Advertisement

ಗ್ರಾಮಾಭ್ಯುದಯಕ್ಕೆ ಸರ್ಕಾರ ಬದ್ಧ: ಚಂದ್ರಪ್ಪ

03:55 PM Feb 21, 2021 | Team Udayavani |

ಹೊಳಲ್ಕೆರೆ: ಸರಕಾರಿ ಸೌಲಭ್ಯಗಳನ್ನು·ನೇರವಾಗಿ ಜನರ ಮನೆ ಬಾಗಿಲಿಗೆ·ತಲುಪಿಸುವ ಉದ್ದೇಶ ಹೊಂದಿರುವಸರಕಾರ, “ಹಳ್ಳಿಯತ್ತ ಜಿಲ್ಲಾಧಿಕಾರಿ·ನಡೆ’ಎನ್ನುವ ವಿನೂತನ ಕಾರ್ಯಕ್ರಮಜಾರಿಗೆ ತಂದಿದೆ. ಪ್ರತಿ ತಿಂಗಳಮೂರನೇ ಶನಿವಾರ ಈ ಕಾರ್ಯಕ್ರಮನಡೆಯಲಿದೆ ಎಂದು ರಾಜ್ಯ ರಸ್ತೆ ಸಾರಿಗೆಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಹೇಳಿದರು.

Advertisement

ತಾಲೂಕಿನ ಮೇಕೆನಹಟ್ಟಿಯಲ್ಲಿತಾಲೂಕು ಅಡಳಿತ ಹಮ್ಮಿಕೊಂಡಿದ್ದ”ಸರ್ಕಾರದ ನಡೆ ಹಳ್ಳಿ ಕಡೆ’ಕಾರ್ಯಕ್ರಮಕ್ಕೆ ಚಾಲನೆ ನೀಡಿಅವರು ಮಾತನಾಡಿದರು. ದೇಶದಬೆನ್ನೆಲುಬಾಗಿರುವ ಹಳ್ಳಿಗಳ ಉದ್ಧಾರಆಗಬೇಕೆಂಬ ಉದ್ದೇಶದಿಂದ ಸರ್ಕಾರಎಲ್ಲಾ ರೀತಿಯ ಸೌಲಭ್ಯಗಳನ್ನು
ಫಲಾನುಭವಿ ಇದ್ದ ಜಾಗಕ್ಕೇ ಹೋಗಿನೀಡುತ್ತಿದೆ. ಇದರಿಂದ ಆಡಳಿತದಲ್ಲಿಪಾರದರ್ಶಕತೆ ಕಾಣಲು ಸಾಧ್ಯ·ಎಂದರು.

ರೈತರು ತಮ್ಮ ಪಹಣಿ ತಿದ್ದುಪಡಿ,ಪಿಂಚಣಿ, ಆಶ್ರಯ ಮನೆ, ಸರಕಾರಿಜಮೀನು ಒತ್ತುವರಿ ತೆರವು, ಸರಕಾರಿಸ್ವತ್ತುಗಳಲ್ಲಿ ಸಸಿ ನೆಡುವುದು,
ಮತದಾರರ ಪಟ್ಟಿ ಪರಿಷ್ಕರಣೆ,ಗುಡಿಸಲು ವಾಸಿಗಳಿಗೆ ಮನೆ ನಿರ್ಮಾಣ,ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆತರುವುದು, ಪೋಡಿ ಮುಕ್ತ ಗ್ರಾಮಮಾಡುವುದು ಸೇರಿದಂತೆ ಹಲವಾರುಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ
ಎಂದು ತಿಳಿಸಿದರು.

ಮೇಕೆನಹಟ್ಟಿ ಸೇರಿದಂತೆಕ್ಷೇತ್ರದಲ್ಲಿರುವ 493 ಹಳ್ಳಿಗಳಿಗೆಇನ್ನೊಂದು ವರ್ಷದಲ್ಲಿ ಶಾಶ್ವತಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು350 ಕೋಟಿ ರೂ. ಅನುದಾನನೀಡಲಾಗಿದೆ. ತಾಲೂಕಿನಲ್ಲಿನ ಕೆರೆಗಳಿಗೆನದಿ ನೀರು ತುಂಬಿಸುವುದು, ಆಶ್ರಯಯೋಜನೆಯಡಿ ಗೊಲ್ಲರಹಟ್ಟಿಗಳಿಗೆ1800 ಮನೆ ನಿರ್ಮಾಣ, 500ಕೋಟಿಯಲ್ಲಿ ರಸ್ತೆಗಳ ನಿರ್ಮಾಣ,ಸಮುದಾಯ ಭವನಗಳು, ವಸತಿಶಾಲೆಗಳ ನಿರ್ಮಾಣ, ಬಸ್‌ ನಿಲ್ದಾಣಗಳ
ನಿರ್ಮಾಣ ಸೇರಿದಂತೆ ಹಲವಾರುಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿಭರದಿಂದ ಸಾಗಿವೆ ಎಂದರು.

