ಚಿತ್ರದುರ್ಗ: ಬಿಡದೆ ಕಾಡುವ ಬರದ ಅಸಹಕಾರ ನಡುವೆಯೂ ಜಿಲ್ಲೆಯಲ್ಲಿ ಸಹಕಾರ ಸಂಘಗಳು ತಮ್ಮದೇ ಆದ ಛಾಪು ಮೂಡಿಸುತ್ತಿವೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಸಹಕಾರ ಚಾಲ್ತಿಯಲ್ಲಿದೆ. ಒಂದು ಕಾಲಕ್ಕೆ ಮಿಂಚಿದ ಕೆಲ ವರ್ಗದ ಸಹಕಾರ ಸಂಘಗಳು ಕ್ರಮೇಣ ಕಾಲದ ಹೊಡೆತಕ್ಕೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕೆಲ ಸಹಕಾರ ಸಂಘಗಳು ಸಾಧನೆ ಹಾದಿಯಲ್ಲಿ ಸಾಗುತ್ತಿವೆ.
Advertisement
ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಡಿಸಿಸಿ ಬ್ಯಾಂಕ್‌ನ ಆಧುನೀಕರಣ, ದಿನೇ ದಿನೇ ಜನರನ್ನು ತಲುಪುತ್ತಿರುವುದು ಸಹಕಾರ ಕ್ಷೇತ್ರಕ್ಕೆ ಭವಿಷ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಂತೆ ಈ ಕ್ಷೇತ್ರದಲ್ಲಿ ಎಲ್ಲವೂ ಸರಿಯಿದೆ ಎಂದರ್ಥವಲ್ಲ. ನೂರಾರು ಸಹಕಾರ ಸಂಘಗಳು ನಷ್ಟದ ಹಾದಿಯಲ್ಲಿವೆ. ಕೆಲವು ಮುಚ್ಚುವ ಸ್ಥಿತಿಯಲ್ಲಿವೆ.
Related Articles
Advertisement
ಇದರಲ್ಲಿ “ಸಿ’ ಮತ್ತು “ಡಿ’ ಗ್ರೇಡ್ ಸಂಘಗಳೇ ಹೆಚ್ಚಾಗಿವೆ. “ಎ’ ಗ್ರೇಡ್ ನಲ್ಲಿ 6, “ಬಿ’ ಗ್ರೇಡ್‌ನಲ್ಲಿ 30 ಸಂಘಗಳಿದ್ದರೆ “ಸಿ’ ಗ್ರೇಡ್‌ನಲ್ಲಿ 687 ಸಂಘಗಳಿವೆ. “ಡಿ’ ಗ್ರೇಡ್‌ನಲ್ಲಿ 237 ಸಂಘಗಳಿರುವ ಬಗ್ಗೆ ಜಿಲ್ಲಾ ಸಹಕಾರ ಯೂನಿಯನ್ ಅಂಕಿ-ಅಂಶ ಹೇಳುತ್ತದೆ.
ರಾಜ್ಯಮಟ್ಟದಲ್ಲಿರೋದು ಒಂದೇ ಸಹಕಾರ ಸಂಘ: ಜಿಲ್ಲೆಯಿಂದ ರಾಜ್ಯಮಟ್ಟವನ್ನು ಪ್ರತಿನಿಧಿಸುವ ಸಂಘ ಕೆಒಎಫ್ ಮಾತ್ರ. ಉಳಿದಂತೆ ರಾಜ್ಯದ ಒಳಗೆ ಜಿಲ್ಲೆಯನ್ನು ಮೀರಿದ 8 ಸಂಘಗಳು, ಜಿಲ್ಲಾಮಟ್ಟದಲ್ಲಿ 20, ತಾಲೂಕು ಮೀರಿದ, ಜಿಲ್ಲೆಯ ಕೆಳಗಿರುವ 9, ತಾಲೂಕು ಮಟ್ಟದಲ್ಲಿ 111 ಹಾಗೂ ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ 840 ಸಹಕಾರ ಸಂಘಗಳಿವೆ.