Advertisement

ಪೊಲೀಸರಿಗೆ ಸೇವಾ ಮನೋಭಾವ ಅಗತ್ಯ

06:40 PM Feb 08, 2021 | Team Udayavani |

ಚಿತ್ರದುರ್ಗ: ಸಂಬಳ ಮತ್ತಿತರೆ ಸೌಲಭ್ಯಗಳ ಆಸೆಗಾಗಿ ಪೊಲೀಸ್‌ ಇಲಾಖೆಗೆ ಸೇರಿದರೆ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು
ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಜಿ. ರಾ ಧಿಕಾ ಹೇಳಿದರು.

Advertisement

ಕರ್ನಾಟಕ ರಾಜ್ಯ ಪೊಲೀಸ್‌ ಹಾಗೂ ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಸಹಯೋಗದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರ ಸೇವೆ ಮಾಡಲು, ನೊಂದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಪೊಲೀಸ್‌ ಇಲಾಖೆಗೆ ಬರಬೇಕು. ಇದರಿಂದ ಸಾರ್ಥಕತೆಯ ಭಾವ ಮೂಡುತ್ತದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳು ತಮ್ಮ ಕರ್ತವ್ಯದೊಂದಿಗೆ ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಬೇಕು. ಅಧ್ಯಯನ, ದೈಹಿಕ ಚಟುವಟಿಕೆ, ಧ್ಯಾನ ಮಾಡುವುದರಿಂದ ಕರ್ತವ್ಯ ಹಾಗೂ ಪರೀಕ್ಷೆಗೂ ಅನುಕೂಲವಾಗಲಿದೆ. ತರಬೇತಿ ಕಾರ್ಯಾಗಾರದಲ್ಲಿ ನೀಡುವ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಗ್ರಹಿಸಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉಪನ್ಯಾಸ ಕೊಡಿಸುತ್ತಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯ ಪುಸ್ತಕಗಳನ್ನು ಹಾಗೂ ಮಾಹಿತಿಯನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ ಒದಗಿಸುತ್ತೇವೆ. ಎಲ್ಲವನ್ನೂ ಸದುಪಯೋಗ ಮಾಡಿಕೊಂಡಲ್ಲಿ ಯಶಸ್ವಿಯಾಗಬಹುದು ಎಂದು ತಿಳಿಸಿದರು.

ಜಿಲ್ಲಾ ಅಬಕಾರಿ ಇಲಾಖೆ ಅ ಧೀಕ್ಷಕ ನಾಗಶಯನ ಮಾತನಾಡಿ, ಈ ಪರೀಕ್ಷೆಗೆ ಸು ದೀರ್ಘ‌ ಕಾಲ ಓದುವ ಅವಶ್ಯಕತೆ ಇಲ್ಲ, ದಿನಕ್ಕೆ ಎರಡರಿಂದ
ಮೂರು ಗಂಟೆಗಳ ಕಾಲ ಶ್ರದ್ಧೆ, ಆಸಕ್ತಿಯಿಂದ ಓದಿದರೆ ಸಾಕು. ನಿಮ್ಮ ವೃತ್ತಿಯ ಜತೆಗೆ ಇಂತಿಷ್ಟು ಸಮಯ ನಿಗ  ಮಾಡಿಕೊಂಡು ಓದಬೇಕು ಎಂದು ಸಲಹೆ ನೀಡಿದರು.

Advertisement

ಸಂಪನ್ಮೂಲ ವ್ಯಕ್ತಿ ಮಂಜುನಾಥ ಬಡಗಿ ಮಾತನಾಡಿ, ಕರ್ನಾಟಕದ ಯಾವ ಜಿಲ್ಲೆಯಲ್ಲೂ ಪಿಎಸ್‌ಐ ಸೇರಿದಂತೆ ಪೊಲೀಸ್‌ ವೃತ್ತಿಯವರಿಗೆ
ಸಂಬಂ ಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಆಯೋಜಿಸಿದ ಉದಾಹರಣೆಗಳಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ
ಮೊದಲ ಬಾರಿಗೆ ಈ ರೀತಿಯ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಿ ಎಂದರು. ಡಿವೈಎಸ್‌ಪಿ
ಮೃತ್ಯುಂಜಯ ಮತ್ತಿತರರು ಉಪಸ್ಥಿತರಿದ್ದರು. ಪರೀಕ್ಷೆಗೆ ನೋಂದಾಯಿಸಿರುವ ಜಿಲ್ಲೆಯ ನೂರಾರು ಅಭ್ಯರ್ಥಿಗಳು ಭಾಗವಹಿಸಿದ್ದರು.

ಓದಿ: ಪಾಲಿಕೆಯ ಕಡತಗಳನ್ನು ಕಚೇರಿಯಿಂದ ಹೊರಗೆ ಕೊಂಡು ಹೋದರೆ ಕ್ರಿಮಿನಲ್ ಕೇಸ್: BBMP ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next