Advertisement
ಚಿತ್ರಾ ವಿರುದ್ಧದ ಆರೋಪಗಳೇನು?2013ರಿಂದ 2016ರ ವರೆಗೆ ಎನ್‌ಎಸ್‌ಇ ಮುಖ್ಯಸ್ಥೆಯಾಗಿದ್ದ ಚಿತ್ರಾ, ತಾವು ಕೈಗೊಂಡ ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರವನ್ನು ಹಿಮಾಲಯದ ಯೋಗಿಯೊಬ್ಬರ ಆಣತಿ ಮೇರೆಗೆ ಕೈಗೊಳ್ಳುತ್ತಿದ್ದರು ಎಂಬ ಆರೋಪ ವಿದೆ. ಎನ್‌ಎಸ್‌ಸಿಯ ಗೌಪ್ಯ ಮಾಹಿತಿಗಳನ್ನು ಯೋಗಿ ಬಳಿ ಹಂಚಿಕೊಂಡಿದ್ದಾರೆನ್ನಲಾಗಿದೆ. ಎನ್‌ಎಸ್‌ಇ ವತಿಯಿಂದ ಕೈಗೊಳ್ಳಬೇಕಾದ ವಾಣಿಜ್ಯ ಕಾರ್ಯತಂತ್ರಗಳು, ಸಂಸ್ಥೆಯ ಆಂತರಿಕ ವಿಚಾರಗಳ ಬಗ್ಗೆ ಯೋಗಿಯವರ ಬಳಿ ಚರ್ಚಿಸಿ ಚಿತ್ರಾ ನಿರ್ಧಾರ ಕೈಗೊಳ್ಳು ತ್ತಿದ್ದರು. ಅಷ್ಟೇ ಏಕೆ, ಎನ್‌ಎಸ್‌ಇ ಸಿಬಂದಿಯ ವೇತನ ಹೆಚ್ಚಳ ಪ್ರಸ್ತಾವನೆಯನ್ನೂ ಅವರ ಮುಂದಿಟ್ಟೇ ನಿರ್ಧಾರ ಮಾಡುತ್ತಿದ್ದರು ಚಿತ್ರಾ.
ಚಿತ್ರಾರಿಗೆ ಯೋಗಿ ಎಂದು ಕರೆಯಿಸಿಕೊಂಡಾತ ಕಳಿಸಿರುವ ಇ-ಮೇಲ್‌ಗಳು ಅವರ ಬಗ್ಗೆ ಹೊಸ ಸಂಶಯಗಳನ್ನು ಹುಟ್ಟುಹಾಕಿವೆ. 2017ರ ಫೆಬ್ರವರಿಯಲ್ಲಿ ಯೋಗಿ ಕಳಿಸಿದ ಇ-ಮೇಲ್‌ನಲ್ಲಿ, ನಾನು ಮುಂದಿನ ತಿಂಗಳು ಸೀಶೆಲ್‌ಗೆ ಹೊರಡುತ್ತಿದ್ದೇನೆ. ನೀನು (ಚಿತ್ರಾ) ಬರುವುದಾದರೆ ಲಗೇಜ್ ಸಿದ್ಧವಾಗಿಟ್ಟುಕೋ. ಕಾಂಚನಾ, ಭಾರ್ಗವ ಜತೆೆ ಕಂಚನ್ ಲಂಡನ್‌ಗೆ ಹೋಗುವ ಮುನ್ನ ಹಾಗೂ ನೀನು ನಿನ್ನ ಇಬ್ಬರು ಮಕ್ಕಳೊಂದಿಗೆ ನ್ಯೂಜಿಲೆಂಡ್‌ಗೆ ಹೋಗುವ ಮುನ್ನ ನೀನು ಬರಬಹುದು ಎಂದಿದ್ದಾರೆ. ಇಲ್ಲಿ ಕಾಂಚನಾ, ಕಂಚನ್ ಎಂದರೆ ಸುಬ್ರಹ್ಮಣ್ಯನ್ ಹಾಗೂ ಎನ್‌ಎಸ್‌ಇಯ ಚೆನ್ನೈ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರ ಪತ್ನಿ ಇರಬಹುದು ಎನ್ನಲಾಗಿದೆ. ಇನ್ನು, ಮಕ್ಕಳ ವಿಚಾರಕ್ಕೆ ಬರುವುದಾದರೆ, ಎನ್‌ಎಸ್‌ಇ ಆಂತರಿಕ ಮಾಹಿತಿ ಪ್ರಕಾರ ಚಿತ್ರಾರಿಗೆ ಕೇವಲ ಒಬ್ಬ ಮಗಳಿದ್ದಳು. ಆದರೆ ಇ-ಮೇಲ್‌ನಲ್ಲಿ ಇಬ್ಬರು ಮಕ್ಕಳು ಎಂದು ಪ್ರಸ್ತಾವವಾಗಿದೆ. ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೋಡ್ ವರ್ಡ್‌ನಲ್ಲಿ ಬರುತ್ತಿತ್ತು ಸೂಚನೆ!
