Advertisement

Chitradurga:‌ ಇಸ್ಪೀಟ್ ಅಡ್ಡೆಗೆ ದಾಳಿ; ನಗರಸಭೆ ಸದಸ್ಯ ಸೇರಿ 14 ಮಂದಿಯ ಬಂಧನ

02:55 PM Dec 18, 2023 | Team Udayavani |

ಚಿತ್ರದುರ್ಗ: ನಗರಸಭೆ ಸದಸ್ಯ ಸೇರಿ ಇಸ್ಪೀಟ್ ಆಡುತ್ತಿದ್ದ 14 ಮಂದಿಯನ್ನು ಬಂಧಿಸಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ.

Advertisement

ಬಂಧಿತರು ವಿವಿ ಸಾಗರ  ಐಬಿಯಲ್ಲಿ ಇಸ್ಪೀಟ್ ಆಡುತ್ತಿದ್ದರು. ಇವರಲ್ಲಿ ನಗರಭೆ ಜಗದೀಶ್ ಸೇರಿ 14 ಇದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಚಿತ್ರದುರ್ಗ ಎಸ್‌ ಪಿ ಧರ್ಮೇಂದರ್ ಕುಮಾರ್ ಮೀನಾ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಸಿಪಿಐ ಕಾಳಿಕೃಷ್ಣ ಅಂಡ್ ಟೀಂ ದಾಳಿ ನಡೆಸಿ ಇಸ್ಪೀಟ್ ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 4 ಲಕ್ಷದ 37 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಮತ್ತಿಬ್ಬರು ನಗರಸಭೆ ಸದಸ್ಯರಾದ ಅನೀಲ್ ಕುಮಾರ್, ಅಜ್ಜಪ್ಪ ಪರಾರಿಯಾಗಿದ್ದಾರೆ.

ಐಬಿ ಮೇಟಿ ನಾಸೀರ್ ಕುಮ್ಮಕ್ಕಿನಿಂದ ಇಸ್ಪೀಟ್ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಒಟ್ಟು 3 ನಗರಸಭೆ ಸದಸ್ಯರು ಹಾಗೂ ಐಬಿ ಮೇಟಿ ಸೇರಿ ಹಲವರ ವಿರುದ್ದ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next