Advertisement

ಸಹಕಾರ ಮನೋಭಾವದಿಂದ ಜೀವನ ನಡೆಸಿ: ಶ್ರೀ

03:11 PM Feb 06, 2021 | Team Udayavani |

ಚಿತ್ರದುರ್ಗ: ಸತಿ-ಪತಿಗಳು ಅನ್ಯೂನ್ಯತೆ ಹಾಗೂ ಸಹಕಾರ ಮನೋಭಾವದಿಂದ ಸಾಗಿದಾಗ ಬದುಕಿನಲ್ಲಿ ನೆಮ್ಮದಿ ಕಾಣಲು
ಸಾಧ್ಯ ಎಂದು ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ತಿಳಿಸಿದರು.

Advertisement

ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ನಡೆದ 31ನೇ ವರ್ಷದ 2ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ಬಸವಾದಿ ಪ್ರಮಥರ ನಾಡಿನಲ್ಲಿ ಹುಟ್ಟಿರುವ ನಾವೆಲ್ಲ ಧನ್ಯರು. ಮುರುಘಾ ಶರಣರು ಇಂತಹ ಶ್ರೇಷ್ಠ ಕಾರ್ಯಗಳನ್ನು ಮಾಡುತ್ತಿರುವುದು ಪುಣ್ಯದ ಕೆಲಸ. ಶ್ರೀಗಳು 31 ವರ್ಷಗಳಿಂದ ನಿರಂತರವಾಗಿ ಈ
ಕಾರ್ಯಕ್ರಮ ನಡೆಸಿಕೊಂಡು ಬಂದಿರುವುದು ಸಾಮಾನ್ಯ ಮಾತಲ್ಲ ಎಂದರು.

ವಿಧಾನಸಭೆ ಉಪಾಧ್ಯಕ್ಷ ಆನಂದ ವಿ. ಮಾಮನಿ ಮಾತನಾಡಿ, ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಹರಿಕಾರರು ಮುರುಘಾ ಶರಣರು.
ನಮ್ಮ ಸರ್ಕಾರ ಮುರುಘರಾಜೇಂದ್ರ ವಿಶ್ವವಿದ್ಯಾನಿಲಯವನ್ನು ಮಂಜೂರು ಮಾಡಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ. ಶರಣರ ಆಶಯದಂತೆ ಮುರುಘಾ ಮಠ ಬಸವತತ್ವವನ್ನು ಮುಂದುವರಿಸಿಕೊಂಡು
ಹೋಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೀವನಮೂರ್ತಿ ಮಾತನಾಡಿ, ಸರಳ ಸಾಮೂಹಿಕ ವಿವಾಹವು ಎಲ್ಲರಿಗೂ ಮಾದರಿಯಾಗಿದೆ. ದುಂದುವೆಚ್ಚ ಮಾಡದೆ ಇಂತಹ ವಿವಾಹಗಳಲ್ಲಿ ಭಾಗವಹಿಸಿ ಆ ಹಣವನ್ನು ಯಾವುದಾದರೂ ಉದ್ಯೋಗ ಅಥವಾ ಜೀವನ ರೂಪಿಸಿಕೊಳ್ಳಲು ಬಳಸಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ 14 ಜೋಡಿಗಳು ವಿವಾಹವಾದರು. ಕೆಇಬಿ ಷಣ್ಮುಖಪ್ಪ, ಪೈಲ್ವಾನ್‌ ತಿಪ್ಪೇಸ್ವಾಮಿ ಮತ್ತಿತರರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

ಓದಿ : ­ತೆರಿಗೆ ಸಂಗ್ರಹ ಗುರಿ ಸಾಧಿಸಲು ಗ್ರಾಪಂಗಳಿಗೆ ಡೆಡ್‌ಲೈನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next