ಚಿತ್ರದುರ್ಗ: ಶರಣರ, ಸಂತರ ಜ್ಞಾನ ಅಪ್ರತಿಮ ಮತ್ತು ಅನನ್ಯವಾದುದು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಬಸವ ಜಯಂತಿ ಅಂಗವಾಗಿ ಮುರುಘರಾಜೇಂದ್ರ ಮಠದಲ್ಲಿ ಸರ್ವ ಶರಣರ, ಸಂತರ ಮತ್ತು ದಾರ್ಶನಿಕರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಕೋವಿಡ್-19 ನಿರಾಶ್ರಿತರಿಗೆ ದವಸ-ಧಾನ್ಯ ವಿತರಿಸಿ ಶರಣರು ಮಾತನಾಡಿದರು.
ಬಸವಣ್ಣನವರು ಸುಜ್ಞಾನ ಮೂರ್ತಿಗಳು. ಸುಜ್ಞಾನದ ಹಿಂದಿರುವವರ ಬದುಕು ಸುಭದ್ರವಾಗಿರುತ್ತದೆ. ಬಸವಾದಿ ಶರಣರು ದಾಸೋಹ ಭಾವವನ್ನು ಜಗತ್ತಿಗೆ ನೀಡಿದರು. ಬಸವಣ್ಣ ಎಂದರೆ ಸಮಾನತೆಯ ಮೂರ್ತಿ. ಶ್ರೀಮಠದಿಂದ ಬಸವ ಜಯಂತಿಯನ್ನು ಸರ್ವ ಶರಣರ, ದಾಸರ, ಸಂತರ, ದಾರ್ಶನಿಕರ ಜಯಂತಿಯನ್ನಾಗಿ ಆಚರಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕೊಳಗೇರಿ ನಿವಾಸಿಗಳು, ವೀರಶೈವ ಲಿಂಗಾಯತ ಸಮಾಜ, ಜಂಗಮ ಸಮಾಜ, ಬಡಗಿಗಳು ಮೊದಲಾದ 400ಕ್ಕು ಹೆಚ್ಚು ಕುಟುಂಬಗಳಿಗೆ ದವಸ-ಧಾನ್ಯ ವಿತರಿಸಿದರು. ಪ್ರತಿಯೊಬ್ಬರೂ ಮಾಸ್ಕ್ಗಳನ್ನು ಧರಿಸಿ. ಬಿಸಿ ನೀರನ್ನು ಕುಡಿಯಿರಿ. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ತಂಪಾದ ಪಾನೀಯಗಳನ್ನು ಕುಡಿಯಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನಯ್ಯ, ಕೆ.ವಿ. ಪ್ರಭಾಕರ್, ವೀರಶೈವ ಸಮಾಜದ ಅಧ್ಯಕ್ಷ ಟಿ.ಎಸ್. ಎನ್. ಜಯಣ್ಣ, ಜೆ.ಎಂ. ಜಯಕುಮಾರ್, ಮಹಮ್ಮದ್ ಪಾಷ, ಆರ್. ಶೇಷಣ್ಣಕುಮಾರ್, ಕೆಇಬಿ ಷಣ್ಮುಖಪ್ಪ, ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸಿಇಒ ಎಂ.ಜಿ. ದೊರೆಸ್ವಾಮಿ, ಶಂಕರಮೂರ್ತಿ, ಎಂ.ಕೆ. ತಾಜ್‌ಪೀರ್ ಮತ್ತಿತರರು ಇದ್ದರು. ತೋಟಪ್ಪ ಉತ್ತಂಗಿ ಪ್ರಾರ್ಥಿಸಿದರು. ಬಸವರಾಜ ಶಾಸ್ತ್ರಿ ನಿರೂಪಿಸಿದರು.
ಪ್ರತಿಯೊಬ್ಬರೂ ಮಾಸ್ಕ್ಗಳನ್ನು ಧರಿಸಿ. ಬಿಸಿ ನೀರನ್ನು ಕುಡಿಯಿರಿ. ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ತಂಪಾದ ಪಾನೀಯಗಳನ್ನು ಕುಡಿಯಬಾರದು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.
ಡಾ| ಶಿವಮೂರ್ತಿ ಮುರುಘಾ ಶರಣರು