Advertisement

ಕೋಟೆ ನಾಡಿನ ಜನರ ನೆಮ್ಮದಿ ಕಸಿದ ಮಹಾಮಾರಿ ಕೋವಿಡ್

04:25 PM May 11, 2020 | Naveen |

ಚಿತ್ರದುರ್ಗ: ಗ್ರೀನ್‌ ಝೋನ್‌ನಲ್ಲಿದ್ದ ಚಿತ್ರದುರ್ಗ ಜಿಲ್ಲೆಯಲ್ಲಿ ಸತತ ಎರಡು ದಿನಗಳಿಂದ ಒಟ್ಟು 6 ಕೋವಿಡ್ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಕೋಟೆನಾಡಿನ ಜನತೆ ಆತಂಕಗೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಆತಂಕವಿದ್ದರೂ ಜಿಲ್ಲೆಗೆ ಕೋವಿಡ್ ಮಹಾಮಾರಿ ಕಾಲಿಟ್ಟಿಲ್ಲ ಎಂಬ ಸಣ್ಣ ಸಮಾಧಾನ ಇತ್ತು. ಆದರೆ ಗುಜರಾತಿನಿಂದ ಆಗಮಿಸಿದ ಜಿಲ್ಲೆಯ ತಬ್ಲೀಘಿಗಳು ಆ ನೆಮ್ಮದಿಯನ್ನು ಕಿತ್ತುಕೊಂಡಿದ್ದಾರೆ. ಮೇ 8 ಮತ್ತು 9 ರಂದು ಬಂದ ಕೋವಿಡ್‌ ಟೆಸ್ಟ್‌ ವರದಿಗಳಲ್ಲಿ ಜಿಲ್ಲೆಯಲ್ಲಿ 6 ಪ್ರಕರಣ ಪತ್ತೆಯಾಗಿದ್ದು ಹೊಸ ತಲೆನೋವಾಗಿದೆ.

Advertisement

ಸೋಂಕಿತರೆಲ್ಲರೂ ಅಹಮದಾಬಾದ್‌ನಿಂದ ಜಿಲ್ಲೆಗೆ ಆಗಮಿಸುತ್ತಲೇ ಚೆಕ್‌ಪೋಸ್ಟ್‌ನಲ್ಲಿ ತಡೆದ ಪೊಲೀಸರು ಎಲ್ಲರನ್ನೂ ಕ್ವಾರಂಟೈನ್‌ ಮಾಡಿದ್ದರು. ಈ ವೇಳೆ ಅವರ ಕುಟುಂಬಸ್ಥರಿಗೆ ಸಂಪರ್ಕಕ್ಕೆ ಅವಕಾಶ ನೀಡಿರಲಿಲ್ಲ. ಒಂದು ವೇಳೆ ಅವರನ್ನು ಮನೆಗೆ ಕಳಿಸಿದ್ದರೆ ಅಥವಾ ಕುಟುಂಬದವರು, ಬಂಧುಗಳು ಭೇಟಿ ಮಾಡಿದ್ದರೆ ಆತಂಕ ಹೆಚ್ಚಾಗುತ್ತಿತ್ತು. ಜಿಲ್ಲಾಡಳಿತ ಕೈಗೊಂಡ ಸಕಾಲಿಕ ತೀರ್ಮಾನದಿಂದ ಆತಂಕ ದೂರಾಗಿ ಕೊರೊನಾ ತಬ್ಲೀಘಿಗ ನಡುವೆಯೇ ಉಳಿಯುವಂತಾಗಿದೆ. ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಒಂದಿಷ್ಟು ಜಾಗ್ರತೆ ವಹಿಸಿದರೆ ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಬಹುದು. ಇದಕ್ಕೆ ಸೋಂಕಿತರು ಕೂಡಾ ಸ್ಪಂದಿಸಬೇಕಿದೆ.

ಶುಕ್ರವಾರ ಮತ್ತು ಶನಿವಾರ ತಲಾ ಮೂರು ಪಾಸಿಟಿವ್‌ ಪ್ರಕರಣ ಬಂದ ಪರಿಣಾಮ ಭಾನುವಾರ ವರದಿ ಮೇಲೆ ಸಾಕಷ್ಟು ಜನ ಕುತೂಹಲ ಇಟ್ಟುಕೊಂಡಿದ್ದರು. ಆದರೆ ಭಾನುವಾರದ ವರದಿಯಲ್ಲಿ ಜಿಲ್ಲೆಗೆ ಸಂಬಂ ಧಿಸಿದಂತೆ ಯಾವುದೇ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ. ಸದ್ಯ ಜಿಲ್ಲೆಯಲ್ಲಿ ಕೋವಿಡ್‌-19 ಕಾಣಿಸಿಕೊಂಡು ಗುಣಮುಖರಾಗಿ ಮನೆ ಸೇರಿರುವ ಭೀಮಸಮುದ್ರದ ಮಹಿಳೆ ಸೇರಿ ಒಟ್ಟು 7 ಪ್ರಕರಣಗಳಿದ್ದು, ಇದರಲ್ಲಿ 6 ಸಕ್ರಿಯ ಪ್ರಕರಣಗಳಾಗಿವೆ.

49 ಜನರ ಗಂಟಲು ದ್ರವ ಪರೀಕ್ಷೆ ಭಾನುವಾರ 49 ಜನರ ಗಂಟಲು ದ್ರವವನ್ನು ತೆಗೆದು ಪರೀಕ್ಷೆಗೆ ಕಳಿಸಲಾಗಿದೆ. ಜಿಲ್ಲೆಯಿಂದ ಪರೀಕ್ಷೆಗೆ ಹೋಗಿರುವ 118 ಮಾದರಿಗಳ ಫಲಿತಾಂಶ ಬರಬೇಕಿದೆ. ಜಿಲ್ಲೆಯಲ್ಲಿ ಇದುವರೆಗೆ 1247 ಜನರ ಗಂಟಲು ಮಾದರಿ ತೆಗೆದು ಪರೀಕ್ಷೆಗೆ ಕಳಿಸಿದ್ದು, ಇದರಲ್ಲಿ 1081 ಪ್ರಕರಣ ನೆಗೆಟಿವ್‌ ವರದಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next