ಚಿತ್ರಾ, ಯೋಗಿ ನಡುವೆ ಕೋಡ್ ವರ್ಡ್‌ಗಳಲ್ಲಿ ಇ-ಮೇಲ್ ವ್ಯವಹಾರ ನಡೆದಿದೆ. ಎನ್‌ಎಸ್‌ಸಿ ಮುಖ್ಯಸ್ಥರಿಗೆ ಸಲಹೆಗಾರರಾಗಿ ನೇಮಕಗೊಳ್ಳಲು ಅರ್ಹತೆ ಇಲ್ಲದ ಆನಂದ್ ಸುಬ್ರಹ್ಮಣ್ಯನ್ ಅವರನ್ನು ಚಿತ್ರಾ ಅವರು ನೇಮಿಸಿ ಕೊಂಡಿದ್ದಕ್ಕೂ ಇದೇ ಯೋಗಿ ಕಾರಣ ಎನ್ನಲಾಗಿದೆ. ಈ ಕುರಿತಂತೆ ಚಿತ್ರಾಗೆ ಯೋಗಿ ಕಳಿಸಿರುವ ಇ-ಮೇಲ್‌ನಲ್ಲಿ, ನೀರನ್ನು ಹೀರಿಕೊಳ್ಳುವ ಶಕ್ತಿ “ಸ್ಟ್ರಾ’ಗೆ ಇರುತ್ತದೆ. ಕಂಚನ್ ಒಂದು ಸ್ಟ್ರಾ ಇದ್ದಂತೆ, ನಾನು ಹೀರಿಕೊಳ್ಳುವ ಶಕ್ತಿ ಎಂದು ಹೇಳಿದ್ದಾರೆ. ಈ ಮೇಲ್ ಬಂದ ಮೇಲೆ ಆನಂದ್‌ರವರ ನೇಮಕಾತಿಯಾಗಿದೆ. ಕಂಚನ್ ಎಂದರೆ ಆನಂದ್ ಅವರೇ? ಎಂಬ ಪ್ರಶ್ನೆ ಎದ್ದಿದೆ. ಇದಕ್ಕಿನ್ನೂ ಉತ್ತರ ಸಿಕ್ಕಿಲ್ಲ.
Related Articles
ಚಿತ್ರಾರ ಸಲಹೆಗಾರರಾಗಿದ್ದ ಆನಂದ್ ಸುಬ್ರಹ್ಮಣ್ಯನ್ ಅವರನ್ನು ಆ ಸ್ಥಾನಕ್ಕೆ ನೇಮಿಸಿದ್ದು ಯೋಗಿಯ ಸಲಹೆ ಯಿಂದ. ಅವರಿಗೆ ವಾರ್ಷಿಕವಾಗಿ ಕೋಟ್ಯಂತರ ರೂ. ಸಂಬಳ ಕೊಡಿಸಿದ್ದು ಯೋಗಿ! ಇಲ್ಲಿ ಹೆಚ್ಚು ಲಾಭ ಪಡೆದಿರುವುದು ಸುಬ್ರಹ್ಮಣ್ಯನ್. ಹಾಗಾಗಿ ಈ ಸುಬ್ರಹ್ಮಣ್ಯನ್ ಹಾಗೂ ಯೋಗಿ ಇಬ್ಬರೂ ಒಂದೇ ಆಗಿರಬಹುದೇ ಎಂಬ ಅನುಮಾನಗಳೂ ಎದ್ದಿವೆ.
Advertisement