ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್ ಸಮಿತಿ
ಹಲವಾರು ಪ್ರಯತ್ನ ನಡೆಸಿದೆ. ಇದರ ಜೊತೆಗೆ ಇಲ್ಲಿನ ಗುತ್ತಿಗೆದಾರರಾದ ಸ್ವಾಮಿ ಅಜ್ಜಣ್ಣ ಎಂಬುವವರು ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ವಿಶಿಷ್ಟ ಪ್ರಯತ್ನವೊಂದನ್ನು ಮಾಡಿದರು.
Advertisement
ಮತದಾನ ಮಾಡಿದವರಿಗೆ ಉಚಿತವಾಗಿಮಜ್ಜಿಗೆ, ತಂಪು ಪಾನೀಯ, ಚಹಾ, ಕಾಫಿ ವ್ಯವಸ್ಥೆ
ಮಾಡಿದ್ದರು. ಯಾವುದೇ ಪಕ್ಷಕ್ಕೆ ಬೇಕಾದರೂ
ಮತದಾನ ಮಾಡಿ, ತಪ್ಪದೇ ಮತದಾನ ಮಾಡುವ
ಮೂಲಕ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂಬುದು ಅವರ ಆಶಯವಾಗಿತ್ತು. ಶಾಯಿ ಹಾಕಿದ
ತೋರುಬೆರಳು ತೋರಿಸಿದವರಿಗೆಲ್ಲಾ ಗ್ರಾಮದ
ರಾಧಾ ಹೋಟೆಲ್‌ನಲ್ಲಿ ತಂಪುಪಾನೀಯ ವಿತರಣೆಗೆ
ವ್ಯವಸ್ಥೆ ಮಾಡಲಾಗಿತ್ತು. ನೂರಾರು ಮತದಾರರು
ಇದಕ್ಕೆ ಸಂತಸ ವ್ಯಕ್ತಪಡಿಸಿದರು.