Advertisement

ತಂಬಾಕನ್ನು ಸಂಪೂರ್ಣ ನಿಷೇಧಿಸಿ

04:10 PM Jun 01, 2019 | Team Udayavani |

ಚಿತ್ರದುರ್ಗ: ಇಂದಿನ ಯುವ ಸಮುದಾಯ ತಂಬಾಕು ಸೇವನೆ ಹೆಚ್ಚು ಮಾಡುತ್ತಿದ್ದು, ಸಂಪೂರ್ಣವಾಗಿ ತಂಬಾಕು ನಿಷೇಧಿಸಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎಸ್‌.ವೈ. ವಟವಟಿ ಹೇಳಿದರು.

Advertisement

ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜ್‌ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಈಶ್ವರಿ ವಿವಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಎಸ್‌.ಜಿ. ಪ್ಯಾರಾ ಮೆಡಿಕಲ್ ಕಾಲೇಜ್‌ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವನೆ, ಧೂಮಪಾನ ಮುಕ್ತ ಸಮಾಜದ ಸೃಷ್ಟಿಗೆ ಕಾನೂನುಗಳಿಗಿಂತ ಸ್ವಯಂ ನಿರ್ಬಂಧವೇ ಹೆಚ್ಚು ಪರಿಣಾಮಕಾರಿ. ಆಗ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಹೆಣ್ಣು ಮಕ್ಕಳು 18 ವರ್ಷದ ನಂತರ ಮದುವೆ ಆಗಬೇಕು. ಗಂಡು ಮಕ್ಕಳು 21 ವರ್ಷದ ನಂತರ ಮದುವೆ ಆಗಬೇಕೆಂದು ಕಾನೂನು ಮಾಡಲಾಗಿದೆ. ಗುಂಡು ಮಕ್ಕಳು ದುಶ್ಚಟಗಳಿಗೆ ಬೇಗ ಬಲಿಯಾಗುವುದರಿಂದ 21 ವರ್ಷ ನಿಗದಿ ಮಾಡಲಾಗಿದೆ. ಆದರೆ ಹೆಣ್ಣು ಮಕ್ಕಳು ಯಾವುದೇ ದುಶ್ಚಟಗಳಿಗೆ ಬಲಿಯಾಗದಿರುವುದರಿಂದ 18 ವರ್ಷ ನಿಗದಿ ಮಾಡಲಾಗಿದೆ ಎಂದು ಹೇಳಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧಿಧೀಶರಾದ ಟಿ. ಶಿವಣ್ಣ ಮಾತನಾಡಿ, ತುಂಬಾಕು, ಗುಟ್ಕಾ, ಬೀಡಿ, ಸಿಗರೇಟು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾ ಬೀರಲಿದೆ. ಅಲ್ಲದೆ ಮುಂದೆ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಯಾವುದೇ ನಾಗರಿಕರು ಜೀವಿಸುವ ಪರಿಸರ ಹಾನಿಯಾಗದಂತೆ, ಮಲಿನಗೊಳ್ಳದಂತೆ ಕಾಯ್ದು ಕೊಳ್ಳಬೇಕು. ಆದರೆ, ಧೂಮಪಾನ ಮಾಡುವ ಜನರಿಂದ ಇತರರು ಜೀವಿಸುವ ಮೂಲಭೂತ ಹಕ್ಕಿಗೆ, ಅವರ ಪರಿಸರಕ್ಕೆ ತೊಂದರೆ ಯಾಗುತ್ತದೆ. ಅಂತಹ ಸಂದರ್ಭದಲ್ಲಿ ಧೂಮಪಾನ ಮಾಡಿದವರ ವಿರುದ್ಧ ದೂರನ್ನು ಕೊಡಬಹುದು. ಅದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅವರು ತಿಳಿಸಿದರು.

Advertisement

ಈಶ್ವರಿ ವಿವಿ ಶಿವರಶ್ಮಿ ಅಕ್ಕ ಮಾತನಾಡಿ, ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿ, ತಮ್ಮ ಮನೆಗಳಲ್ಲಿ ಹಾಗೂ ನೆರೆಹೊರೆಯಲ್ಲಿ ಯಾರೇ ಧೂಮಪಾನ ಮಾಡುತ್ತಿದ್ದಲ್ಲಿ ಅವರಿಗೆ ಇದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಎಂದು ಮನವಿ ಮಾಡಿದರು.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ, ತಂಬಾಕು ಸೇವನೆ ಹಾಗೂ ಮಾರಕ ಕಾಯಿಲೆಗಳು ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿಜಯಕುಮಾರ್‌, ಪ್ರಧಾನ ಕಾರ್ಯದರ್ಶಿ ಬಿ.ಎ.ಅನಿಲ್ ಕುಮಾರ್‌, ಎಸ್‌.ಜಿ. ಪ್ಯಾರಾ ಮೆಡಿಕಲ್ ಕಾಲೇಜ್‌ ಕಾರ್ಯದರ್ಶಿ ಸಂತೋಷ್‌ ಗುಂಡಿಮಠ, ಪ್ರಾಂಶುಪಾಲ ಚಂದ್ರಶೇಖರ್‌ ವಸ್ತ್ರದ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ| ಎಚ್.ಕೆ.ಎಸ್‌. ಸ್ವಾಮಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next