Advertisement

ಪೊಲೀಸರು ಜನರ ಸಮಸ್ಯೆಗೆ ಸ್ಪಂದಿಸಲಿ

05:14 PM Jan 31, 2021 | Team Udayavani |

ಚಿತ್ರದುರ್ಗ: ಸಾರ್ವಜನಿಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿ ಅವರ ಪ್ರೀತಿ ವಿಶ್ವಾಸ ಗಳಿಸಿ. ಅಧಿ ಕಾರವನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದು ಪೊಲೀಸ್‌ ಮಹಾನಿರ್ದೇಶಕ (ತರಬೇತಿ) ಪದಮ್‌ ಕುಮಾರ್‌ ಗರ್ಗ್‌ ಕಿವಿಮಾತು ಹೇಳಿದರು.

Advertisement

ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶನಿವಾರ 5ನೇ ತಂಡದ ಸಿಪಿಸಿ ಮತ್ತು 2ನೇ ತಂಡದ ಎಪಿಸಿ ಮತ್ತು ಕೆಎಸ್‌ಐಎಸ್‌ಎಫ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಗಳ ನಿರ್ಗಮನ ಪಥ ಸಂಚಲನದಲ್ಲಿ ಅವರು ಮಾತನಾಡಿದರು.

ಪ್ರಶಿಕ್ಷಣಾರ್ಥಿಗಳು ಪೊಲೀಸ್‌ ಸೇವೆಗೆ ಸೇರಿದ ನಂತರ ದೇಶದ ಶೇ. 3 ರಷ್ಟು ವಿಶಿಷ್ಟ ವ್ಯಕ್ತಿಗಳ ಸಾಲಿಗೆ ತಾವು ಸೇರಿಕೊಳ್ಳುತ್ತೀರಿ. ಇಲಾಖೆಯಿಂದ ಹಲವು ಸೌಲಭ್ಯ ನೀಡಲಾಗುತ್ತಿದೆ. ಹಾಗಾಗಿ ಇಲಾಖೆಗೆ ಉತ್ತಮ ಸೇವೆ ಸಲ್ಲಿಸಬೇಕು. ಇಲ್ಲಿ ತೆಗೆದುಕೊಳ್ಳುವ ಪ್ರತಿಜ್ಞೆ ಕೇವಲ ಶಬ್ದವಲ್ಲ, ಪ್ರತಿಜ್ಞೆಯ ಪ್ರತಿ ಪದವನ್ನು ಯೋಚಿಸಿ ಅರ್ಥ ಮಾಡಿಕೊಂಡು ವೃತ್ತಿ ಜೀವನದಲ್ಲಿ ಅನುಸರಿಸಬೇಕು ಎಂದರು.

ಐಮಂಗಲ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲ ಪಿ. ಪಾಪಣ್ಣ ಮಾತನಾಡಿ, ಪೊಲೀಸ್‌ ತರಬೇತಿ ಶಾಲೆ ಕಾಯಂ ತರಬೇತಿ ಶಾಲೆಯಾಗಿ ಕಾರ್ಯಾರಂಭಗೊಂಡ ನಂತರದಿಂದ ಒಟ್ಟು 4 ತಂಡಗಳಲ್ಲಿ 1317 ನಾಗರಿಕ ಪೊಲೀಸ್‌ ಕಾನ್‌ ಸ್ಟೇಬಲ್‌ಗ‌ಳಿಗೆ ಮತ್ತು 1ನೇ ತಂಡದಲ್ಲಿ 363 ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳಿಗೆ ವೃತ್ತಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ನೀಡಲಾಗಿದೆ. ಪ್ರಸ್ತುತ 280 ಪ್ರಶಿಕ್ಷಣಾರ್ಥಿಗಳು 8 ತಿಂಗಳ ಕಾಲ ಎಲ್ಲರೂ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಕೊರೊನಾ ಭಯದ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಯಾವ ಪ್ರಶಿಕ್ಷಣಾರ್ಥಿಗೂ ಕೋವಿಡ್‌ ರೋಗ ಲಕ್ಷಣಗಳು ಬರದಂತೆ ನೋಡಿಕೊಳ್ಳಲಾಗಿದೆ. ಇಲ್ಲಿಯವರೆಗೆ ಒಟ್ಟು 1960
ಪ್ರಶಿಕ್ಷಣಾರ್ಥಿಗಳಿಗೆ ವೃತ್ತಿ ಬುನಾದಿ ತರಬೇತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪೊಲೀಸ್‌ ಮಹಾನಿರೀಕ್ಷಕ (ತರಬೇತಿ) ಪಿ. ಹರಿಶೇಖರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಜಿ. ರಾ ಧಿಕಾ ಸೇರಿದಂತೆ ಇತರೆ ಪೊಲೀಸ್‌ ಅ ಧಿಕಾರಿ, ಸಿಬ್ಬಂದಿ  ಭಾಗವಹಿಸಿದ್ದರು.

Advertisement

ಓದಿ : ಭಾಷಾ ಉಳಿವಿನ ಚಿಂತನೆ ಅಗತ್ಯ

Advertisement

Udayavani is now on Telegram. Click here to join our channel and stay updated with the latest news.

Next