Advertisement

ಶೈಕ್ಷಣಿಕ ಸಾಲ ಮನ್ನಾ ಆಗಲಿ

05:13 PM Feb 18, 2021 | Team Udayavani |

ಚಿತ್ರದುರ್ಗ: ರಾಷ್ಟ್ರೀಕೃತ ಬ್ಯಾಂಕುಗಳಿಂದ ಬಡ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಪಡೆದಿರುವ ಸಾಲವನ್ನು ರಾಜ್ಯ ಸರ್ಕಾರ ಇಲ್ಲವೇ ಆಯಾ ಸಮುದಾಯದ ಅಭಿವೃದ್ಧಿ ನಿಗಮದಿಂದ ಪಾವತಿಸಿ ವಿದ್ಯಾರ್ಥಿಗಳನ್ನು ಸಾಲದಿಂದ ಮುಕ್ತರಾಗಿಸಬೇಕು ಎಂದು ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಮತ್ತು ಪ್ರಗತಿಪರ ಚಿಂತಕ ಸಮುದಾಯಗಳ ಒಕ್ಕೂಟ ಒತ್ತಾಯಿಸಿದೆ.

Advertisement

ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿ ಪ್ರಧಾನ
ಕಾರ್ಯದರ್ಶಿ ಆರ್‌. ನಿಂಗಾ ನಾಯ್ಕ, ಎಂಟತ್ತು ವರ್ಷಗಳ ಹಿಂದೆ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಸಾಲ ಪಡೆದಿರುವ ವಿದ್ಯಾರ್ಥಿಗಳಿಗೆ ಸಾಲ ಮರುಪಾವತಿಸುವಂತೆ ಬ್ಯಾಂಕ್‌ ಗಳು ನೋಟಿಸ್‌ ನೀಡುತ್ತಿವೆ. ಆದರೆ, ಕೊರೊನಾ ಕಾರಣಕ್ಕೆ ಉದ್ಯೋಗ ಕಳೆದುಕೊಂಡಿರುವವರು ಹೇಗೆ ಸಾಲ ಪಾವತಿಸಲು ಸಾಧ್ಯ ಎಂದು ಪ್ರಶ್ನಿಸಿದರು.

ಇದು ಬಡ್ಡಿರಹಿತ ಸಾಲವಾಗಿದ್ದು, ರಾಜ್ಯ ಸರ್ಕಾರ ಅಥವಾ ಆಯಾ ಜಾತಿಯ ಅಭಿವೃದ್ದಿ ನಿಗಮದಿಂದಲೇ ಸಾಲದ ಹಣ ಪಾವತಿಯಾಗಬೇಕು. ಶಿಕ್ಷಣ ಮುಗಿಸಿರುವ ಕೆಲವರು ಬೆಂಗಳೂರಿನ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿ ಜೀವನ ಸಾಗಿಸುತ್ತಿದ್ದರು. ಕೊರೊನಾ ವೈರಸ್‌
ಕಾಣಿಸಿಕೊಂಡಾಗಿನಿಂದಲೂ ತಮ್ಮ ತಮ್ಮ ಊರುಗಳಿಗೆ ಬಂದು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಈ ನಿಟ್ಟಿನಲ್ಲಿ ಬ್ಯಾಂಕ್‌
ಗಳು ಸಾಲ ಮರುಪಾವತಿಸುವಂತೆ ಪೀಡಿಸಬಾರದೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ಮೂಲಕ ವಿವಿಧ ಸಮುದಾಯದ ಅಭಿವೃದ್ಧಿ ನಿಗಮಗಳಿಗೆ ಮಂಜೂರು ಮಾಡಲಾಗಿರುವ ಹಣ ಖರ್ಚಾಗದೆ ಕೊಳೆಯುತ್ತಿದೆ. ಅಂತಹ ಹಣವನ್ನೆಲ್ಲಾ ಕ್ರೋಢೀಕರಿಸಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಬ್ಯಾಂಕ್‌ಗಳಲ್ಲಿ ಪಡೆದುಕೊಂಡಿರುವ ಸಾಲಕ್ಕೆ ಜಮಾ ಮಾಡಬೇಕು. ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಹಣ ಮೀಸಲಿಡಬೇಕು.

ಈ ಸಂಬಂಧ ಎಲ್ಲಾ ತಾಂಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಿಗೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈವರೆಗೆ ಉತ್ತರ ಬಂದಿಲ್ಲ ಎಂದರು.
ರೈತ ಮುಖಂಡ ಲಕ್ಷ್ಮೀಕಾಂತ್‌ ಮಾತನಾಡಿ, ಬಡ ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ರಾಜ್ಯ ಸರ್ಕಾರ ಹಾಗೂ ವಿವಿಧ ಜಾತಿಗಳ ಅಭಿವೃದ್ಧಿ ನಿಗಮಗಳು ಪಾವತಿಸಿ ವಿದ್ಯಾರ್ಥಿಗಳನ್ನು ಸಾಲದಿಂದ ಮುಕ್ತಿಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ
ಪ್ರತಿಭಟನೆ ನಡೆಸಲಾಗುವುದು ಎಂದರು.

Advertisement

ಕರ್ನಾಟಕ ಮಾನವ ಹಕ್ಕುಗಳ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಎಸ್‌.ಬಿ. ಲೋಕೇಶ್‌, ಅಬ್ದುಲ್‌ ರೆಹಮಾನ್‌, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಲ್‌. ರಮೇಶ್‌, ವಿ. ಮಹಾಂತೇಶ್‌, ಈ. ಮಾರುತಿ, ಷಣ್ಮುಖಪ್ಪ, ಅಂಬೇಡ್ಕರ್‌ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್‌ ತಾಳಿಕೆರೆ, ತಿಪ್ಪೇಸ್ವಾಮಿ, ಶಶಿಕಿರಣ್‌, ಎನ್‌ .ಜಯರಾಮ್‌, ಬಂಜಾರ ಸಮಾಜದ ಯುವ ಮುಖಂಡ ತಿಪ್ಪೇಸ್ವಾಮಿ ಇದ್ದರು.

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

Advertisement

Udayavani is now on Telegram. Click here to join our channel and stay updated with the latest news.

Next