Advertisement

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಸ್ಟಾಕ್ ಇಲ್ಲದೆ ರೋಗಿಗಳ ಪರದಾಟ

10:04 AM Jun 17, 2020 | sudhir |

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಡಯಾಲಿಸಿಸ್ ಕೇಂದ್ರದಲ್ಲಿ ಅಗತ್ಯ ಪರಿಕರಗಳ ಸ್ಟಾಕ್ ಖಾಲಿಯಾಗಿದ್ದರಿಂದ ಬುಧವಾರ ಡಯಾಲಿಸಿಸ್ ರೋಗಿಗಳು ಪರದಾಡುವಂತಾಗಿದೆ.

Advertisement

ಪ್ರತಿದಿನ ಸುಮಾರು 27 ಜನ ಇಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ಬುಧವಾರ ಬೆಳಗ್ಗೆಯೇ ಡಯಾಲಿಸಿಸ್ ಮಾಡಿಸಿಕೊಳ್ಳಲು ಆಗಮಿಸಿದವರಿಗೆ ಅಗತ್ಯ ಪರಿಕರಗಳಾದ ಹೆಪಾರಿನ್ ಇಂಜೆಕ್ಷನ್ ಮತ್ತಿತರ ಪರಿಕರ ಖಾಲಿಯಾಗಿವೆ. ಸರಬರಾಜು ಆಗಿಲ್ಲ ಎನ್ನುವ ಉತ್ತರ ಬರುತ್ತಲೇ ಆತಂಕಕ್ಕೊಳಗಾಗಿದ್ದಾರೆ.

ಈ ಹಿಂದೆಯೂ ಇದೇ ಸಮಸ್ಯೆ ಸೃಷ್ಟಿಯಾಗಿತ್ತು.‌ಆಗ ಜಿಲ್ಲಾಸ್ಪತ್ರೆ ಅಂಬ್ಯಲೆನ್ಸ್ ಮೂಲಕ ಗಂಗಾವತಿ ಹಾಗೂ ಮೈಸೂರಿನಿಂದ ಪರಿಕರ ತರಲಾಗಿತ್ತು. ಜತೆಗೆ ವಾರದಲ್ಲಿ ಮೂರು ದಿನ ಮಾಡಬೇಕಾದ ಡಯಾಲಿಸಿಸ್ ಅನ್ನು ವಾರಕ್ಕೆ ಒಂದು ಅಥವಾ ಎರಡು ಸಲಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ರೋಗಿಗಳು ನರಳುತ್ತಿದ್ದಾರೆ.

ಬುಧವಾರ ಡಯಾಲಿಸಿಸ್ ಮಾಡಿಸಲು ಬಂದ ಕೆಲ ರೋಗಿಗಳು ಕೂಡಾ ಪರಿಕರ ಖಾಲಿಯಾಗಿದೆ ಎನ್ನುವುದು ಗೊತ್ತಾಗುತ್ತಲೇ ಕಣ್ಣೀರಿಟ್ಟರು. ಇನ್ನೂ ಕೆಲವರು ದಾವಣಗೆರೆಗೆ ತೆರಳಿದರು.

ಬಿಆರ್ ಎಎಸ್ ಎಂಬ ಖಾಸಗಿ ಏಜೆನ್ಸಿ ಇಲ್ಲಿನ ಡಯಾಲಿಸಿಸ್ ಕೇಂದ್ರ ನಿರ್ವಹಣೆ ಮಾಡುತ್ತಿದ್ದು, ಸಕಾಲಕ್ಕೆ ಸ್ಟಾಕ್ ಸರಬರಾಜು ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದು ಆಕ್ರೋಶ ವ್ಯಕ್ತವಾಯಿತು.

Advertisement

ಸಮಸ್ಯೆ ಪರಿಹಾರಿಸುತ್ತೇವೆ ಡಿಸಿ ಭರವಸೆ

ಈ ಕುರಿತು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಉದಯವಾಣಿ ಜತೆ ಮಾತನಾಡಿ, ಪದೇ ಪದೇ ಡಯಾಲಿಸಿಸ್ ಸಮಸ್ಯೆ ಆಗುತ್ತಿದೆ. ಮಧ್ಯಾಹ್ನದ ವೇಳೆಗೆ ಸ್ಟಾಕ್ ಬರುವುದಾಗಿ ಏಜೆನ್ಸಿ ತಿಳಿಸಿದೆ. ಒಂದು ವೇಳೆ ಸ್ಟಾಕ್ ಬರದಿದ್ದರೆ ಡಯಾಲಿಸಿಸ್ ರೋಗಿಗಳಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಸುತ್ತೇವೆ. ಈ ಸಮಸ್ಯೆ ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಪತ್ರ ವ್ಯವಹಾರ ಇಂದೇ ನಡೆಸುತ್ತೇವೆ‌ ಎಂದು ಭರವಸೆ‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next