Advertisement

ಚಿತ್ರದುರ್ಗ: ಎಸಿಎಫ್ ಶ್ರೀನಿವಾಸ್ ಮನೆ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ ಜಪ್ತಿ

04:51 PM Feb 02, 2021 | Mithun PG |

ಚಿತ್ರದುರ್ಗ: ಧಾರವಾಡ ಅರಣ್ಯ ಇಲಾಖೆ ಎಸಿಎಫ್ ಎಸ್.ಶ್ರೀನಿವಾಸ್ ಅವರ ಚಿತ್ರದುರ್ಗದ ನಿವಾಸ ಹಾಗೂ ತೋಟದ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದ್ದಾರೆ.

Advertisement

ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪದಡಿ ಮಂಗಳವಾರ ನಗರದ ತಮಟಕಲ್ಲು ರಸ್ತೆಯ ಈಶ್ವರ ಬಡಾವಣೆಯ ಮನೆ, ಕೆಎಚ್‌ಬಿ ಕಾಲೋನಿಯಲ್ಲಿರುವ ಮನೆ ಹಾಗೂ ಮಾರಘಟ್ಟ ಬಳಿ ಇರುವ ತೋಟದ ಮನೆ, ಸದ್ಯ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಎಸಿಎಫ್ ಕಚೇರಿ, ಅರಣ್ಯ ಇಲಾಖೆ ವಸತಿ ಗೃಹ ಸೇರಿದಂತೆ ಐದು ಕಡೆ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

ಇದನ್ನೂ ಓದಿ:  ಎಟಿಎಂನಲ್ಲಿ ಹಲ್ಲೆ ಪ್ರಕರಣ: ಅಪರಾಧಿ ಮಧುಕರ್ ರೆಡ್ಡಿಗೆ 12 ವರ್ಷಗಳ ಜೈಲು ಶಿಕ್ಷೆ ಪ್ರಕಟ

ಈ ಪೈಕಿ ಚಿತ್ರದುರ್ಗದ ಈಶ್ವರ ಬಡಾವಣೆಯ ಮನೆಯಲ್ಲಿ 870 ಗ್ರಾಂ ತೂಕದ ಚಿನ್ನಾಭರಣ, ಎರಡೂವರೆ ಕೆಜಿ ಬೆಳ್ಳಿ ಸಾಮಾಗ್ರಿಗಳು ಹಾಗೂ 4.70 ಲಕ್ಷ ರೂ. ನಗದು ದೊರೆತಿದೆ. ಉಳಿದಂತೆ ಮನೆಯಲ್ಲಿ ಗೃಹೋಪಯೋಗಿ ವಸ್ತುಗಳು ಮತ್ತು ದಾಖಲೆ ಪತ್ರಗಳ ಪರಿಶೀಲನೆ ಮುಂದುವರೆದಿದೆ.

ದಾವಣಗೆರೆ ಪೂರ್ವ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾದ ಎಚ್. ಜಯಪ್ರಕಾಶ್ ದಾಳಿಯ ನೇತೃತ್ವ ವಹಿಸಿದ್ದರು. ಚಿತ್ರದುರ್ಗ ಎಸಿಬಿ ಡಿಎಸ್‌ಪಿ ಬಸವರಾಜ ಆರ್. ಮುಗದುಮ್, ಶಿವಮೊಗ್ಗ ಎಸಿಬಿ ಡಿಎಸ್‌ಪಿ ಲೋಕೇಶ್, ಹಾವೇರಿ ಎಸಿಬಿ ಡಿಎಸ್‌ಪಿ ಮಹಾಂತೇಶ್ವರ ಎಸ್. ಜಿದ್ದಿ, ಇನ್ಸ್‌ಪೆಕ್ಟರ್‌ಗಳಾದ ಪ್ರವೀಣ್‌ಕುಮಾರ್, ಮಧುಸೂದನ್, ಇಮ್ರಾನ್ ಬೇಗ್ ಹಾಗೂ ಸಿಬ್ಬಂದಿಗಳು ದಾಳಿಯಲ್ಲಿ ಭಾಗವಹಿಸಿದ್ದರು.

Advertisement

ಇದನ್ನೂ ಓದಿ: ಸಾರಿಗೆ ನೌಕರರ 3 ಬೇಡಿಕೆ ಈಡೇರಿಸಿದ್ದೇವೆ; ಇನ್ಮುಂದೆ ಸಂಬಳ ಕಡಿತ ಮಾಡುವುದಿಲ್ಲ:ಸವದಿ ಭರವಸೆ

Advertisement

Udayavani is now on Telegram. Click here to join our channel and stay updated with the latest news.

Next