Advertisement

ಬಸವಣ್ಣ ವ್ಯಕ್ತಿಯಲ್ಲ ದೊಡ್ಡ ಶಕ್ತಿ: ಮುರುಘಾ ಶ್ರೀ

05:49 PM May 09, 2019 | Naveen |

ಚಿತ್ರದುರ್ಗ: ಬಸವ ಜಯಂತಿ ಆಚರಣೆ ಹಾಗೂ ಬಸವಣ್ಣನ ವಿಚಾರಗಳ ಕಡೆಗೆ ಒಟ್ಟಾಗಿ ಮುಖ ಮಾಡಿ ನಿಂತಿರುವುದು ಪ್ರಗತಿಪರ ಮತ್ತು ಬೆಳಕಿನೆಡೆಗೆ ಸಾಗುವ ಹೆಜ್ಜೆಯಾಗಿದೆ. ಇದರಿಂದ ನಿಮ್ಮ ಜೀವನ ಸಾರ್ಥಕತೆಯತ್ತ ಸಾಗುತ್ತದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದ ಬಸವ ಕೇಂದ್ರದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶರಣರು ಆಶೀರ್ವಚನ ನೀಡಿದರು. ಬಸವಣ್ಣ ಕೇವಲ ವ್ಯಕ್ತಿಯಷ್ಟೇ ಅಲ್ಲ, ಅವರೊಂದು ದೊಡ್ಡ ಶಕ್ತಿ. ಸಮಸ್ಯೆಗಳ ನಿವಾರಕ ಹಾಗೂ ಸಮಾಜದ ವ್ಯಾಧಿಗಳ ಪರಿಹಾರಕ. ಸಮಾಜದಲ್ಲಿ ನಾವು ಬದುಕಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು ಎಂದರು.

ಮುರುಘಾಮಠದ ಶಾಖಾ ಮಠ ದಾವಣಗೆರೆಯ ವಿರಕ್ತಮಠದಿಂದ 108 ವರ್ಷಗಳ ಹಿಂದೆ ಮೊಟ್ಟ ಮೊದಲು ಬಸವ ಜಯಂತಿ ಆಚರಣೆ ಪ್ರಾರಂಭಿಸಲಾಯಿತು. ಈಗ ಅದು ಅನೇಕ ದೇಶಗಳಲ್ಲಿ ಆಚರಿಸಲ್ಪಡುತ್ತಿದೆ ಎಂದು ತಿಳಿಸಿದರು. ಮದ್ದೇರು ಭಾಗದ ನೀರಾವರಿ ಹೋರಾಟಕ್ಕೆ ಮುರುಘಾ ಮಠ ಸದಾ ಸಿದ್ಧ. ರೈತರಿಗೆ ನೀರು ಲಭ್ಯವಾದರೆ ಬೆಳೆದು ಸಮೃದ್ಧ ಜೀವನ ನಡೆಸಲಿದ್ದಾರೆ ಎಂದರು.

ಭಂಡಾರಿ ಎಂ.ಎಂ. ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಬಸವಣ್ಣನವರ ತತ್ವಗಳು ಇಂದಿನ ಕಾಲಕ್ಕೆ ಅತ್ಯಗತ್ಯ. ಅವುಗಳನ್ನು ನಾವೆಲ್ಲರೂ ಪಾಲಿಸಬೇಕು.ಈ ಹಿನ್ನೆಲೆಯಲ್ಲಿ ಮದ್ದೇರು ಗ್ರಾಮದಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮಲ್ಲಿ ಸಮರ್ಥ ಯುವಪಡೆ ಇದೆ. ಆ ಎಲ್ಲಾ ಯುವಕರಿಗೆ ಮತ್ತು ಗ್ರಾಮಸ್ಥರಿಗೆ ಶರಣರ ಮಾರ್ಗದರ್ಶನ ಸದಾ ಇರಲಿ. ಮದ್ದೇರು ಗ್ರಾಮಕ್ಕೂ ಚಿತ್ರದುರ್ಗದ ಮುರುಘಾ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಇದು ಬಹಳ ಹಿಂದಿನ ಸಂಬಂಧ ಎಂದು ಹೇಳಿದರು.

ಹೊಳಲ್ಕೆರೆಯ ಮಾಜಿ ಶಾಸಕ ಎಂ.ಬಿ. ತಿಪ್ಪೇರುದ್ರಪ್ಪ, ಜಿಪಂ ಮಾಜಿ ಸದಸ್ಯ ಎಲ್.ಬಿ. ರಾಜಶೇಖರ್‌, ತಾಳ್ಯದ ಟಿ. ಹನುಮಂತಪ್ಪ, ಚಂದ್ರಶೇಖರ್‌ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌ ಇದ್ದರು.

Advertisement

ಮಾರುತಿ ಭಜನಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು. ಡಾ| ಎಸ್‌.ಎಚ್. ಪಂಚಾಕ್ಷರಿ ಸ್ವಾಗತಿಸಿದರು. ಸ್ವಾಮಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next