Advertisement

ಕ್ರೀಡಾಭಿವೃದ್ಧಿಗೆ ಖನಿಜ ಪ್ರತಿಷ್ಠಾನ ನಿಧಿ ಬಳಕೆ

04:37 PM Oct 25, 2019 | Naveen |

ಚಿತ್ರದುರ್ಗ: ಕ್ರೀಡೆಗಾಗಿ ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಅನುದಾನ ತೆಗೆದಿಡಲು ಸೂಚಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಗುರುವಾರ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ 14 ರಿಂದ 17 ವಯೋಮಿತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿ ಸಣ್ಣ ಸಣ್ಣ ರಾಷ್ಟ್ರಗಳು ಕ್ರೀಡೆಯಲ್ಲಿ ಅದ್ಭುತ
ಸಾಧನೆ ಮಾಡುತ್ತಿವೆ. ಆದರೆ ಇಷ್ಟು ದೊಡ್ಡ ದೇಶ ಭಾರತಕ್ಕೆ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಕ್ರೀಡೆಗೆ ಹೆಚ್ಚು ಮನ್ನಣೆ ನೀಡುವ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆಗೂ ಮಾತನಾಡುತ್ತೇನೆ ಎಂದರು.

ಅಭಿವೃದ್ಧಿ ಕೆಲಸಗಳಿಗೆ ಸ್ಥಳೀಯ ಸಂಸ್ಥೆಗಳಿಗೆ ಬರುವ ಅನುದಾನದಲ್ಲೇ ಶೇ. 2 ರಷ್ಟನ್ನು ಕ್ರೀಡೆಗಾಗಿ ಮೀಸಲಿಡಲು ಸರ್ಕಾರದ ಆದೇಶವಿದೆ. ಗ್ರಾಪಂ, ತಾಪಂ, ಜಿಪಂ ಹಾಗೂ ನಗರಸಭೆ ಮತ್ತಿತರೆ ಸಂಸ್ಥೆಗಳಿಂದ ಹಣ ಸಂಗ್ರಹಿಸುವಂತೆ ಜಿಲ್ಲಾಧಿಕಾರಿಗೆ
ಸೂಚನೆ ನೀಡಿದರು.

ಮಳೆಯಿಂದ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದೆ. ಅತಿವೃಷ್ಟಿಯಿಂದ ಮನೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಭಾಗಶಃ
ಮನೆ ಕುಸಿದವರಿಗೆ 1 ಲಕ್ಷ ರೂ., ಪೂರ್ತಿ ಮನೆ ಬಿದ್ದು ಹೋಗಿದ್ದರೆ 5 ಲಕ್ಷ ರೂ. ಹಾಗೂ ಮಳೆ ಅನಾಹುತಗಳಲ್ಲಿ ಬಲಿಯಾದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುತ್ತಿದ್ದೇವೆ ಎಂದು ತಿಳಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಕ್ರಿಕೆಟ್‌ಗೆ ಸಿಗುತ್ತಿರುವಷ್ಟು ಮನ್ನಣೆ ದೇಸಿಯ ಕ್ರೀಡೆಗಳಿಗೆ ಸಿಗದಿರುವುದು ನೋವಿನ ಸಂಗತಿ. ಕ್ರಿಕೆಟ್‌ ಆಟಗಾರರು ನೂರಾರು ಕೋಟಿ ರೂ. ಗಳಿಸುತ್ತಾರೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಗೆದ್ದು ಬಂದವರಿಗೆ ಒಂದು ಚೆಂಡು ಹೂವಿನ ಹಾರ ಹಾಕಿ ಮುಗಿಸುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

130 ಕೋಟಿ ಜನಸಂಖ್ಯೆ ಇರುವ ಭಾರತ ಕೇವಲ ಬಾಕ್ಸಿಂಗ್‌, ಜಿಮ್ನಾಸ್ಟಿಕ್‌ನಲ್ಲಿ ಪ್ರಶಸ್ತಿ ಗೆದ್ದು ಬರುತ್ತಿದೆ. ಇದಕ್ಕೆ ಪ್ರೋತ್ಸಾಹದ ಕೊರತೆಯೇ ಕಾರಣ. ರಾಜ್ಯದಲ್ಲಿ 48 ಸಾವಿರ ಪ್ರೌಢಶಾಲೆಗಳಿದ್ದು, ದೈಹಿಕ ಶಿಕ್ಷಕರು ಮಾತ್ರ 4 ಸಾವಿರ ಇದ್ದಾರೆ. ಆದ್ದರಿಂದ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಇರುವ ಶಿಕ್ಷಕರು ಮೈದಾನಗಳಿಗೆ ಬರಬೇಕು ಎಂದರು.

ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್‌, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಡಾ| ಕೆ. ಅನಂತ್‌, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಜಿಪಂ ಸಿಇಒ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಡಾ|ಕೆ. ಅರುಣ್‌, ಡಿಡಿಪಿಐ ರವಿಶಂಕರ ರೆಡ್ಡಿ, ಬಿಇಒ ಸಿದ್ದಪ್ಪ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next