ಚಿತ್ರದುರ್ಗ: ಕೊರೊನಾ ಸೋಂಕು ತಗುಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. “ಉದಯವಾಣಿ’ ಜತೆ ಮಾತನಾಡಿದ ಶಾಸಕರು, ಕಳೆದ ಬಾರಿಗಿಂತ ಈ ಬಾರಿ ಸೋಂಕು ವೇಗವಾಗಿ ಹರಡುತ್ತಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ನಾನು ಸಾಕಷ್ಟು ಎಚ್ಚರ ವಹಿಸಿಯೂ ಯಾವುದೋ ರೂಪದಲ್ಲಿ ವೈರಾಣು ತಗುಲಿದೆ. ಸೂಕ್ತ ಚಿಕಿತ್ಸೆ ಪಡೆದಿದ್ದು, ಭಾನುವಾರ ಡಿಸಾcರ್ಜ್ ಆಗಲಿದ್ದೇನೆ ಎಂದರು. ಸೋಂಕು ತಗುಲಿ ನಾನು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಲೇ ಜಿಲ್ಲೆಯಿಂದ ಸಾಕಷ್ಟು ಜನ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿ ಪ್ರೀತಿ ತೋರಿಸಿದ್ದಾರೆ.
ಹಲವರು ದೇವಸ್ಥಾನಗಳಲ್ಲಿ ಆರೋಗ್ಯ ಚೇತರಿಕೆಗೆ ಪೂಜೆ ಸಲ್ಲಿಸಿರುವುದು ಹೃದಯ ತುಂಬಿ ಬಂದಂತಾಗಿದೆ ಎಂದು ತಿಳಿಸಿದರು. ಸಿರಿಗೆರೆ ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು, ಸಾಣೇಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧಿಧೀಶರು ಕಾಳಜಿ ತೋರಿಸಿದ್ದಾರೆ.
ಸಿರಿಗೆರೆ ಶ್ರೀಗಳು ಆಸ್ಪತ್ರೆಯಲ್ಲಿ ಅವರಿಗೆ ಪರಿಚಯ ವೈದ್ಯರ ಮೂಲಕ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು. ಸವಿತಾ ಸಮಾಜದಿಂದ ಪೂಜೆ: ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ ಜಿಲ್ಲಾ ಸವಿತಾ ಸಮಾಜದಿಂದ ಉಚ್ಚಂಗೆಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್. ಚಂದ್ರಶೇಖರ್, ಗೌರವಾಧ್ಯಕ್ಷ ಸಾಯಿನಾಥ್, ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಆರ್. ಶ್ರೀನಿವಾಸ್, ಉಪಾಧ್ಯಕ್ಷ ಧರ್ಮಣ್ಣ, ಸವಿತಾ ಸಮಾಜದ ಮುಖಂಡರುಗಳಾದ ಘನಶ್ಯಾಮ್, ಆರ್.ನಾಗರಾಜ್ ಮತ್ತಿತರರು ಇದ್ದರು.