Advertisement

ಮಕ್ಕಳಿಗೆ ಹಾಸ್ಟೆಲ್ ಎರಡನೇ ಮನೆ ಇದ್ದಂತೆ

04:20 PM Jul 20, 2019 | Naveen |

ಚಿತ್ರದುರ್ಗ: ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿರುವ ಮಕ್ಕಳಿಗೆ ಪರಿಪೂರ್ಣವಾದ ಸಂಸ್ಕಾರ, ಜ್ಞಾನ ನೀಡುವ ಜವಾಬ್ದಾರಿ ನಿಲಯ ಪಾಲಕರದಾಗಿದೆ ಎಂದು ಪ್ರಭಾರಿ ಲೋಕಾಯುಕ್ತ ಪೊಲೀಸ್‌ ಅಧೀಕ್ಷಕ ಕೆ.ಸಿ.ಪುರುಷೋತ್ತಮ ಹೇಳಿದರು.

Advertisement

ನಗರದ ಕ್ರೀಡಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗ, ಮೊರಾರ್ಜಿ ವಸತಿ ಶಾಲೆ ಹಾಗೂ ಲೋಕಾಯುಕ್ತ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಸತಿ ನಿಲಯಗಳ ಸುಗಮ ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಾಸ್ಟೆಲ್ ಮತ್ತು ವಸತಿ ಗೃಹಗಳು ಮಕ್ಕಳಿಗೆ ಎರಡನೇ ಮನೆ ಮತ್ತು ತಾಯಿ ಇದ್ದಂತೆ. ನಿಲಯ ಪಾಲಕರಲ್ಲಿ ಮಕ್ಕಳು ತಂದೆ, ತಾಯಿ, ಗುರುಗಳನ್ನು ಕಾಣುತ್ತಾರೆ. ಮಕ್ಕಳ ಯಶಸ್ಸು ಸಾಧಿಸಲು ನಿಲಯ ಪಾಲಕ ಪ್ರೋತ್ಸಾಹ ಅತ್ಯಗತ್ಯ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ. ಮನೆಗಿಂತ ಸ್ವಚ್ಛವಾಗಿ ಹಾಸ್ಟೆಲ್ ಮತ್ತು ವಸತಿ ನಿಲಯಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್‌ ಉಪಕರಣ ಹೆಚ್ಚು ಬಳಕೆ ಮಾಡಿದರೆ ಮಕ್ಕಳಿಗೆ ಸಮಸ್ಯೆ ಹೆಚ್ಚು. ಮಕ್ಕಳು ಮೊಬೈಲ್ ಸಂಪೂರ್ಣ ದೂರ ಇದ್ದರೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.

ವಿದ್ಯಾರ್ಥಿನಿಯರು ಇರುವ ವಸತಿ ನಿಲಯಗಳ ಹೆಚ್ಚು ಜಾಗೃತಿ ಇರಬೇಕು. ನಿಲಯ ಪಾಲಕರು ನಿಲಯದ ಎಲ್ಲ ಕೊಠಡಿಗಳಿಗೆ ಭೇಟಿ ನೀಡಬೇಕು. ವಿದ್ಯಾರ್ಥಿ ನಿಲಯದ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡುವುದಲ್ಲದೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.

ಬಡ ಕುಟುಂಬಗಳ ಗ್ರಾಮೀಣ ಭಾಗದಿಂದ ಹೆಚ್ಚು ಮಕ್ಕಳು ಬರುವುದರಿಂದ ಮಕ್ಕಳಿಗೆ ನೀತಿ ಪಾಠಗಳನ್ನು ಹೇಳಿ ಕೊಟ್ಟಾಗ ಮಗು ಯಶಸ್ಸು ಸಾಧಿಸುತ್ತದೆ. ಸರ್ಕಾರದ ಎಲ್ಲ ಯೋಜನೆಯಲ್ಲಿ ಬಿಡುಗಡೆ ಆದ ಅನುದಾನ ದುರ್ಬಳಕೆಯಾಗಿದ್ದರೆ ಲೋಕಾಯುಕ್ತರಿಗೆ ದೂರು ನೀಡಲು ಅವಕಾಶ ಇದೆ. ಯಾವುದೇ ರಾಜಕೀಯ ಮುಖಂಡರಿಗೆ ಯಾವುದೇ ಒತ್ತಡಕ್ಕೆ ಮಣಿಯದೆ ಕೆಲಸ ಮಾಡುವ ಸಂಸ್ಥೆ ಲೋಕಾಯುಕ್ತರ ಕೆಲಸವಾಗಿದೆ ಎಂದರು.

Advertisement

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಕೆ.ನಾಗರಾಜ್‌ ಮಾತನಾಡಿ, ನಿಲಯ ಪಾಲಕರಿಗೆ ತಂದೆ, ತಾಯಿಗಿಂತ ಹೆಚ್ಚಿನ ಜವಾಬ್ದಾರಿ ಇದೆ. ಮಕ್ಕಳು ತುಂಬಾ ಸೂಕ್ಷ್ಮ ಜೀವಿಗಳಾಗಿದ್ದು, ಸಸಿಯನ್ನು ಯಾವ ರೀತಿ ಮರ ಆಗಿ ಬೆಳೆಸುವ ರೀತಿಯಲ್ಲಿ ವಸತಿ ನಿಲಯದ ಮಕ್ಕಳನ್ನು ಬೆಳೆಸುವ ಕೆಲಸ ಅಧಿಕಾರಿಗಳು ಮತ್ತು ನಿಲಯ ಪಾಲಕರು ಎಲ್ಲರೂ ಕೈ ಜೋಡಿಸಿ ಮಾಡಿದರೆ ಉತ್ತಮ ಹಾಗೂ ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳು ನಡೆದು ಇಲಾಖೆಗೆ ಸುಧಾರಣೆ ಕಾಣುತ್ತದೆ. ಗ್ರಾಮೀಣ ಭಾಗದ ಮಕ್ಕಳು ಹೆಚ್ಚು ಬರುವುದರಿಂದ ತಿದ್ದಿ, ತೀಡುವ ಶಿಲ್ಪಿಗಳು ಆಗಬೇಕು ಎಂದು ತಿಳಿಸಿದರು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಜೆ.ರಾಜು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ ಇಂತಹ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸಿರುವಂತಹ ಮಹತ್ವ ಜವಾಬ್ದಾರಿ ಅಧಿಕಾರಿಗಳು ಮತ್ತು ನಿಲಯ ಪಾಲಕರ ಮೇಲಿದೆ ಎಂದರು.

ಮಕ್ಕಳಿಗೆ ಸರ್ಕಾರದ ಸೌಲಭ್ಯ ನೀಡಬೇಕು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಮಕ್ಕಳ ಜತೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ ಕಡಿಮೆ ಸಿಬ್ಬಂದಿಯಲ್ಲಿ ಉತ್ತಮ ಕಾರ್ಯ ನಿಲಯ ಪಾಲಕರು ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಲೋಕಾಯುಕ್ತ ಇಲಾಖೆಯ ಪೊಲೀಸ್‌ ನಿರೀಕ್ಷಕ ರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಸ್ವಾಗತಿಸಿದರು. ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳು ಮತ್ತು ನಿಲಯ ಪಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next