Advertisement

ಮುರುಘಾ ಮಠ ಸಮಾಜ ಪರಿವರ್ತನಾ ಕೇಂದ್ರ:ಸಿದ್ಧಲಿಂಗಯ್ಯ

04:38 PM Oct 06, 2019 | Naveen |

ಚಿತ್ರದುರ್ಗ: ಧಾರ್ಮಿಕ ಪೀಠವನ್ನು ಸಮಾಜ ಪರಿವರ್ತನಾ ಕೇಂದ್ರವನ್ನಾಗಿ ಮಾಡಿರುವ ಚಿತ್ರದುರ್ಗ ಮುರುಘಾ ಮಠ ಎಲ್ಲರಿಗೂ ಮಾದರಿ ಎಂದು ಸಾಹಿತಿ ಸಿದ್ದಲಿಂಗಯ್ಯ ಹೇಳಿದರು.

Advertisement

ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವದ ಶನಿವಾರದ ಸಭಾ ಕಾರ್ಯಕ್ರಮದಲ್ಲಿ “ಮುರುಘಾಶ್ರೀ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿ, ಮುರುಘಾಮಠ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ನನಗೆ ಪ್ರಶಸ್ತಿ ನೀಡಿರುವುದು ಮುರುಘಾ ಶರಣರ ಔದಾರ್ಯ ಎಂದರು.

ಸಾಮೂಹಿಕ ವಿವಾಹ ಸಾವಿರಾರು ಕುಟುಂಬಗಳನ್ನು ಸಾಲದ ಬಾಧೆಯಿಂದ ಹೊರತರುವ ಕೆಲಸ ಮಾಡಿದೆ. ಅಂಧ ಶ್ರದ್ಧೆ, ಮೌಡ್ಯದಿಂದ ಸಮಾಜವನ್ನು ಹೊರ ತರುವ ಕೆಲಸ ಮಠದಿಂದ ಆಗಿದೆ. ವಿವಿಧ ಸಮುದಾಯಗಳಿಗೆ ಗುರು ದೀಕ್ಷೆ ನೀಡಿದ್ದಾರೆ ಎಂದು ಬಣ್ಣಿಸಿದರು.

ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಮುರುಘಾ ಶಾಂತವೀರ
ಸ್ವಾಮೀಜಿ ಚಿತ್ರದುರ್ಗದಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದು ಅರಸರಾದ ಭರಮಣ್ಣ ನಾಯಕ ಅವರು. ಕೋಟೆ ಮತ್ತು ಕೆರೆಯ ದಡದಲ್ಲಿ ಮಠ ಸ್ಥಾಪಿಸುವ ಮೂಲಕ ಹೊಸ ಪರಂಪರೆಯನ್ನು ಹುಟ್ಟು ಹಾಕಿದರು. ಆಗ ಗುರು ಮತ್ತು ಶಿಷ್ಯರ ಸಂಬಂಧ ಆಪ್ತವಾಗಿತ್ತು ಎಂದರು.

‘ಅರಸು ಮನೆತನದ ಜೊತೆಗೆ ಮುರುಘಾಮಠ ಅನುಪಮ ಸಂಬಂಧ ಹೊಂದಿತ್ತು. ಚಿತ್ರದುರ್ಗದ ಮುರುಘಾ ಮಠದ ಪರಂಪರೆಯ ದೇಶದ ಎಲ್ಲೆಡೆ ಪಸರಿಸಿದೆ. 12ನೇ ಶತಮಾನದಲ್ಲಿ ಬಸವಣ್ಣ ನೀಡಿದ ದಾಸೋಹ ಪರಂಪರೆಯನ್ನು ಮುರುಘಾಮಠ ಮುಂದುವರೆಸಿದೆ. ಬರ ಪರಿಸ್ಥಿತಿ ತಲೆದೋರಿದ ಸಂದರ್ಭದಲ್ಲಿ ದಾಸೋಹದ ಮೂಲಕ ಜನರಿಗೆ ನೆರವು ನೀಡಿದೆ ಎಂದು ಹೇಳಿದರು.

Advertisement

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ವಾಣಿಜ್ಯೋದ್ಯಮಿ ಜಯಕುಮಾರ್‌, ಸಾಹಿತಿ ಸಿದ್ದಲಿಂಗಯ್ಯ, ಸಾಮಾಜಿಕ ಹೋರಾಟಗಾರ ಮುರುಘಾರಾಜೇಂದ್ರ ಒಡೆಯರ್‌ ಅವರಿಗೆ “ಮುರುಘಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಡ್ಯದ ಯುವ ವಿಜ್ಞಾನಿ ಎನ್‌.ಎಂ.ಪ್ರತಾಪ್‌ ಅವರಿಗೆ “ಭರಮಣ್ಣ ನಾಯಕ ಶೌರ್ಯ ಪ್ರಶಸ್ತಿ’ ಪ್ರದಾನ
ಮಾಡಲಾಯಿತು. ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next