂಗಳೂರಿನಲ್ಲಿಶಿಕ್ಷಣ ಸಂಸ್ಥೆ ಆರಂಭಿಸಲು ವಿವಾದ ರಹಿತ 5ಎಕರೆ ಜಮೀನು ಮಂಜೂರು ಮಾಡುವಂತೆಮನವಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಹಿಂದುಳಿದ ಮಠಗಳಿಗೆ ಶುಭಸಂದೇಶ ನೀಡಲಿದ್ದಾರೆ ಎಂದರು.
ಉಪ್ಪಾರ ಸಮಾಜಕ್ಕೆ ಯಾವ ಪಕ್ಷಗಳೂ ಸೂಕ್ತರಾಜಕೀಯ ಪ್ರಾತಿನಿಧ್ಯ ನೀಡಿಲ್ಲ. ಮುಂದಿನಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ತಲಾಐದು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವ ಮೂಲಕಅಭ್ಯರ್ಥಿಯನ್ನು ವಿಧಾನಸೌಧಕ್ಕೆ ಕರೆದುಕೊಂಡುಹೋಗಬೇಕು. ಅಧಿಕಾರಕ್ಕೆ ಬರುವ ಪಕ್ಷ ಉಪ್ಪಾರಸಮಾಜದ ಮುಖಂಡರನ್ನು ಗುರುತಿಸಿ ವಿವಿಧನಿಗಮ ಮಂಡಳಿಗೆ ಅಧ್ಯಕ್ಷ ಸ್ಥಾನ ನೀಡಬೇಕುಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಮೂಲಕ ಮಠದ ಮುಂದೆ ಗಂಗೆ ಹರಿಯಲುಸಿದ್ಧಳಾಗಿರುವುದು ನಮ್ಮೆಲ್ಲರ ಪುಣ್ಯ. ಮಠದಲ್ಲಿಭುವನೇಶ್ವರಿದೇವಿಯ ಕಲ್ಲಿನ ರಥ, ಥೀಮ್‌ಪಾರ್ಕ್, ದೇವಸ್ಥಾನಗಳು ನಿರ್ಮಾಣವಾಗಲಿವೆಎಂದರು.ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಗಿರೀಶ್‌ಉಪ್ಪಾರ್ ಮಾತನಾಡಿ, ಪುರುಷೋತ್ತಮಾನಂದಶ್ರೀಗಳು ಸಮಾಜ ಮತ್ತು ಮಠದ ಅಭಿವೃದ್ಧಿಗೆಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಕಾರ್ಯಗಳಿಗೆಸಮಾಜದ ಬೆಂಬಲವಿದೆ ಎಂದರು.3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವಭಗೀರಥ ದೇವಸ್ಥಾನವನ್ನು ಶ್ರೀಗಳುಲೋಕಾರ್ಪಣೆ ಮಾಡಿದರು.
ಬಿ.ಆರ್.ರಾಜಗೋಪಾಲ ಆಚಾರ್ಯ, ಹಳೆಕುಂದೂರುವೆಂಕಟೇಶ್ ನೇತೃತ್ವದಲ್ಲಿ ಧಾರ್ಮಿಕಕಾರ್ಯಗಳು ಜರುಗಿದವು. ಈ ವೇಳೆ ಮಾಜಿಸಂಸದ ವಿರೂಪಾಕ್ಷಪ್ಪ, ಉಪ್ಪಾರ ಸಮಾಜದಮುಖಂಡರಾದ ಲಕ್ಷ್ಮಣ ಉಪ್ಪಾರ್, ವೆಂಕಟೇಶ್,ಮಧುರೆ ನಟರಾಜ್, ವಿಶಾಲಾಕ್ಷಿ, ಕೊಂಡಾಪುರಮಂಜುನಾಥ್, ಐಲಾಪುರ ಮಲ್ಲಿಕಾರ್ಜುನ್,ಉಪನ್ಯಾಸಕ ಸುರೇಶ್, ಪ್ರಕಾಶ್, ಸಾಹಿತಿಮೈಲಾರಪ್ಪ ಮತ್ತಿತರರು ಇದ್ದರು.