ಮೇಕೆನಹಟ್ಟಿಯನ್ನು ತಾಲೂಕಿನಕುಗ್ರಾಮ ಎನ್ನುವ ಕಾರಣದಿಂದವಾಸ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ.ಮೇಕೆನಹಟ್ಟಿಯಿಂದ ಬೇರೆಡೆಸಂಚರಿಸಲು 4.5 ಕೋಟಿ ರೂ. ವೆಚ್ಚದಲ್ಲಿರಸ್ತೆ ನಿರ್ಮಾಣ ಮಾಡಲಾಗಿದೆ.ಮೇಕೆನಹಟ್ಟಿ ಕೆರೆಗೆ ನೀರು ಹರಿಸಲು2 ಕೋಟಿ ರೂ. ವೆಚ್ಚದಲ್ಲಿ μàಡರ್‌ಚಾಲನೆ ಕಾಮಗಾರಿ ನಡೆಯುತ್ತಿದೆ.ಗ್ರಾಮಕ್ಕೆ ಶುದ್ಧ ನೀರಿನ ಘಟಕಅಳವಡಿಸಲಾಗಿದ್ದು, ತಿಮ್ಮಪ್ಪ ದೇವಸ್ಥಾನನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ
ಮಂಜೂರು ಮಾಡಲಾಗಿದೆ. ಇಲ್ಲಿನಎಲ್ಲಾ ಔಋದ್ಧ ತಾಯಂದಿರಿಗೆ ಪಿಂಚಣಿಸೌಲಭ್ಯ, ಶಾಲೆಗೆ ಎರಡು ಕೊಠಡಿ
ನಿರ್ಮಾಣ ಸೇರಿದಂತೆ ಹಲವಾರುಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ.ಈ ಸೌಲಭ್ಯಗಳನ್ನು ಗ್ರಾಮಸ್ಥರು ಸದ್ಬಳಕೆಮಾಡಿಕೊಳ್ಳಬೇಕೆಂದು ಕರೆ ನೀಡಿದರು.ಜಿಪಂ ಸದಸ್ಯ ಎಂ.ಬಿ. ತಿಪ್ಪೇಸ್ವಾಮಿ,ತಾಪಂ ಸದಸ್ಯ ಶಿವಕುಮಾರ್‌, ಗ್ರಾಪಂಅಧ್ಯಕ್ಷ ಹರ್ಷ, ತಹಶೀಲ್ದಾರ್‌ ರಮೇಶ್‌ಆಚಾರ್‌, ತಾಪಂ ಇಒ ಪ್ರಕಾಶ್‌,ಬಿಇಒ ತಿಪ್ಪೇಸ್ವಾಮಿ, ಸಿಡಿಪಿಒ ತಿಪ್ಪಯ್ಯ,ಪಿಎಸ್‌ಐ ಬಾಹುಬಲಿ, ಅರಣ್ಯಾಧಿಕಾರಿ ವಸಂತಕುಮಾರ್‌,ಹಿಂದುಳಿದವರ್ಗಗಳ ಕಲ್ಯಾಣಾಧಿ ಕಾರಿ ಪ್ರದೀಪ್‌,ಇಂಜಿನಿಯರ್‌ ಮಹಾಬಲೇಶ್‌,ಆರ್‌ಐ ಪ್ರಶಾಂತ್‌ ಸೇರಿದಂತೆಹಲವಾರು ಇಲಾಖೆಗಳ ಅಧಿ ಕಾರಿಗಳುಉಪಸ್ಥಿತರಿದ್ದರು.

Advertisement

ಓದಿ :ಹಲ್ಮಿಡಿ ಗ್ರಾಮದಲ್ಲಿ ತಹಶೀಲ್ದಾರ್‌ ವಾಸ್ತವ್ಯ; 30 ಅರ್ಜಿ ಇತ್ಯರ್ಥ

Advertisement

Udayavani is now on Telegram. Click here to join our channel and stay updated with the latest news.

Next