Advertisement

ಮುರುಘಾ ಮಠದಲ್ಲಿ ಸರಳ ವಿವಾಹ

05:37 PM May 06, 2020 | Naveen |

ಚಿತ್ರದುರ್ಗ: ಕೋವಿಡ್ ಸಂಕಟದ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮುರುಘಾ ಮಠದಲ್ಲಿ ಮಂಗಳವಾರ ಸರಳವಾಗಿ ಕಲ್ಯಾಣ ಮಹೋತ್ಸವ ನೆರವೇರಿತು. ಸಾನ್ನಿಧ್ಯ ವಹಿಸಿದ್ದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಕೋವಿಡ್ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಹಾಗಾಗಿ ಅಂತರವಿರಬೇಕು. ಜೀವವೊಂದಿದ್ದರೆ ಜೀವನದಲ್ಲಿ ಅಂದುಕೊಂಡದ್ದನ್ನೆಲ್ಲ ಸಾಧಿಸಬಹುದು. ಬೇಕಾದುದ್ದನ್ನೆಲ್ಲ ಪಡೆಯಬಹುದು. ಜನರು ಜೀವದ ಬೆಲೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

ಇದೇ ವೇಳೆ ಶ್ರೀ ಜಯವಿಭವ ಸ್ವಾಮಿಗಳ ಸ್ಮರಣೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಜಯವಿಭವ ಸ್ವಾಮಿಗಳಿಗೆ ಪ್ರಾಣಿ ಪಕ್ಷಿಗಳ ಮೇಲೆ ಅತ್ಯಂತ ಪ್ರೀತಿ. ಜಮೀನಿನ ಮೇಲೂ ಪ್ರೀತಿ ಇಟ್ಟುಕೊಂಡಿದ್ದರು. ಶ್ರೀಮಠ ಹಾಗು ನಿಸರ್ಗದ ಮೇಲೆ ವಿಶ್ವಾಸ ಇತ್ತು. ಜಯವಿಭವ ಸ್ವಾಮಿಗಳು ಪ್ರಖಾಂಡ ಪಂಡಿತರು ಹಾಗು ಕೃಷಿ ಪ್ರೇಮಿಗಳಾಗಿದ್ದರು. ಅನೇಕ ಬಾರಿ ಜಯದೇವ ಸ್ವಾಮಿಗಳ ಜೊತೆ ವೈಚಾರಿಕ ಚಿಂತನೆ ಮಾಡುತ್ತಿದ್ದರು ಎಂದು ಸ್ಮರಿಸಿದರು.

ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡೀನ್‌ ಡಾ| ಪ್ರಶಾಂತ್‌, ವೀರಶೈವ ಸಮಾಜದ ಕಾರ್ಯದರ್ಶಿ ಪಟೇಲ್‌ ಶಿವಕುಮಾರ್‌, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ಲಿಂಗರಾಜು, ಆರ್‌. ಲಿಂಗರಾಜು ಇದ್ದರು. 4 ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next