Advertisement

ರೌಡಿಶೀಟರ್ ಶಾಂತಿ ಕದಡಿದರೆ ಕಠಿಣ ಕ್ರಮ : ಪೊಲೀಸ್‌ ವರಿಷ್ಠಾಧಿಕಾರಿ ಖಡಕ್ ಸೂಚನೆ

08:48 PM Feb 08, 2022 | Team Udayavani |

ಚಿತ್ರದುರ್ಗ: ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಸೋಮವಾರ ಚಿತ್ರದುರ್ಗ ಉಪವಿಭಾಗದ ರೌಡಿಶೀಟರ್‌ಗಳ ಪರೇಡ್‌ ನಡೆಯಿತು. ಉಪವಿಭಾಗ ವ್ಯಾಪ್ತಿಯ 229 ರೌಡಿಗಳು ಭಾಗವಹಿಸಿದ್ದರು.

Advertisement

ಈ ವೇಳೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಮಾತನಾಡಿ, ಹಲವು ರೌಡಿಗಳು ಇನ್ನೂ ಅಪರಾಧ ಪ್ರಕರಣಗಳಲ್ಲಿ ಸಕ್ರಿಯರಾಗಿದ್ದಾರೆ. ಸಮಾಜದ ಶಾಂತಿ ಕದಡಲು
ಪ್ರಚೋದನೆ ನೀಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು ಗಮನಕ್ಕೆ ಬಂದರೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದರು.

ಹಲವರಿಗೆ ವಯಸ್ಸಾಗಿದ್ದರೂ ರೌಡಿಪಟ್ಟಿಯಲ್ಲಿ ಉಳಿದುಕೊಂಡಿದ್ದಾರೆ. ನಡತೆ ಬದಲಾವಣೆ ಆಗಿದ್ದರೆ ತಳಹಂತದ ಅ ಧಿಕಾರಿಗಳ ಶಿಫಾರಸು ಪರಿಗಣಿಸಿ ರೌಡಿಪಟ್ಟಿಯಿಂದ ಕೈಬಿಡಲಾಗುವುದು. ರೌಡಿಪಟ್ಟಿ ಸೇರಿರುವರು ಸಮಾಜದಲ್ಲಿ ಯಾವ ರೀತಿಯ ಸಂಕಷ್ಟ ಎದುರಿಸುತ್ತಾರೆ ಎಂಬುದು ಗೊತ್ತಿದೆ. ಮಕ್ಕಳು, ಮೊಮ್ಮಕ್ಕಳ ಮುಖ ನೋಡಿಯಾದರೂ ನಿಮ್ಮ ವರ್ತನೆ ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜೂಜುಕೋರರ ಮೇಲೆ ಪೊಲೀಸ್‌ ಇಲಾಖೆ ನಿಗಾ ಇಟ್ಟಿದೆ. ಮಟ್ಕಾ, ಜೂಜು ಬಿಡಬೇಕು. ಇಲ್ಲವೇ ಜಿಲ್ಲೆಯನ್ನು ತೊರೆಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೂಜು ಹಾಗೂ ಮತೀಯ ಗೂಂಡಾಗಿರಿಯನ್ನು ಪೊಲೀಸ್‌ ಇಲಾಖೆ ಸಹಿಸುವುದಿಲ್ಲ. ಧರ್ಮ, ಜಾತಿ ಆಧಾರಿತ ಮತೀಯ ಗೂಂಡಾಗಳಿಗೆ ಪೊಲೀಸರು ಯಾವುದೇ ಮರ್ಜಿ ತೋರುವುದಿಲ್ಲ.
ಸಮಾಜಘಾತುಕ ಶಕ್ತಿಗಳ ಮೇಲೆ ಪೊಲೀಸರು ಹದ್ದಿನಕಣ್ಣು ಇಟ್ಟಿದ್ದಾರೆ. ಇದೇ ವರ್ತನೆಯನ್ನು ಮುಂದುವರಿಸಿದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಾಗುತ್ತದೆ. ಜಿಲ್ಲೆಯಿಂದ
ಗಡಿಪಾರು ಮಾಡಲಾಗುತ್ತದೆ ಎಂದು ಹೇಳಿದರು.

Advertisement

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಪಾಂಡುರಂಗ, ಸಿಪಿಐಗಳಾದ ನಯೀಂ ಅಹಮ್ಮದ್‌, ಬಾಲಚಂದ್ರ ನಾಯಕ್‌, ಮಧು, ವೆಂಕಟೇಶ್‌, ರಮೇಶ್‌ರಾವ್‌,
ಶಂಕರಪ್ಪ, ರವೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next