Advertisement
ನಗರದ ಒನಕೆ ಓಬವ್ವ ಕ್ರೀಡಾ ಭವನದಲ್ಲಿ ಭಾನುವಾರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಲೇಖಕ ಸಿ.ಎಂ. ತಿಪ್ಪೇಸ್ವಾಮಿ ಅವರ ‘ಉಚ್ಚಂಗಿ ಪಾಂಡ್ಯರು’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಮಾತನಾಡಿ, ಐತಿಹಾಸಿಕ ವಿಷಯಗಳನ್ನು ವರ್ತಮಾನಕ್ಕೆ ತಕ್ಕಂತೆ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ. ಉಚ್ಚಂಗಿ ಪಾಂಡ್ಯರ ಕುರಿತ ಕೃತಿ ಕೇವಲ ಇತಿಹಾಸಕ್ಕೆ ಸೀಮಿತವಾಗದೆ ಸಮಾಜಶಾಸ್ತ್ರೀಯ ಅಧ್ಯಯನದ ಮಹತ್ವ ಪಡೆದಿದೆ. ಶಾಸನಗಳಲ್ಲಿ ಸೂಕ್ಷ್ಮವಾಗಿ ಉಲ್ಲೇಖವಾಗಿರುವ ಸಮಾಜ, ಮಹಿಳೆ, ಧರ್ಮ, ವಾಣಿಜ್ಯ, ದಾನ, ಬಡ್ಡಿ, ವ್ಯವಹಾರ ಮೊದಲಾದ ಅಜ್ಞಾತ ವಿಷಯಗಳ ಕಡೆ ಗಮನ ಹರಿಸಿರುವುದು ವಿಶೇಷ ಎಂದು ತಿಳಿಸಿದರು.
ಇತಿಹಾಸ ಸಂಶೋಧಕ ಡಾ| ಬಿ.ರಾಜಶೇಖರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ. ರೇವಣಸಿದ್ದಪ್ಪ, ಡಾ| ಎಚ್. ಗುಡದೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.
ರಾಜಕೀಯ-ಇತಿಹಾಸಕ್ಕಷ್ಟೇ ಅಧ್ಯಯನ ಸೀಮಿತವಾಗದಿರಲಿಜಾಗತೀಕರಣದ ಅಬ್ಬರದ ನಡುವೆ ದೇಸಿ ಚಿಂತನೆ ಹಾಗೂ ಸ್ಥಳೀಯ ಸಾಂಸ್ಕೃತಿಕ ಅಧ್ಯಯನಗಳ ಸಂಶೋಧಕರು ಹೆಚ್ಚೆಚ್ಚು ಆಸಕ್ತಿ ವಹಿಸಬೇಕಿದೆ. ಪ್ರಸ್ತುತ ದಿನಗಳಲ್ಲಿ ಸಂಶೋಧನೆಯ ಪರಿಕಲ್ಪನೆ ವ್ಯಾಪಕವಾಗಿ ಬೆಳೆಯುತ್ತಿದ್ದು, ಶಾಸನಗಳ ಅಧ್ಯಯನ ಕೇವಲ ರಾಜಕೀಯ ಮತ್ತು ಇತಿಹಾಸಕ್ಕೆ ಸೀಮಿತವಾಗಬಾರದು. ರಾಜಕೀಯೇತರ ಅಧ್ಯಯಯನವೂ ನಡೆಯಬೇಕು ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ಜೆ. ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.