Advertisement
ಕರ್ನಾಟಕ ಪಬ್ಲಿಕ್ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವುದರ ಜೊತೆಗೆ ಹತ್ತುಹಲವು ಆಟೋಟ, ನಾನಾ ರೀತಿಯ ಕ್ರೀಡೋಪಕರಣಗಳು ಹಾಗೂ ಬಸ್ ಸೌಲಭ್ಯವನ್ನೂ ಒದಗಿಸಲಾಗಿದೆ.
Related Articles
Advertisement
ಆಂಗ್ಲ ಮಾಧ್ಯಮ ಆರಂಭವಾಗುತ್ತಿರುವ ಶಾಲೆಗಳ ತಲಾ ಮೂವರು ಶಿಕ್ಷಕರಿಗೆ ಜಿಲ್ಲಾ ಡಯಟ್ ಸಂಸ್ಥೆ ಈಗಾಗಲೇ ಆಂಗ್ಲ ಮಾಧ್ಯಮದಲ್ಲಿ ಹೇಗೆ ಪಾಠ ಮಾಡಬೇಕು, ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಹೇಗೆ ಸಂವಹನ ನಡೆಸಬೇಕು, ಬೋಧನೆ, ಕಲಿಕೆ ಮತ್ತಿತರ ವಿಷಯಗಳ ಕುರಿತು ಸೂಕ್ತ ತರಬೇತಿ ನೀಡಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ತರಬೇತಿ ಹೊಂದಿದ ಶಿಕ್ಷಕರನ್ನು ನಿಯೋಜಿಸಲಾಗಿದೆ. ಆಂಗ್ಲ ಮಾಧ್ಯಮದ ಹೊಸ ಪಠ್ಯಪುಸ್ತಕಗಳು ಶೀಘ್ರದಲ್ಲೇ ಸರಬರಾಜಾಗಲಿವೆ. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದ್ದರೆ ಹೊಸ ಕೊಠಡಿ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಲಿದ್ದು, ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಎಲ್ಲೆಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ?: ಜಿಲ್ಲೆಯಲ್ಲಿ ಏಳು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುವುದು. ಚಳ್ಳಕೆರೆ ತಾಲೂಕಿನ ಪರಶುರಾಂಪುರ, ಚಿತ್ರದುರ್ಗ ತಾಲೂಕಿನ ಜಂಪಯ್ಯನಹಟ್ಟಿ, ಹಿರಿಯೂರು ತಾಲೂಕಿನ ಮರಡಿಹಳ್ಳಿ ಮತ್ತು ಹೊಸಯಳನಾಡು, ಹೊಸದುರ್ಗ ತಾಲೂಕಿನ ಶ್ರೀರಾಂಪುರ, ಮೊಳಕಾಲ್ಮೂರು ತಾಲೂಕಿನ ಬಿ.ಜಿ. ಕೆರೆ ಹಾಗೂ ಹೊಳಲ್ಕೆರೆ ತಾಲೂಕಿನ ಕಾಶಿಪುರ ಗ್ರಾಮಗಳ ಕೆಪಿಎಸ್ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದ ಪೂರ್ವ ಪ್ರಾಥಮಿಕ ಶಾಲೆ (ಎಲ್ಕೆಜಿ) ಆರಂಭಗೊಳ್ಳಲಿದೆ.
ಒಂದನೇ ತರಗತಿಯಿಂದ ಇಂಗ್ಲಿಷ್ ಶಿಕ್ಷಣ ಆರಂಭವಾಗುವ ಶಾಲೆಗಳು ಇಂತಿವೆ. ಚಿತ್ರದುರ್ಗ ತಾಲೂಕಿನ ಜಂಪಯ್ಯನಹಟ್ಟಿಯ ಕೆಪಿಎಸ್ ಶಾಲೆ, ಕುರುಬರಹಳ್ಳಿ, ಚಿತ್ರದುರ್ಗ ನಗರದ ವಿ.ಪಿ. ಬಡಾವಣೆ ಶಾಲೆ. ಚಳ್ಳಕೆರೆ ತಾಲೂಕಿನ ಗೋಸಿಕೆರೆ, ಕಾಮಸಮುದ್ರ, ಚಳ್ಳಕೆರೆಯ ಬಾಲಕಿಯರ ಹಿ.ಪ್ರಾ ಶಾಲೆ, ಪರಶುರಾಮಪುರ ಕೆಪಿಎಸ್ ಶಾಲೆ. ಹೊಸದುರ್ಗ ತಾಲೂಕಿನ ದೇವಪುರ ಪಪೂ ಕಾಲೇಜು, ಶ್ರೀರಾಂಪುರ ಕೆಪಿಎಸ್ ಶಾಲೆ, ಹೊಸದುರ್ಗದ ಮಾದರಿ ಹಿ.ಪ್ರಾ ಶಾಲೆ. ಹಿರಿಯೂರು ತಾಲೂಕಿನ ಮರಡಿಹಳ್ಳಿ, ಹೊಸಯಳನಾಡು ಕೆಪಿಎಸ್ ಶಾಲೆ, ಯರಬಳ್ಳಿ ಸರ್ಕಾರಿ ಪಪೂ ಕಾಲೇಜು, ಹಿರಿಯೂರು ಕೆಎಸ್‌ಆರ್‌ಟಿ ಬಸ್‌ನಿಲ್ದಾಣ ಬಳಿಯ ಹಿ.ಪ್ರಾ ಶಾಲೆ. ಹೊಳಲ್ಕೆರೆ ತಾಲೂಕಿನ ತೆಲಕಲವಟ್ಟಿ, ರಾಮಗಿರಿ ಹಿ.ಪ್ರಾ ಶಾಲೆ, ಕಾಶಿಪುರದ ಕೆಪಿಎಸ್ ಶಾಲೆ, ಹೊಳಲ್ಕೆರೆಯ ಎನ್‌ಇಎಸ್ ಕಾಲೋನಿ ಹಿ.ಪ್ರಾ ಶಾಲೆ. ಮೊಳಕಾಲ್ಮೂರು ತಾಲೂಕಿನ ರಾಂಪುರ, ನಾಗಸಮುದ್ರ, ಮೊಳಕಾಲ್ಮೂರು ಸರ್ಕಾರ ಪಪೂ ಕಾಲೇಜು, ಬಿ.ಜಿ. ಕೆರೆಯ ಕೆಪಿಎಸ್ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಲಿದೆ. ಆಂಗ್ಲ ಮಾಧ್ಯಮ ಇರುವ ಎಲ್ಲ ಶಾಲೆಗಳಲ್ಲೂ ಕನ್ನಡ ಮಾಧ್ಯಮದ ಪ್ರತ್ಯೇಕ ವಿಭಾಗ ಇರಲಿದೆ. ಮಕ್ಕಳು ತಮಗೆ ಇಷ್ಟ ಬಂದ ಮಾಧ್ಯಮದಲ್ಲಿ ಪ್ರವೇಶ ಪಡೆಯಬಹುದಾಗಿದೆ.