Advertisement

Chitradurga: “ಹಿಂದೂ’ ಧರ್ಮವೇ ಅಲ್ಲ: ಸಾಣೇಹಳ್ಳಿ ಶ್ರೀ

01:10 AM Aug 09, 2024 | Team Udayavani |

ಚಿತ್ರದುರ್ಗ: ಹಿಂದೂ ಧರ್ಮ ಕುರಿತ ಹೇಳಿಕೆ ಇಬ್ಬರು ಸ್ವಾಮೀಜಿಗಳ ಮಧ್ಯೆ ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾದ ವಿದ್ಯಮಾನ ನಡೆದಿದೆ.

Advertisement

ಹಿಂದೂ ಎನ್ನುವುದು ಧರ್ಮವೇ ಅಲ್ಲ. ಅದು ಅನೈತಿಕ-ಅನಾಚಾರಗಳನ್ನು ಒಳಗೊಂಡಿದೆ. ಲಿಂಗಾಯತ ಸ್ವತಂತ್ರ ಧರ್ಮ ಎಂದು ಸಿರಿಗೆರೆ ತರಳಬಾಳು ಶಾಖಾಮಠ ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರೆ, ಹಿಂದೂ ಇಲ್ಲ ಅಂದರೆ ಲಿಂಗಾಯತ ಇಲ್ಲವೇ ಇಲ್ಲ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ತಿರುಗೇಟು ನೀಡಿದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಒಂಟಿಕಂಬದ ಮುರುಘಾಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳ 30ನೇ ಸ್ಮರಣೋತ್ಸವ ಸಮಾರಂಭ ಈ ವಿದ್ಯಮಾನಕ್ಕೆ ಸಾಕ್ಷಿಯಾಯಿತು.

ವಚನಾನಂದ ಶ್ರೀ ಖಂಡನೆ
ಇದೇ ಸಮಾರಂಭದ ವೇದಿಕೆಯಲ್ಲಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಸಾಣೇಹಳ್ಳಿ ಶ್ರೀಗಳ ಹೇಳಿಕೆಯನ್ನು ಖಂಡಿಸಿದರು. ಹಿಂದೂ ಧರ್ಮ ವಿಶಾಲವಾದ ಧರ್ಮ. ಎಲ್ಲ ಧರ್ಮಗಳ ಮೂಲ ಪರಂಪರೆ. ವೀರಶೈವ, ಲಿಂಗಾಯತ, ಜೈನ, ಬುದ್ಧ ಧರ್ಮದ ಮೂಲ ಬೇರು ಹಿಂದೂ ಧರ್ಮವೇ. ಹಾಗಾಗಿ ನಾವೆಲ್ಲರೂ ಹಿಂದೂ ಧರ್ಮದ ಮೂಲವನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next