Advertisement

ಭಗವದ್ಗೀತೆ ನಿತ್ಯ ಪಠಣದಿಂದ ಮನಸ್ಸಿನ ಕಲ್ಮಶ ದೂರ

04:30 PM Jul 15, 2019 | Naveen |

ಚಿತ್ರದುರ್ಗ: ಭಗವದ್ಗೀತೆ ಪಠಣ ಮಾಡುವುದರಿಂದ ಮನಸ್ಸಿನ ಕಲ್ಮಶ ದೂರವಾಗುತ್ತದೆ ಎಂದು ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

Advertisement

ಶಿರಸಿಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ನಗರದ ಶ್ರೀಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿನ ಶಾರದ ಸಭಾಭವನದಲ್ಲಿ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ ಜಿಲ್ಲಾ ಸಮಿತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪವಿತ್ರವಾದ ನೀರು ಮೈ ಕೊಳೆ ಕಳೆಯುತ್ತದೆ. ಆದರೆ ಮನಸ್ಸಿನ ಕೊಳೆ ತೊಳೆಯಬೇಕಾದರೆ ಭಗವದ್ಗೀತೆ ಪಠಣ ಮಾಡಬೇಕು. ಭಗವದ್ಗೀತೆಯ 18 ಪಠಣಗಳನ್ನು ಪರ್ವ ಕಾಲದಲ್ಲಿ ಓದಿದರೆ ಮನಸ್ಸಿನ ದೋಷ ದೂರವಾಗಿ ಶ್ರೇಯಸ್ಸು ದೊರೆಯಲಿದೆ ಎಂದರು.

ಜೀವನದಲ್ಲಿ ಸುಖ ಬೇಕು ಎಂದರೆ ನಮ್ಮಲ್ಲಿನ ಕಾಮನೆಗಳನ್ನು ದೂರ ಮಾಡಬೇಕು. ಜೀವನದಲ್ಲಿ ಉತ್ತಮವಾದದ್ದನ್ನ ಸಾಧಿಸಬೇಕಾದರೆ ಮನಸ್ಸಿನ ಕಲ್ಮಶ ಖಾಲಿ ಮಾಡಿಕೊಳ್ಳಬೇಕು. ಆಗ ಉತ್ತಮವಾದದ್ದನ್ನು ಸುಲಭವಾಗಿ ಸಾಧಿಸಬಹುದಾಗಿದೆ. ಭೋಗಮಯ ಜೀವನದ ಎಂದು ಹಂಬಲ ಬಿಡಬೇಕು. ಎಲ್ಲಿ ಭೋಗ ಇರುತ್ತೂ ಅಲ್ಲಿ ರೋಗ ಇರುತ್ತೆ. ದುಃಖದಿಂದ ಪಾರಾಗಬೇಕು ಎಂದರೆ ಗೀತ ಚಿಂತನೆ ಮಾಡಿ ಎಂದು ಕರೆ ನೀಡಿದರು.

ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನವನ್ನು ಈ ವರ್ಷ ಚಿತ್ರದುರ್ಗದಲ್ಲಿ ಆಯೋಜಿಸುತ್ತಿರುವುದು ಸಂತಸದ ವಿಷಯ. ಪೋಷಕರು ತಮ್ಮ ಮಕ್ಕಳಿಗೆ ನಿತ್ಯ ಗೀತೆಯ ಒಂದೊಂದು ಶ್ಲೋಕ ಹೇಳಿಕೊಡಿ. ದೇವರು ನಂಬಿದವರಿಗೆ ಕೈಬಿಡುವುದಿಲ್ಲ, ಯಾರು ಭಗವಂತನನ್ನು ಮನಸಾರೆ ನಂಬಿರುತ್ತಾರೊ ಆ ದೇವರು ಯೋಗ್ಯರಿಗೆ ಒಳಿತು ಮಾಡಲಿದ್ದಾನೆ ಎಂದು ತಿಳಿಸಿದರು.

Advertisement

ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಮಾತನಾಡಿ, ಭಗವದ್ಗೀತಾ ಪಠಣ ಕಾರ್ಯಕ್ರಮ 2007ರಲ್ಲಿ ಹುಬ್ಬಳ್ಳಿಯಲ್ಲಿ ಉದ್ಘಾಟನೆಗೊಂಡು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ವರ್ಷದ ರಾಜ್ಯಮಟ್ಟದ ಭಗವದ್ಗೀತಾ ಸಮರ್ಪಣಾ ಸಮಾರಂಭ ಡಿ.7ರಂದು ಚಿತ್ರದುರ್ಗದಲ್ಲಿ ನಡೆಯಲಿದೆ. ಅದಕ್ಕಾಗಿ ಆ.30ರ ಒಳಗೆ ಎಲ್ಲ ಶ್ಲೋಕ ಕೇಂದ್ರ ಉಪನ್ಯಾಸ ಕೇಂದ್ರಗಳನ್ನು ಗುರುತಿಸಬೇಕಾಗಿದೆ. ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಶ್ರೀ ಭಗವದ್ಗೀತಾ ಅಭಿಯಾನದ ಮುಖ್ಯ ರೂವಾರಿಗಳು ಎಂದು ಹೇಳಿದರು.

ಮರ್ಚೆಂಟ್ಸ್‌ ಸೌಹಾರ್ದ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಸ್‌.ಆರ್‌. ಲಕ್ಷ್ಮಿಕಾಂತರೆಡ್ಡಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ, ಪರಿಮಳ ಚಾರಿಟಬಲ್ ಟ್ರಸ್ಟ್‌ ಮಾರುತಿ ಮೋಹನ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next