Advertisement
ಆದರೆ 11 ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 38,940 ಲೀಡ್ ಪಡೆದು ಆಯ್ಕೆಯಾಗಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಭಾರೀ ಲೀಡ್ ದೊರಕುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಿಸ್ಥಿತಿಯಲ್ಲಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೇವಲ 3553 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು.
Related Articles
Advertisement
ಕಡಿಮೆ ಮತದಾನ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.83.29 ರಷ್ಟು ಮತದಾನವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಶೇ.72.71ರಷ್ಟು ಮತದಾನ ಆಗುವ ಮೂಲಕ ಶೇ.10.58ರಷ್ಟು ಕಡಿಮೆ ಮತದಾನವಾಗಿದ್ದು, ಫಲಿತಾಂಶದ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎನ್ನುವ ಚರ್ಚೆ ಗಂಭೀರವಾಗಿ ನಡೆಯುತ್ತಿದೆ.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 297 ಮತಗಟ್ಟೆಗಳಲ್ಲಿ 227510 ಮತದಾರರಿದ್ದು, ಆ ಪೈಕಿ 165433 ಜನ ಮತ ಚಲಾಯಿಸಿ ಶೇ.72.71ರಷ್ಟು ಮತದಾನ ನಡೆದಿದೆ. ಈ ಕ್ಷೇತ್ರದಲ್ಲಿ 86927 ಪುರುಷರು ಹಾಗೂ 78506 ಮಹಿಳೆಯರು ಮತ ಚಲಾಯಿಸಿದ್ದಾರೆ.
ಮತದಾನದ ಚಿತ್ರಣ: ಹೊಳಲ್ಕೆರೆ ತಾಲೂಕಿನ ಲಿಂಗವ್ವನಾಗತಿಹಳ್ಳಿಯಲ್ಲಿ ಶೇ. 91. 94ರಷ್ಟು ಅತಿ ಹೆಚ್ಚು ಮತದಾನವಾಗುವ ಮೂಲಕ ಬೇರೆ ಗ್ರಾಮಗಳಿಗೆ ಮಾದರಿಯಾಗಿದೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂಖ್ಯೆ 63ರಲ್ಲಿ ಪುರುಷರು-170, ಮಹಿಳೆಯರು-165, ಒಟ್ಟು- 335 ಮತದಾರರ ಪೈಕಿ ಪುರುಷರು-161, ಮಹಿಳೆಯರು-147 ಒಟ್ಟು 308 ಮತದಾರರು ಮತ ಚಲಾಯಿಸಿದ್ದಾರೆ. ಇದೇ ತಾಲೂಕಿನ ಪಂಜಯ್ಯನಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂ.29ರಲ್ಲಿ ಕೇವಲ ಶೇ.0.52ರಷ್ಟು ಮತದಾನವಾಗಿದ್ದು, ಇಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಈ ಮತಗಟ್ಟೆಯಲ್ಲಿ ಪುರುಷರು-297, ಮಹಿಳೆಯರು-282 ಒಟ್ಟು- 579 ಮತದಾರರಿದ್ದು, ಇಬ್ಬರು ಪುರುಷರು, ಓರ್ವ ಮಹಿಳೆ ಸೇರಿದಂತೆ ಒಟ್ಟು 3 ಮತದಾರರು ಮತದಾನ ಮಾಡಿದ್ದಾರೆ. ಇದನ್ನು ಹೊರತುಪಡಿಸಿ, ನೇರಲಕಟ್ಟೆ ಸರ್ಕಾರಿ ಕಿ.ಪ್ರಾ.ಶಾಲೆ ಮತಗಟ್ಟೆ ಸಂಖ್ಯೆ 247ರಲ್ಲಿ ಶೇ.57.19ರಷ್ಟು ಕಡಿಮೆ ಮತದಾನವಾಗಿದೆ. ಕೇವಲ ಶೇ.0.52ರಷ್ಟು ಕನಿಷ್ಠ ಮತದಾನವಾದ ಗ್ರಾಮ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಹರಿಯಬ್ಬೆ ಹೆಂಜಾರಪ್ಪ